ನವದೆಹಲಿ: ಜಗತ್ತಿನಾದ್ಯಂತ ವ್ಯಾಪಿಸಿ ಸಾಕಷ್ಟು ಸಾವು ನೋವುಗಳನ್ನು ಉಂಟು ಮಾಡಿದ್ದ ಕೊರೋನಾ ವೈರಸ್ ಜಗತ್ತಿನ ಎಲ್ಲಾ ರಾಷ್ಟಗಳಲ್ಲಿ ಆತಂಕವನ್ನು ಉಂಟು ಮಾಡಿದೆ. ಇದಕ್ಕೆ ಎಲ್ಲಾ ರಾಷ್ಟ್ರಗಳ ವೈದ್ಯಕೀಯ ಸಂಶೋಧಕರು ಔಷಧಿಯನ್ನು ಕಂಡುಹಿಡಿಯುತ್ತಿದ್ದಾರೆ. ಈ ನಡುವೆ ಮಲೇರಿಯಾ ಔಷಧಿಗೆ ಬಳಸಲಾಗುತ್ತಿದ್ದ ಹೈಡ್ರಾಕ್ಸಿಕ್ವೋರಿಕ್ವೀನ್ ಔಷಧಿಯು ಕೊರೊನಾ ವೈರಸ್‌ಗೆ ಪರಿಣಾಮಕಾರಿಯಾಗಿ ಪ್ರಭಾವವನ್ನು ಬೀರಲಿವೆ ಎಂದು ಕೆಲ ಸಂಶೋಧಕರ ವರದಿ ತಿಳಿಸಿತ್ತು. ಇದರಿಂದ ಪ್ರಪಂಚದ ಎಲ್ಲಾ ರಾಷ್ಟ್ರಗಳು ಭಾರತಕ್ಕೆ ಹೈಡ್ರಾಕ್ಸಿಕ್ವೋರಿಕ್ವೀನ್ ಔಷಧಿ ಬೇಕೆಂದು ಮನವಿಯನ್ನು ಸಲ್ಲಿಸಲಾಗಿತ್ತು ಅದರಂತೆ ಭಾರತವೂ ಕೂಡ ಮನವಿಯನ್ನು ಸಲ್ಲಿಸಲಾಗಿದ್ದ ರಾಷ್ಟ್ರಗಳಿಗೆ ಹೈಡ್ರಾಕ್ಸಿಕ್ವೋರಿಕ್ವೀನ್ ಔಷಧಿಯನ್ನು ರಪ್ತು ಮಾಡಿತ್ತು. ಕೊರೋನಾ ವೈರಸ್ ವಿರುದ್ಧ ಹೋರಾಡಲು ಭರವಸೆಯನ್ನು ಮೂಡಿಸಿದ್ದ ಹೈಡ್ರಾಕ್ಸಿಕ್ವೋರಿಕ್ವೀನ್ ಬಗ್ಗೆ ಮತ್ತೊಂದು ಆತಂಕಕಾರಿ ವರದಿ ಲಭ್ಯವಾಗಿದೆ. ಅಷ್ಟಕ್ಕೂ ಆ ಆತಂಕಕಾರಿ ವರದಿ ಏನು ಗೊತ್ತಾ.?
ಮಾರಕ ಕೊರೊನಾ ವೈರಸ್ ಸೋಂಕಿನ ವಿರುದ್ಧ ಇಡೀ ವಿಶ್ವವೇ ಹೋರಾಡುತ್ತಿದ್ದು, ಔಷಧಿ ಕಂಡುಹಿಡಿಯಲು ಹಲವರು ಪ್ರಯತ್ನದಲ್ಲಿದ್ದಾರೆ. ಏತನ್ಮಧ್ಯೆ, ಕೊರೊನಾ ಸೋಂಕಿಗೆ ಹೈಡ್ರಾಕ್ಸಿಕ್ವೋರಿಕ್ವೀನ್ ಔಷಧಿ ಪರಿಣಾಮಕಾರಿ ಎಂದೇ ಭಾವಿಸಲಾಗುತ್ತಿದೆ. ಈ ಸಂದರ್ಭದಲ್ಲೇ ದೆಹಲಿಯ ಏಮ್ಸ್ ಆಸ್ಪತ್ರೆಯ ನಿರ್ದೇಶಕ ರಣದೀಪ್ ಗುಲೇರಿಯಾ ಈ ಹೈಡ್ರಾಕ್ಸಿಕ್ವೋರಿಕ್ವೀನ್ ಕುರಿತು ಗಮನಾರ್ಹ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಈ ಕುರಿತು ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಅವರು, ಕೆಲವು ಲ್ಯಾಬ್ ಗಳಲ್ಲಿ ಕೊರೊನಾ ಸೋಂಕಿಗೆ ಹೈಡ್ರಾಕ್ಸಿಕ್ವೋರಿಕ್ವಿನ್ ಔಷಧಿ ಸೂಕ್ತ ಎಂದ ಕೆಲವು ಲ್ಯಾಬ್ ಗಳು ವರದಿ ನೀಡಿವೆ. ಆದರೆ, ಇದು ಅಷ್ಟು ಪರಿಣಾಮಕಾರಿ ಅಲ್ಲ, ಇನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಕೋವಿಡ್-೧೯ ಸೋಂಕಿತರು ಅಥವಾ ಅವರೊಂದಿಗೆ ಸಂಪರ್ಕದಲ್ಲಿರುವವರಿಗೆ ಈ ಹೈಡ್ರಾಕ್ಸಿಕ್ವೋರಿಕ್ವಿನ್ ಸಹಕಾರಿ ಆಗಬಹುದು ಎಂದು ಸಲಹೆ ನೀಡಿದೆ ಎಂದು ತಿಳಿಸಿದರು.
ಇದರೊಂದಿಗೆ ಕೊರೊನಾ ವೈರಸ್ ಗೆ ತುತ್ತಾಗಿರುವ ಎಲ್ಲರಿಗೂ ಹೈಡ್ರಾಕ್ಸಿಕ್ವೋರಿಕ್ವಿನ್ ಔಷಧಿಯನ್ನು ಕೊಡಲು ಸಾಧ್ಯವಿಲ್ಲ, ಈ ಔಷಧಿ ನೀಡುವುದರಿಂದ ರೋಗಿಯ ಹೃದಯ ಬಡಿತದಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.ಇತರೇ ಔಷಧಿಗಳಂತೆ ಇದರಲ್ಲೂ ಕೆಲವೊಂದು ಸೈಡ್ ಎಫೆಕ್ಟ್ ಗಳಿವೆ. ಇದು ಒಳಿತು ಎಂದು ಪರಿಗಣಿಸುತ್ತಿರುವುದಕ್ಕಿಂತ ಹೆಚ್ಚಾಗಿ ಸೈಡ್ ಎಫೆಕ್ಟ್ ಗಳೇ ಹೆಚ್ಚಾಗಿವೆ ಎಂದು ಆಘಾತಕಾರಿ ಮಾಹಿತಿಯನ್ನು ನೀಡಿದ್ದಾರೆ.
ಇನ್ನು ಚೀನಾ ಹಾಗೂ ಫ್ರಾನ್ಸ್ ಗಳಲ್ಲಿ ಸಂಶೋಧನೆ ನಡೆಸಲಾಗಿದ್ದು, ಹೈಡ್ರಾಕ್ಸಿಕ್ಲೋರಿಕ್ವಿನ್ ಹಾಗೂ ಅಜಿಥ್ರೋಮಿಸಿನ್ ಕಾಂಬಿನೇಷನ್ ಮಾಡಿ ಔಷಧಿ ನೀಡಿದರೆ ಅದು ಕೋವಿಡ್-19 ರೋಗಿಗಳಿಗೆ ಸಹಕಾರಿಯಾಗಬಲ್ಲದು. ರೋಗಿಗಳಲ್ಲಿ ಚೇತರಿಕೆ ಕಾಣಬಹುದು ಎಂದು ಹೇಳಲಾಗಿದೆ. ಆದರೆ, ಈ ಸಂಶೋಧನಾ ವರದಿ ಅಷ್ಟು ಪರಿಣಾಮಕಾರಿಯಾಗಿಲ್ಲ. ಸದ್ಯಕ್ಕೆ ಕೋವಿಡ್ -19 ಕ್ಕೆ ಔಷಧವಿಲ್ಲ. ಹೀಗಾಗಿ ಸದ್ಯದ ಮಟ್ಟಿಗೆ ಇದನ್ನು ಉಪಯೋಗಿಸಬಹುದು ಎಂದು ಸಲಹೆ ನೀಡಿದರು. ಇನ್ನು ಕೊರೊನಾ ಸೋಂಕಿತರಿಗೆ ಹೈಡ್ರಾಕ್ಸಿಕ್ಲೋರಿಕ್ವಿನ್ ಹಾಗೂ ಅಜಿಥ್ರೋಮಿಸಿನ್ ಕಾಂಬಿನೇಷನ್ ಔಷಧಿ ನೀಡುವುದರಿಂದ ಉಂಟಾಗುವ ಪರಿಣಾಮ ಅಥವಾ ದುಷ್ಪರಿಣಾಮದ ಕುರಿತು ಪರಿಶೀಲನೆ ನಡೆಸುತ್ತಿದ್ದು, ಶೀಘ್ರದಲ್ಲೇ ಈ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ?