ನವದೆಹಲಿ: ಇಡೀ ವಿಶ್ವವೇ ಕೊರೋನಾ ವೈರಸ್‌ನಿಂದ ತತ್ತರಿಸಿ ಹೋಗಿದೆ ಇದರಿಂದಾಗಿ ವಿಶ್ವದ ಜನತೆಯಲ್ಲಿ ಈ ಕೊರೋನಾ ಯಾವಾಗ ಪ್ರಪಂಚದಿಂದ ಹೋಗುತ್ತದೋ ಎಂದು ಬಯಕೆ ಶುರುವಾಗಿದೆ. ಇದರ ಸಂಶೋಧನೆಯಲ್ಲಿಯೇ ತೊಡಗಿಕೊಂಡಿರುವ ವಿಜ್ಞಾನಿಗಳು ಭಾರತೀಯರ ಪಾಲಿಗೆ ಶುಭ ಸಮಾಚಾರವನ್ನು ನೀಡಿದ್ದಾರೆ ಅಷ್ಟಕ್ಕೂ ಆ ಶುಭಸಮಾಚಾರ ಯಾವುದು ಗೊತ್ತಾ ಇಲ್ಲಿದೆ ನೋಡಿ.

 

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ ಸದ್ಯದ ಗುಡುಗು ಸಹಿತ ಮಳೆಯಂತಹ ಚಟುವಟಿಕೆಯಿಂದಾಗಿ ತಾಪಮಾನವು 2 ರಿಂದ 4 ಡಿಗ್ರಿ ಸೆಲ್ಸಿಯಸ್ ಇದೆ. ಈ ವಾರ ದೇಶದ ಬಹುತೇಕ ಭಾಗಗಳಲ್ಲಿ ಇದೇ ವಾತಾವರಣ ಮುಂದುವರಿದಿದೆ.  ಏಪ್ರಿಲ್ ಆರಂಭದಿಂದ ಬೇಸಿಗೆ ಕಾಲ ಆರಂಭವಾಗಲಿದ್ದು, ಕರೊನಾ ವೈರಸ್ ಹರಡುವಿಕೆಯನ್ನು ತಗ್ಗಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

                                                                                                                                                                                                                                                                                                                                                                                                                                                                                                                                                                   ಈ ಬಗ್ಗೆ ಸರ್ಕಾರ ಮತ್ತು ವಿಜ್ಞಾನಿಗಳು ತುಂಬಾ ಭರವಸೆ ಇಟ್ಟಿದ್ದು, ಇದರೊಟ್ಟಿಗೆ 21 ದಿನಗಳ ಲಾಕ್ಡೌನ್ ಏಪ್ರಿಲ್ ಮಧ್ಯಭಾಗದಲ್ಲಿ ಕೊನೆಗೊಳ್ಳುವುದರಿಂದ, ಇದೂ ಕೂಡ ಭಾರತೀಯರ ಪಾಲಿಗೆ ವರವಾಗಲಿದೆ. ವೈರಸ್ ಹರಡುವಿಕೆ ನಿಧಾನವಾಗಿ ಕೊನೆಗೊಳ್ಳುವ ಸಾಧ್ಯತೆ ಇದೆ ಎಂಬ ಬಲವಾದ ನಂಬಿಕೆಯನ್ನು ಹೊಂದಿದ್ದಾರೆ.

 

ಪಶ್ಚಿಮ ಕರಾವಳಿ ಪ್ರದೇಶದಲ್ಲಿ ವಾಯುಭಾರ ಕುಸಿತದಿಂದಾಗಿ ಈ ವಾರ ಕೆಲವಡೆ ಭಾರಿ ಪ್ರಮಾಣದ ಗುಡುಗುಸಹಿತ ಮಳೆಯನ್ನು ಹೊತ್ತು ತಂದಿದೆ. ಬೆಟ್ಟ-ಗುಡ್ಡಗಳ ಮೇಲೆ ಹಿಮ ಬಿದ್ದಿರುವುದರಿಂದ ಸಹಜವಾಗಿಯೇ ತಾಪಮಾನ ವಾರದ ಆರಂಭದಲ್ಲೆ ಇಳಿಕೆಯಾಗಿದೆ. ಮತ್ತೊಂದು ಸುತ್ತಿನ ಗುಡುಗು ಸಹಿತ ಮಳೆ ಮಾರ್ಚ್ ೩೦ರೊಳಗೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞ ಮಹೇಶ್ ಪಾಲಾವತ್ ಹೇಳಿದ್ದಾರೆ.

 

ಕೆಲವು ಅಧ್ಯಯನಗಳ ಪ್ರಕಾರ ಹೊಸ ಕರೊನಾ ವೈರಸ್ಗಳಲ್ಲಿ ಕಾಲೋಚಿತತೆಯನ್ನು ಗುರುತಿಸಲಾಗಿದ್ದು, ಶತಮಾನಗಳಿಂದ ಮಾನವರಲ್ಲಿ ಚಾಲ್ತಿಯಲ್ಲಿರುವ ಅದರ ಆನುವಂಶಿಕ ಗುಣಗಳು ಕಂಡುಬಂದಿದೆ. ಹೀಗಾಗಿ ಇವುಗಳು ಡಿಸೆಂಬರ್ ಮತ್ತು ಏಪ್ರಿಲ್ ನಡುವೆ ಹೆಚ್ಚು ಆವಿಯಾಗುವ ಸಾಧ್ಯತೆ ಇದೆ. ಈ ಒಂದು ಕಾರಣದಿಂದಾಗಿ ಮೇ ಮತ್ತು ಜೂನ್ ತಿಂಗಳಿನಲ್ಲಿ ಪ್ರಸ್ತುತ ಇರುವ ಪ್ರಭಾವಕ್ಕಿಂತಲೂ ತುಂಬಾ ಕಡಿಮೆ ಇರಲಿದೆ ಎಂದು ನಂಬಲಾಗಿದೆ.

 

ಇದೇ ವೇಳೆ ಕೋವಿಡ್ -19 ಬೆಳವಣಿಗೆಯ ಟ್ರೆಂಡ್ ಬಗ್ಗೆ ಮೆಸಾಚುಸೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಎಂಐಟಿ) ಸಂಶೋಧಕರ ಪ್ರಾಥಮಿಕ ಅಧ್ಯಯನದ ಪ್ರಕಾರ ಅತಿಯಾದ ಉಷ್ಣ ವಲಯಗಳಲ್ಲಿ ಕರೊನಾ ಪ್ರಕರಣಗಳು ತುಂಬಾ ಕಡಿಮೆ ಇರುವುದನ್ನು ತೋರಿಸಿದೆ. ಅಲ್ಲದೆ, ಅತಿ ಹೆಚ್ಚು ವೈರಸ್ ಹರಡುವಿಕೆ ಅಂದರೆ ಶೇ. 90 ರಷ್ಟು ಮಾರ್ಚ್ 22 ರವರೆಗೆ ಸಂಭವಿಸಿದೆ. ಈ ಸಮಯದಲ್ಲಿ ತಾಪಮಾನ3 ಡಿಗ್ರಿ ಸೆಲ್ಸಿಯಸ್ನಿಂದ 17 ಡಿಗ್ರಿ ಇತ್ತು. ಆರ್ದ್ರತೆಯ ಮಟ್ಟ ಪ್ರತಿ ಘನ ಮೀಟರ್ಗೆ ಗ್ರಾಂ 4ರಿಂದ 9ಇತ್ತೆಂದು ಅಧ್ಯಯನ ಸೂಚಿಸಿದೆ.

 

ಭಾರತದಲ್ಲಿ ಮಾರ್ಚ್ ತಿಂಗಳಲ್ಲಿ ತಾಪಮಾನ ಕಡಿಮೆ ಇದ್ದುದರಿಂದ ಸೋಂಕಿತರ ಪ್ರಕರಣಗಳು ವೇಗವಾಗಿ ಏರಿಕೆಯಾಗಿವೆ. ಇದಕ್ಕೆ ಯೂರೋಪ್ ಒಂದು ಒಳ್ಳೆಯ ಉದಾಹರಣೆಯಾಗಿದ್ದು, ಅಲ್ಲಿ ಒಳ್ಳೆಯ ಆರೋಗ್ಯ ಸೇವೆ ಇದ್ದರೂ ಪ್ರಕರಣ ಹಾಗೂ ಸಾವಿನ ಸಂಖ್ಯೆ ಅಧಿಕವಾಗುವುದಕ್ಕೆ ತಾಪಮಾನ ಕಡಿಮೆಯೇ ಕಾರಣ ಎಂದು ನಂಬಲಾಗಿದೆ

 

 

 

Find out more: