ಪತಂಜಲಿ. ಇದು ಒಂದು ಸ್ವದೇಶಿ ಆಯುರ್ವೇಧಿಕ್ ಉತ್ಪನ್ನಗಳ ಒಂದು ಸಂಸ್ಥೆ. ಈ ಸಂಸ್ಥೆಯಿಂದ ತಯಾರಾಗಿ ಬರುವಂತಹ ಪ್ರತಿಯೊಂದು ವಸ್ತುಗಳಿಗೂ ಕೂಡ ದೇಶದಲ್ಲಿ ಬಹಳ ಬೇಡಿಕೆ ಇದೆ. ಒಂದು ಕಾಲದಲ್ಲಿ ಪತಂಜಲಿ ವಸ್ತಗಳಿಗೆ ಅತ್ಯಧಿಕವಾಗಿ ಜಾಹಿರಾತುಗಳನ್ನು ನೀಡಿ ಇಡೀ ರಾಷ್ಟ್ರವ್ಯಾಪಿ ತಲುಪುವಂತೆ ಮಾಡಲಾಗಿತ್ತು. ಆದರೆ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಪತಂಜಲಿ ಹೆಸರನ್ನು ಬ್ರಾಂಡ್ ಮಾಡಲು ಒಂದು ಯೋಜನೆಯೊಂದನ್ನು ಹಾಕಿಕೊಂಡಿದೆ. ಅಷ್ಟಕ್ಕೂ ಪತಂಜಲಿ ಸಂಸ್ಥೆ ಆಕಿಕೊಂಡ ಆ ಯೋಜನೆ ಏನು ಗೊತ್ತಾ..?
ಯೋಗಗುರು ಬಾಬಾ ರಾಮ್‌ದೇವ್ ನೇತೃತ್ವದ ಪತಂಜಲಿ ಸಂಸ್ಥೆ ಐಪಿಎಲ್ ಟೈಟಲ್ ಸ್ಪಾನ್ಸರ್ ಸ್ಪರ್ಧಾಕಣಕ್ಕೆ ಇಳಿ ಯುವುದಾಗಿ ಹೇಳಿದೆ. ಪತಂಜಲಿ ಆಯುರ್ವೇದೀಯ ಸಂಸ್ಥೆಯನ್ನು ಜಾಗತಿಕ ಬ್ರಾಂಡ್ ಆಗಿ ಪರಿವರ್ತಿಸುವ ಉದ್ದೇಶ ಹೊಂದಿರುವುದರಿಂದ ಅದು ಈ ಕ್ರಮಕ್ಕೆ ಮುಂದಾಗಿದೆ.
ಒಂದು ವೇಳೆ ಇದು ಸಾಧ್ಯವಾದರೆ ಯಾರಿಗೂ ನಷ್ಟವಿಲ್ಲದ ರೀತಿಯಲ್ಲಿ ಸಮಸ್ಯೆ ಬಗೆಹರಿದಂತಾಗುತ್ತದೆ. ಸದ್ಯ ಬಿಸಿಸಿಐಗೆ ತುರ್ತಾಗಿ ಒಬ್ಬರು ಶೀರ್ಷಿಕೆ ಪ್ರಾಯೋಜಕರು ಬೇಕು. ಪತಂಜಲಿಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮಿಂಚಲು ಸೂಕ್ತ ವೇದಿಕೆ ಬೇಕು. ಇದಕ್ಕೆ ಐಪಿಎಲ್‌ಗಿಂತ ಸೂಕ್ತ ವೇದಿಕೆ ಇನ್ನಾವುದಿರಲು ಸಾಧ್ಯ?
ಪತಂಜಲಿಗೇಕೆ ಆಸಕ್ತಿ?
ಸೋಪ್, ಬ್ರಷ್, ಆಹಾರ ಪದಾರ್ಥ, ಔಷಧ ಸೇರಿದಂತೆ ಹಲವಾರು ಉತ್ಪನ್ನಗಳನ್ನು ತಯಾರಿಸಿ ಮಾರುತ್ತಿರುವ ಪತಂಜಲಿ ಸಂಸ್ಥೆ, ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಬೃಹತ್ ಬ್ರಾಂಡ್ ಆಗಿ ಬೆಳೆಯುತ್ತಿದೆ. ಆದರೆ ಕಳೆದೆರಡು ವರ್ಷಗಳಿಂದ ಅದರ ಬಿಸ್ಕಿಟ್ ಹಾಗೂ ನೂಡಲ್ಸ್ ಮಾದರಿಯ ಪದಾರ್ಥಗಳ ಮಾರಾಟ ತಗ್ಗಿದೆ. ಗುಣಮಟ್ಟ ಕಡಿಮೆ ಆಗಿರುವುದು ಇಲ್ಲಿ ಸಮಸ್ಯೆ ಯಾಗಿದೆ ಎಂದು ಮೂಲಗಳು ವರದಿ ಮಾಡಿವೆ.ಕಳೆದುಕೊಂಡ ಈ ವರ್ಚಸ್ಸನ್ನು ಐಪಿಎಲ್ ಮೂಲಕ ಹೆಚ್ಚಿಸಿಕೊಳ್ಳಲು ಸಾಧ್ಯ, ಹಾಗೆಯೇ ಜಾಗತಿಕವಾಗಿ ಕಂಪೆನಿಯನ್ನು ಜನಪ್ರಿಯಗೊಳಿಸಲೂ ಅವಕಾಶವಿದೆ ಎಂಬುದು ಪತಂಜಲಿ ಲೆಕ್ಕಾಚಾರ. ಮೂಲಗಳ ಪ್ರಕಾರ ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವ ವಹಿಸಲು ಟಾಟಾ ಸಮೂಹ, ಅದಾನಿ ಸಮೂಹ, ರಿಲಯನ್ಸ್ ಜಿಯೋ, ಅಮೆಜಾನ್, ಬೈಜುಸ್ ಆಸಕ್ತಿ ತೋರಿವೆ.
ಶೇ. 50 ರಿಯಾಯಿತಿ
ಬಿಸಿಸಿಐ ಶೀರ್ಷಿಕೆ ಪ್ರಾಯೋ ಜಕರಿಗೆ ಶೇ. 50ರಷ್ಟು ರಿಯಾಯಿತಿಯನ್ನೂ ನೀಡಲಿದೆ. ಅಲ್ಲದೇ ಪೂರ್ಣ ಪ್ರಮಾಣದ ಟೆಂಡರ್ ಕರೆಯದೆ, ಆಸಕ್ತಿ ತೋರುವವರ ನಡುವೆ ಆಯ್ಕೆ ಮಾಡುವ ಸಾಧ್ಯತೆಯಿದೆ.
ಐಪಿಎಲ್ಗೆ ಸರಕಾರದ ಅಧಿಕೃತ ಒಪ್ಪಿಗೆ
ಈ ಬಾರಿಯ ಐಪಿಎಲ್ ಕೂಟವನ್ನು ಯುಎಇಯಲ್ಲಿ ನಡೆಸಲು ಬಿಸಿಸಿಐಗೆ ಅಧಿಕೃತ ಒಪ್ಪಿಗೆ ಸಿಕ್ಕಿದೆ. ಕೇಂದ್ರ ಸರಕಾರ ಲಿಖೀತ ರೂಪದಲ್ಲಿ ಅನುಮತಿ ನೀಡಿರುವುದಾಗಿ ಐಪಿಎಲ್ ಮುಖ್ಯಸ್ಥ ಬ್ರಜೇಶ್ ಪಟೇಲ್ ತಿಳಿಸಿದ್ದಾರೆ. ಕಳೆದ ವಾರ ಕೇಂದ್ರ ಸರಕಾರ ತಾತ್ವಿಕ ಒಪ್ಪಿಗೆ ನೀಡಿತ್ತು.