ಕೊರೋನಾವೈರಸ್ ಇಡೀ ವಿಶ್ವ ವನ್ನು ವ್ಯಾಪಿಸಿ ಲಕ್ಷಾಂತರ ಮಂದಿಯ ಪ್ರಾಣವನ್ನು ತೆಗೆದು ರಣಕೇಕೆಯನ್ನು ಹಾಕುತ್ತಿದೆ, ಅದರಂತೆ. ಲಕ್ಷಾಂತರ ಮಂದಿ ಇಂದು ಕೊರೋನಾ ವೈರಸ್ ಇಂದ ಬಳಲುತ್ತಿದ್ದಾರೆ ಆದರೆ  ಕರೊನಾ ವೈರಸ್​ ಸೋಂಕು ಆರಂಭದಲ್ಲಿ ಕಾಣಿಸಿಕೊಂಡ ದೇಶಗಳಲ್ಲಿ ಹೊಸ ಕೇಸ್​ಗಳ ಪ್ರಮಾಣ ಇಳಿಕೆಯಾಗುತ್ತಿದೆ. ಆದರೆ, ಭಾರತದಲ್ಲಿ ಇಳಿಮುಖವಾಗುವ ಲಕ್ಷಣಗಳನ್ನೇ ತೋರುತ್ತಿಲ್ಲ. ಕೋವಿಡ್​ ಪ್ರಕರಣಗಳು ಹೆಚ್ಚುತ್ತಿರುವುದ ಇರುವುದು ಭಾರಿ ಆತಂಕಕ್ಕೆ ಕಾರಣವಾಗಿದೆ. ಜೊತೆಗೆ ಕೊರೋನಾ ಲಕ್ಷಣಗಳಾದ ಕೆಮ್ಮು, ನೆಗಡಿ, ಜ್ವರ, ಇದೆಲ್ಲದರ ಜೊತೆಗೆ ಮತ್ತಷ್ಟು ಲಕ್ಷಣಗಳು ಕಂಡು ಬಂದರೆ ಅದೂ ಕೂಡ ಕೊರೋನಾ ಲಕ್ಷಣಗಳಂತೆ ಅಷ್ಟಕ್ಕೂ ಆ ಲಕ್ಷಣಗಳು ಯಾವುವು ಗೊತ್ತಾ..?

 

ಕರೊನಾ ಸೋಂಕಿಗೆ ಒಳಗಾದರೂ ವ್ಯಕ್ತಿಯಲ್ಲಿ ರೋಗದ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದಿರುವುದು ಇದರ ಪತ್ತೆಗೆ ಸವಾಲಾಗಿ ಪರಿಣಮಿಸಿದೆ. ದೇಶದ ಶೇ.70 ರೋಗಿಗಳು ಇಂಥವರೇ ಆಗಿದ್ದಾರೆ. ಹೀಗಾಗಿ ಕೊನೆಯ ಹಂತದಲ್ಲಿ ರೋಗ ಉಲ್ಬಣಿಸಿದಾಗ ಆಸ್ಪತ್ರೆಗೆ ದಾಖಲಾಗುವಂತಾಗಿದೆ. ಆ ವೇಳೆಗಾಗಲೇ ಹಲವರಿಗೆ ಸೋಂಕು ವ್ಯಾಪಿಸಿರುತ್ತದೆ. ಇದು ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ.

 

ಕರೊನಾ ಪತ್ತೆ ಹಚ್ಚಲು ಅಥವಾ ಸೋಂಕಿಗೆ ಒಳಗಾಗಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲು ಜ್ವರ, ಕೆಮ್ಮು, ಗಂಟಲಲ್ಲಿ ಕೆರೆತ, ಉಸಿರಾಟದಲ್ಲಿ ತೊಂದರೆ, ಮೈಕೈ ನೋವು, ಮೊದಲಾದ ಲಕ್ಷಣಗಳನ್ನು ಪಟ್ಟಿ ಮಾಡಲಾಗಿತ್ತು. ಆದರೆ, ಯಾವುದೇ ಲಕ್ಷಣವಿಲ್ಲದ ವ್ಯಕ್ತಿಗಳನ್ನು ಗುರುತಿಸಲು ಕೇಂದ್ರ ಆರೋಗ್ಯ ಇಲಾಖೆ ಇನ್ನೆರಡು ಲಕ್ಷಣಗಳನ್ನು ಈ ಪಟ್ಟಿಗೆ ಸೇರಿಸಿದೆ. ಅದೆಂದರೆ ರುಚಿ ಹಾಗೂ ವಾಸನೆ ಗ್ರಹಿಕೆ ಕಳೆದುಕೊಂಡಿರುವುದು. ಭಾರತ ಮಾತ್ರವಲ್ಲ, ಜಗತ್ತಿನ ಹಲವು ದೇಶಗಳಲ್ಲಿ ಈ ಲಕ್ಷಣಗಳಿಂದಲೂ ಕರೊನಾ ಸೋಂಕನ್ನು ಪತ್ತೆ ಹಚ್ಚಬಹುದು ಎಂದು ತಿಳಿಸಲಾಗಿದೆ.

 

 ಕರೊನಾ ಲಸಿಕೆ ಭಾರತದಲ್ಲಿ ಸೆಪ್ಟೆಂಬರ್​ಗೆ ಸಿಗೋದು ಪಕ್ಕಾ; ಜಿದ್ದಿಗೆ ಬಿದ್ದು ಉತ್ಪಾದನೆಯಲ್ಲಿ ತೊಡಗಿವೆ ಕಂಪನಿಗಳು

ಹೀಗಾಗಿ ಭಾರತ ಕೂಡ ಕೋವಿಡ್​ ಪತ್ತೆ ಹಚ್ಚುವ ನಿಟ್ಟಿನಲ್ಲಿ ಹೊರಡಿಸಲಾಗಿರುವ ಮಾರ್ಗಸೂಚಿಯನ್ನು ಈ ಅಂಶಗಳನ್ನು ಸೇರಿಸಿ ಪರಿಷ್ಕೃತಗೊಳಿಸಿದೆ.


ಇದಲ್ಲದೇ. ರೆಮ್​ಡೆಸಿವಿರ್​ ಹಾಗೂ ಟೊಸಿಲಿಜುಮಾಬ್​ ಲಸಿಕೆ ಬಳಕೆ ಹಾಗೂ ಪ್ಲಾಸ್ಮಾ ಚಿಕಿತ್ಸೆ ಅಳವಡಿಕೆ ಬಗ್ಗೆಯೂ ಸ್ಪಷ್ಟನೆ ನೀಡಿದೆ. ಕೆಲ ಆಯ್ದ ಪ್ರಕರಣಗಳಲ್ಲಿ ಕೋವಿಡ್​ ರೋಗಿಗಳಿಗೆ ಇವನ್ನು ಬಳಸಬಹುದು ಎಂದು ಅಧಿಕೃತಗೊಳಿಸಿದೆ.

 

Find out more: