ಬೆಂಗಳುರು: ಮದ್ಯಪ್ರಿಯರಿಗೆ ಇದೀಗ ಸರ್ಕಾರ ಶಾಕ್ ನೀಡಿದೆ. ಹೌದು 43 ದಿನಗಳ ನಂತರ ಮದ್ಯದಂಗಡಿ ತೆರೆಯಲಾಗಿದೆ ಎಂದು ಮದ್ಯಪ್ರಿಯರು ಖುಷಿ ಪಡುತ್ತಿರುವ ಸಂದರ್ಭದಲ್ಲಿ ಇದಿಗ ಸರ್ಕಾರ ಶಾಕ್ ನೀಡಿದೆ. ಹೌದು ಮದ್ಯದ ಮೇಲಿನ ಸುಂಕವನ್ನು ಗಣನೀಯ ಪ್ರಮಾಣದಲ್ಲಿ ಇದೀಗ ಏರಿಕೆ ಮಾಡಿದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಆದಾಯ ಹರಿದು ಬರುತ್ತದೆ ಎನ್ನುವುದು ಸರ್ಕಾರದ ಆಲೋಚನೆ ಆಗಿದೆ. 

 

ಹೌದು, ಲಾಕ್ ಡೌನ್ 43 ದಿನಗಳ ಬಳಿಕ ಮದ್ಯಪ್ರಿಯರು ಖುಷಿ ಆಗಿದ್ದರು. ಇದೀಗ ಮದ್ದ ಮೇಲೆ ಕೋವಿಡ್ 19 ಸೆಸ್ ವಿಧಿಸಲಾಗಿದ್ದು, ಇಂದಿನಿಂದ ಮದ್ಯದ ಹೊಸ ದರ ಜಾರಿಗೆ ಬರಲಿದೆ. ದೆಹಲಿ, ಆಂದ್ರ ಬೆನ್ನಲ್ಲೆ ಕರ್ನಾಟಕದಲ್ಲೂ ದುಬಾರಿ ಆಗಿದೆ. ಸರ್ಕಾರ ಕೂಡ ಮದ್ಯದ ಮೇಲಿನ ಅಬಕಾರಿ ಸುಂಕವನ್ನು ಶೇ.17 ರಷ್ಟು ಹೆಚ್ಚಳ ಮಾಡಿದೆ.

 

ಈ ಮೊದಲು ಬಜೆಟ್ ನಲ್ಲಿ ಶೇ,6 ರಷ್ಟು ಮಾತ್ರ ಅಬಕಾರಿ ಸುಂಕವನ್ನು ವಿಧಿಸಲು ತೀರ್ಮಾನ ಮಾಡಲಾಗಿತ್ತು. ಆದರೆ ಇದೀಗ ಮದ್ಯದ ಮೇಲೆ ಶೇ.11 ರಷ್ಟು ಕೊರೊನಾ ಸೆನ್ ವಿಧಿಸಲಾಗಿದೆ. ಈ ಮೂಲಕ ಒಟ್ಟಾರೆ ಇದೀಗ ಶೇ.17 ರಷ್ಟು ಸುಂಕ ಹೆಚ್ಚಳ ಮಾಡಲಾಗಿದೆ. ಇದರಿಂದ ಮದ್ಯಪ್ರಿಯರಿಗೆ ಶಾಕ್ ಉಂಟಾಗಿದೆ. ಅಬಕಾರಿ ಸುಂಕವನ್ನು ಇಷ್ಟೊಂದು ಹೆಚ್ಚಳ ಮಾಡಬಾರದಿತ್ತು ಎಂದ ಮದ್ಯಪ್ರಿಯರು ಹೇಳುತ್ತಿದ್ದಾರೆ. ಅಲ್ಲದೇ ಸರ್ಕಾರದ ನಿರ್ಧಾರದ ವಿರುದ್ದ ಅವರು ಇದೀಗ ಗರಂ ಆಗಿದ್ದಾರೆ. 

 

ಬ್ರಾಂಡ್ ಆಧಾರದ ಮೇಲೆಯೂ ದರ ಹೆಚ್ಚಳ:

 

ಶೇ. 17ರಿಂದ ಶೇ. 25ರವರೆಗೂ ಮದ್ಯದ ಬೆಲೆಯನ್ನು ಬ್ರ್ಯಾಂಡ್‍ಗಳ ಆಧಾರದ ಮೇಲೆ ಹೆಚ್ಚಿಸಲಾಗಿದೆ. ಇದರಿಂದ ಮದ್ಯ ಪ್ರಿಯರು ಗರಂ ಆಗಿದ್ದಾರೆ. ಇನ್ನೇನು ಪ್ರತಿದಿನ ಕುಡಿದರಾಯಿತು ಎಂದುಕೊಂಡಿದ್ದ ಮದ್ಯಪ್ರಿಯರಿಗೆ ಹೈಬ್ರ್ಯಾಂಡ್‍ಗಳಿಗೆ ಶೇ.25ರವರೆಗೆ ಸುಂಕ ವಿಧಿಸಲಾಗಿದೆ. ಮಿಡಲ್ ಮದ್ಯಗಳಿಗೆ ಶೇ. 21ರಷ್ಟು ಸುಂಕ ವಿಧಿಸಲಾಗಿದ್ದು, ಚೀಪ್ ಲಿಕ್ಕರ್‌ಗಳಿಗೆ ಶೇ. 17ರಷ್ಟು ಅಬಕಾರಿ ಸುಂಕ ಏರಲಾಗಿದೆ. ಹೀಗಾಗಿ ಇನ್ನು ದಿನವವೂ ಕುಡಿಯುವುದು ಮದ್ಯಪ್ರಿಯರಿಗೆ ಕಷ್ಟ ಆಗುವ ಸಾಧ್ಯತೆ ಇದೆ. 

 

ಆದರೆ ಇನ್ನೊಂದು ಖುಷಿಯ ಸಂಗತಿ ಏನೆಂದರೆ, ಬೀರ್, ಫೆನಿ, ವೈನ್, ನೀರಾ ಮೇಲೆ ಶುಲ್ಕ ವಿಧಿಸಲಾಗಿಲ್ಲ. ಇದಿರಂದ ಮದ್ಯಮ ವರ್ಗದ ಮದ್ಯಪ್ರಿಯರು ನಿಟ್ಟುಸಿರು ಬಿಟ್ಟಿದ್ದಾರೆ. ಅಲ್ಲದೇ ಗೆಜೆಟ್‍ನಲ್ಲಿ ಅಧಿಕೃತವಾಗಿ ಪ್ರಕಟಿಸಿ ಆದೇಶ ಹೊರಡಿಸಲಾಗಿದೆ. ಇಂದಿನಿಂದಲೇ ಮದ್ಯದ ಹೊಸ ದರ ಜಾರಿಗೆ ಬರಲಿದೆ ಎನ್ನಲಾಗಿದೆ.

 

Find out more: