ಇಡೀ ಜಗತ್ತನ್ನೇ ವ್ಯಾಪಿಸಿರುವ ಕೊರೋನಾ ವೈರಸ್ ಅನ್ನು ತಡೆಯುವ ಉದ್ದೇಶದಿಂದ ಸೂಚಿಲಸಾಗಿದ್ದ ಹಾಲ್ಕೋಹಾಲ್ ಸ್ಯಾನಿಟೈಸರ್ ಅನ್ನು ಬಳಕೆಯನ್ನು ಮಾಡಲು ಸಂಶೋಧಕರು ಶಿಪಾರಸು ಮಾಡಿದ್ರು ಇದರನ್ವಯ ಪ್ರತಿಯೊಬ್ಬರೂ ಕೂಡ ಕೊರೋನಾ ಭಯದಿಂದ ಸ್ಯಾನಿ ಟೈಸರ್ ಅನ್ನು ಬಳಕೆಯನ್ನು ಮಾಡಲು ಆರಂಭಿಸಿದರು. ಇದರಿಂದ ಮಾರುಕಟ್ಟೆಯಲ್ಲಿ ಸ್ಯಾನಿಟೈಸರ್ ಬೇಡಿಕೆ ಹೆಚ್ಚಾಯಿತು. ಇದರ ಲಾಭವನ್ನು ಪಡೆದುಕೊಳ್ಳುವ ಉದ್ದೇಶದಿಂದ ಕೆಲವು ಕಂಪನಿಗಳು ನಕಲಿ ಸ್ಯಾನಿಟೈಸರ್ ಅನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಅಷ್ಟಕ್ಕೂ ಆ ವರದಿಯಲ್ಲಿ ಏನಿದೆ..?
ಕೊರೋನ ಸೋಂಕು ಹೆಚ್ಚುತ್ತಿರುವ ಹಾಗೂ ಸ್ಯಾನಿಟೈಸರ್‌ಗಳಿಗೆ ಬೇಡಿಕೆ ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಕೆಲವು ಸಂಸ್ಥೆಗಳು ಮೆಥನಾಲ್ ಬಳಸಿ ನಕಲಿ ಸ್ಯಾನಿಟೈಸರ್ ಉತ್ಪಾದಿಸುವ ಸಾಧ್ಯತೆಯಿದೆ ಎಂಬ ಇಂಟರ್‌ಪೋಲ್ ವರದಿಯ ಹಿನ್ನೆಲೆಯಲ್ಲಿ ಸಿಬಿಐ ಈ ಎಚ್ಚರಿಕೆ ನೀಡಿದೆ. ಇಂತಹ ಪ್ರಕರಣಗಳು ಕೆಲವು ದೇಶಗಳಲ್ಲಿ ವರದಿಯಾಗಿವೆ. ಮೆಥನಾಲ್ ಬಳಕೆ ಮನುಷ್ಯನ ದೇಹಕ್ಕೆ ಅಪಾಯಕಾರಿ ಎಂದು ಇಂಟರ್‌ಪೋಲ್ ತಿಳಿಸಿದೆ.
ಜೊತೆಗೆ, ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ವೈಯಕ್ತಿಕ ಸುರಕ್ಷಾ ಸಾಧನ(ಪಿಪಿಇ), ಮಾಸ್ಕ್ , ಕೈಗವಸು ಮತ್ತಿತರ ವಸ್ತುಗಳನ್ನು ಆನ್‌ಲೈನ್ ಮೂಲಕ ರಿಯಾಯಿತಿ ದರದಲ್ಲಿ ಒದಗಿಸುವ ಭರವಸೆ ನೀಡಿ ವಂಚಿಸುವ ಜಾಲವೂ ಅಂತರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿದೆ. ಇವರ ಭರವಸೆ ನಂಬಿ ಬ್ಯಾಂಕ್‌ನಿಂದ ಹಣ ವರ್ಗಾವಣೆ ಮಾಡಿದರೆ ಮೋಸದ ಬಲೆಗೆ ಬೀಳುತ್ತೀರಿ ಎಂದು ಸಿಬಿಐ ಎಚ್ಚರಿಕೆ ನೀಡಿದೆ.
ಈ ಸಂಬಂಧ ಎಲ್ಲಾ ರಾಜ್ಯ ಮತ್ತು ಕೇಂದ್ರದ ಪೊಲೀಸ್ ಪಡೆಗಳಿಗೆ ಎಚ್ಚರಿಕೆ ಸಂದೇಶ ಕಳುಹಿಸಿರುವ ಸಿಬಿಐ, ದೇಶದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆ ಹ್ಯಾಂಡ್ ಸ್ಯಾನಿಟೈಸರ್‌ಗೂ ಕೂಡ ದುಪ್ಪಟ್ಟು ಬೇಡಿಕೆ ಶುರುವಾಗಿದೆೆ. ಈ ಹಿನ್ನೆಲೆಯಲ್ಲಿ ಹಲವು ಕಂಪನಿಗಳು ವಿಷಕಾರಿ ಮೆಥಾನಲ್ ಬಳಸಿ ನಕಲಿ ಹ್ಯಾಂಡ್ ಸ್ಯಾನಿಟೈಸರ್ ತಯಾರಿಸಲು ಹೊರಟಿದ್ದಾರೆ ಎಂಬ ಸುಳಿವು ಇಂಟರ್‌ಪೋಲ್‌ನಿಂದ ಸಿಕ್ಕಿರೋದಾಗಿ ವಿವರಿಸಿದೆ.
ಅಲ್ಲದೇ ಕೆಲವು ದೇಶಗಳಲ್ಲಿ ಜನರನ್ನ ಸೆಳೆಯಲು ಮಿಥೆನಾಲ್ ಬಳಿಸಿದ ಹ್ಯಾಂಡ್ ಸ್ಯಾನಿಟೈಸರ್ ತಯಾರಿಸಿ ಮಾರುಕಟ್ಟೆಗೆ ಬಿಟ್ಟಿರುವುದು ವರದಿಯಾಗಿದೆ. ಹಲವು ವಿದೇಶಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್‌ಗೆ ಹೆಚ್ಚಿನ ಪ್ರಮಾಣದಲ್ಲಿ ವಿಷಕಾರಿ ಮಿಥೆನಾಲ್ ಬಳಕೆ ಮಾಡಿರುವುದು ಕೂಡ ಕಂಡುಬಂದಿದೆ. ಹೀಗಾಗಿ ಇದು ಮಾನವನ ದೇಹದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದೆ.