ಕೊರೋನಾ ವೈರಸ್ ಇಡೀ ವಿಶ್ವದಾಧ್ಯಂತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈಗಾಗಲೇ ಲಕ್ಷಾಂತರ ಮಂದಿಯನ್ನು ಬಲಿ ತೆಗೆಗೆದುಕೊಂಡಿದೆ ಈ ಕೊರೋನಾ ವೈರಸ್ ಅನ್ನು ತಡೆಯುವ ಉದ್ದೇಶದಿಂದ ಇಡೀ ಜಗತ್ತಿನಾಧ್ಯಂತ ಸಂಶೋಧನೆಗಳು ನಡೆಯುತ್ತಿವೆ. ಆದರೆ ಇದಕ್ಕೂ ಮುನ್ನ ಜನರಲ್ಲಿ ಕೊರೋನಾ ವೈರಸ್ ಅನ್ನು ತಡೆಯುವಂತಹ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅವಶ್ಯವಾಗಿದೆ. ಹಾಗಾಗಿ ಸಾಕಷ್ಟು ಜನರು ಮನೆ ಮದ್ದನ್ನು ಹುಡುಕಿಕೊಂಡಿದ್ದಾರೆ. ಇದರಿಂದಾಗಿ ಈ ಮದ್ದಿನ ಮೇಲೆ ಸಂಶೋಧನೆಯ ಅಧ್ಯಯನಗಳು ಶುರುವಾಗಿದೆ. ಅಷ್ಟಕ್ಕೂ ಕೊರೋನಾ ವೈರಸ್ ವಿರುದ‍್ಧ ಹೋರಾಡಬಲ್ಲ ಮನೆ ಮದ್ದು ಯಾವುದು ಗೊತ್ತಾ…?
ಕೋವಿಡ್ 19 ಸೋಂಕು ತಡೆಯುವುದಕ್ಕೆ ನಾನಾ ರೀತಿಯ ಪ್ರಯತ್ನಗಳು ನಡೆದಿವೆ. ಇದರಲ್ಲಿ ರೋಗ ಪ್ರತಿರೋಧ ಶಕ್ತಿ ಹೆಚ್ಚಿಸುವ ಪ್ರಯತ್ನದಲ್ಲಿ ಉಪ್ಪು ನೀರು ಬಳಕೆಯೂ ಒಂದು. ನಮ್ಮ ದೇಶದಲ್ಲಿ ಈಗಾಗಲೇ ಅನೇಕರು, ಲಿಂಬೆ ರಸ ಮತ್ತು ಉಪ್ಪು ಮಿಶ್ರಿತ ನೀರನ್ನು ಕುಡಿಯುವುದು, ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸಿ, ಗಂಟಲು ಸ್ವಚ್ಛಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ಈ ಪ್ರಯತ್ನ ಈಗ ಜಗತ್ತಿನ ಗಮನಸೆಳೆದಿದ್ದು, ಕೋವಿಡ್ 19 ಸೋಂಕು ತಡೆಯುವ ನಿಟ್ಟಿನಲ್ಲಿ ಉಪ್ಪು ನೀರು ರಾಮಬಾಣವಾ ಎಂಬ ಪ್ರಶ್ನೆಯೊಂದಿಗೆ ಒಂದು ಅಧ್ಯಯನವೇ ಶುರುವಾಗಿದೆ.
ಜನರ ನಂಬಿಕೆ ನೋಡಿ ಸೈಂಟಿಸ್ಟ್ಗಳಿಗೆ ಎಲ್ಲಿಲ್ಲದ ಕುತೂಹಲ. ಹೀಗಾಗಿ ಎಡಿನ್ಬರ್ಗ್ ಯೂನಿವರ್ಸಿಟಿಯ ಪರಿಣತರ ತಂಡ ಈ ಕುರಿತು ಅಧ್ಯಯನ ನಡೆಸುವುದಕ್ಕೆ ಮುಂದಾಗಿದೆ. ಈ ಅಧ್ಯಯನದಲ್ಲಿ ಭಾಗಿಯಾಗಲು ಸಾರ್ವಜನಿಕರನ್ನು ಕೋರಿಕೊಂಡಿದೆ ಕೂಡ. ಬ್ರಿಟನ್ನಲ್ಲಿ ಕೋವಿಡ್ 19 ಸೋಂಕು ತಡೆಗೆ ಎನ್ಎಚ್ಎಸ್ ಈಗಾಗಲೇ ಎರಡು ಆಯಂಟಿ ವೈರಲ್ ಔಷಧಗಳೆಂದು ಸ್ಟಿರೋಯ್ಡ್ ಡೆಕ್ಸಾಮೀಥಾಸೋನ್ ಮತ್ತು ಆಯಂಟಿ ಎಬೋಲಾ ಡ್ರಗ್ ರೆಮ್ಡೆಸಿವಿರ್ ಅನ್ನು ಬಳಸಲು ಒಪ್ಪಿಗೆ ನೀಡಿದೆ. ಆದಾಗ್ಯೂ ಈ ಔಷಧಗಳಿಂದ ರೋಗ ವಾಸಿಯಾಗುತ್ತದೆ ಎಂಬ ಭರವಸೆ ಇಲ್ಲ.
ಮೈಲ್ಡ್ ಆಗಿ ರೋಗ ಲಕ್ಷಣ ಇರುವಂಥವರಿಗೆ ಉಪ್ಪುನೀರಿನಲ್ಲಿ ಬಾಯಿ ಮುಕ್ಕಳಿಸಿ, ಗಂಟಲು ಸ್ವಚ್ಛಗೊಳಿಸುವ ಸಲಹೆಯನ್ನು ಅಲ್ಲಿನ ಸೈಂಟಿಸ್ಟ್ಗಳು ಈಗ ನೀಡಲಾರಂಭಿಸಿದ್ದಾರೆ. ಇದರ ಪರಿಣಾಮ ಏನೆಂಬುದನ್ನು ಅರಿಯುವ ಪ್ರಯತ್ನವನ್ನೂ ಅವರು ಮಾಡಿದ್ದಾರೆ. ಈ ಅಧ್ಯಯನಕ್ಕೆ ಎಡಿನ್ಬರ್ಗ್ ಆಯಂಡ್ ಲೊಥಿಯಾನ್ಸ್ ವೈರಲ್ ಇಂಟರ್ವೆನ್ಶನ್ ಸ್ಟಡಿ (ಇಎಲ್ವಿಐಎಸ್) ಎಂದು ಹೆಸರಿಡಲಾಗಿದೆ. ಕಳೆದ ವರ್ಷ ನಡೆಸಿದ ಇದೇ ಮಾದರಿ ಅಧ್ಯಯನದಲ್ಲಿ ಈ ಪ್ರಯೋಗ ಮಾಡಿದವರಲ್ಲಿ ಕಫ, ಕೆಮ್ಮು ಮತ್ತು ನೆಗಡಿ ಎಲ್ಲವೂ ಕಡಿಮೆ ಇತ್ತು. ಅಲ್ಲದೆ ರಕ್ಷಸಂಚಯವೂ ಕಡಿಮೆ ಇತ್ತು.