ಹೊಸದಿಲ್ಲಿ: ಕೊರೋನಾ ವೈರಸ್ ನಿಂದಾಗಿ ಇಡೀ ವಿಶ್ವವೇ ತತ್ತರಿಸಿ ಹೋಗುತ್ತಿದೆ. ಅದೇ ರೀತಿ ಭಾರತದಲ್ಲೂ ಕೂಡ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇದಕ್ಕೆ ನಾನಾ ಸಿನಿಮಾ ತಾರೆಯರು, ಉದ್ಯಮಿಗಳು, ಹಾಗೂ ಆಟಗಾರರು ತಮ್ಮ ಶಕ್ತಿಯಾನುಸಾರ ಕೋವಿಡ್-19 ನಿಧಿಗೆಯನ್ನು ದೇಣಿಗೆಯನ್ನು ಕೊಡುತ್ತಲೇ ಇದ್ದಾರೆ. ಅದೇ ರೀತಿ ಭಾರತದ ಅತೀದೊಡ್ಡ ಉದ್ಯಮಿಯೊಬ್ಬರು ಕೊವಿಡ್ ಪರಿಹಾರ ನಿಧಿಗೆ 500 ಕೋಟಿ ದೇಣಿಗೆಯನ್ನು ನೀಡಿದ್ದಾರೆ. ಅಷ್ಟಕ್ಕೂ ಆ ಉದ್ಯಮಿ ಯಾರು ಗೊತ್ತಾ?

 

ಭಾರತಕ್ಕೆ ಹೆಮ್ಮಾರಿಯಂತೆ ಹರಡಿರುವ ಕೋವಿಡ್-19ವೈರಸ್ ಇಡೀ ಭಾರತೀಯರನ್ನು ನಲುಗುವಂತೆ ಮಾಡಿದೆ ಅಪಾರ ಪ್ರಮಾಣದ ಸೋಂಕಿತರನ್ನು ಈಗಾಗಲೇ ಗುರುತಿಸಲಾಗಿದೆ ಇವರೆಲ್ಲರ ಚಿಕಿತ್ಸೆಗಾಗಿ ಹಾಗೂ ಲಾಕ್ ಡೌನ್ ಹಿನ್ನಲೆಯಲ್ಲಿ ಸಾಕಷ್ಟು ಎಲ್ಲಾ ಸೇವೆಗಳು ಬಂದ್ ಆಗಿದ್ದು ಬಡವರಿಗೆ, ನಿರಾಶ್ರಿತರಿಗೆ, ಕೂಲಿ ಕಾರ್ಮಿಕರಿಗೆ, ಅಗತ್ಯ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ. ಇವುಗಳನ್ನು ಪೂರೈಸಲು ಸಾಕಷ್ಟು ಹಣದ ಅವಶ್ಯಕತೆ ಇರುವುದರಿಂದ ಏಕವ್ಯಕ್ತಿಯಾಗಿ ಸರ್ಕಾರ ಇವುಗಳನ್ನು ಪೂರೈಸಲು ಸಾಧ್ಯವಿಲ್ಲ ಹಾಗಾಗಿ ಇದಕ್ಕೆ ಸಿನಿಮಾ ತಾರೆಗಳು, ಉದ್ಯಮಿಗಳ ಸಹಕಾರ ಅಗತ್ಯವಿದೆ ಅದೇ ರೀತಿ ಎಲ್ಲರೂ ಸಹಕರಿಸುತ್ತಿದ್ದಾರೆ.

 

ಅದೇ ರೀತಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿಯವರು ಪ್ರಧಾನ ಮಂತ್ರಿಯವರ ಕೋವಿಡ್-19 ನಿಧಿಗೆ 500 ಕೋಟಿ ರೂ. ದೇಣಿಗೆ ನೀಡುವ ವಾಗ್ದಾನ ಮಾಡಿದ್ದಾರೆ.

 

ಭಾರತದ ಮೊಟ್ಟಮೊದಲ ಬಹುಕೋಟಿ ಯೋಜನೆಯಾದ ಕೊರೋನ ವೈರಸ್ ಆಸ್ಪತ್ರೆ ಸ್ಥಾಪನೆ, ಅಗತ್ಯವಿರುವವರಿಗೆ ಊಟ ಮತ್ತು ತುರ್ತು ವಾಹನಗಳಿಗೆ ಇಂಧನ ಒದಗಿಸುವ ನಿರ್ಧಾರವನ್ನು ಈ ಮೊದಲೇ ಅಂಬಾನಿ ಘೋಷಿಸಿದ್ದರು.

 

ಪ್ರಧಾನಿ ನಿಧಿಗೆ ನೆರವು ನೀಡುವ ಜತೆಗೆ ಮಹಾರಾಷ್ಟ್ರ ಹಾಗೂ ಗುಜರಾತ್ ಸರ್ಕಾರಗಳಿಗೆ ಕೋವಿಡ್-೧೯ ವಿರುದ್ಧದ ಹೋರಾಟಕ್ಕಾಗಿ ತಲಾ5 ಕೋಟಿ ರೂಪಾಯಿಗಳನ್ನು ನೀಡಲಾಗಿದೆ ಎಂದು ಕಂಪನಿಯ ಪ್ರಕಟಣೆ ಹೇಳಿದೆ.

 

ಕೊರೋನ ದಾಳಿಯ ವಿರುದ್ಧ ದೇಶದ ಹೋರಾಟಕ್ಕೆ ಕೈಜೋಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮಾಡಿದ ಮನವಿಗೆ ಸ್ಪಂದಿಸಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) 50೦ ಕೋಟಿ ರೂಪಾಯಿ ದೇಣಿಗೆ ಘೋಷಿಸುತ್ತಿದೆ ಎಂದು ಪ್ರಕಟಣೆ ವಿವರಿಸಿದೆ.

 

ಕೊರೋನ ದಾಳಿಯಿಂದ ಎದುರಾಗಿರುವ ದೊಡ್ಡ ಸವಾಲಿನ ವಿರುದ್ಧ ಗೆಲುವು ಸಾಧಿಸಲು ಅನುವಾಗುವಂತೆ ಹೋರಾಟಕ್ಕೆ ಶಕ್ತಿ ತುಂಬುವ ನಿಟ್ಟಿನಲ್ಲಿ ತಳಮಟ್ಟದಲ್ಲಿ ಹಗಲು ರಾತ್ರಿ ಶ್ರಮಿಸುತ್ತಿದೆ. ದೇಶ ಸರ್ವಸನ್ನದ್ಧತೆ, ಆಹಾರ, ಪೂರೈಕೆ, ಸುರಕ್ಷತೆ ಮತ್ತು ಸಂಪರ್ಕಕ್ಕೆ ಅಗತ್ಯ ನೆರವು ನೀಡುತ್ತಿದೆ ಎಂದು ಕಂಪನಿ ಹೇಳಿದೆ.

 

Find out more: