ಕೊರೋನಾ ವೈರಸ ಇಡೀ ಪ್ರಂಚದ ಎಲ್ಲಾ ಮೂಲೆಯನ್ನು ಆವರಿಸಿ ಇಲ್ಲಿಯವರೆಗೆ ಸುಮಾರು ಒಂದು ಕೋಟಿಯಷ್ಟು ಜನರನ್ನು ಭಾಧಿಸುತ್ತಿದೆ ಇದರಿಂದಾಗಿ ಸುಮಾರು 5ಲಕ್ಷ ಜನರು ಸಾವನ್ನಪ್ಪಿದ್ದಾರೆ ಹಾಗೂ ಇನ್ನು ಪ್ರತಿನಿತ್ಯವೂ ಕೂಡ ಕೊರೋನಾ ಸೋಂಕಿನಿಂದ ಸಾವನ್ನಪ್ಪುತ್ತಿದ್ದಾರೆ ಈ ಕುರಿತು ಸುದ್ದಿ ಸಂಸ್ಥೆಯಾದ ರಾಯ್ ಟರ್ಸ್ ವರದಿಯೊಂದನ್ನು ಬಿಡುಗಡೆಯನ್ನು ಮಾಡಿದೆ. ಈ ವರದಿ ವಿಶ್ವದ ಜನರನ್ನು ಮತ್ತಷ್ಟು ಆತಂಕಕ್ಕೆ ತಳ್ಳುತ್ತದೆ. ಅಷ್ಟಕ್ಕೂ ರಾಯ್ ಟರ್ಸ್ ಬಿಡುಗಡೆ ಮಾಡಿರುವ ವರದಿಯಲ್ಲಿ ಏನಿದೆ ಗೊತ್ತಾ..?
ವಿಶ್ವದಾದ್ಯಂತ ಕೋವಿಡ್ ಸಾವಿನ ಸಂಖ್ಯೆ 5 ಲಕ್ಷ ದಾಟಿದೆ. ರಾಯ್ ಟರ್ಸ್ ಸುದ್ದಿ ಸಂಸ್ಥೆ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಜೂ. 1ರಿಂದ 27ರವರೆಗೆ ಜಗತ್ತಿನಾದ್ಯಂತ ಪ್ರತಿ 24 ಗಂಟೆಗಳಿಗೆ 4,700ಕ್ಕಿಂತಲೂ ಅಧಿಕ ಜನರು ಸಾವಿಗೀಡಾಗುತ್ತಿದ್ದಾರೆ. ಅಂದರೆ, ಪ್ರತಿ ಗಂಟೆಗೆ 196 ಜನರು ಅಥವಾ ಪ್ರತಿ 18 ಸೆಕೆಂಡುಗಳಿಗೆ ಒಬ್ಬ ಕೋವಿಡ್ ಸೋಂಕಿತ ಮೃತನಾಗುತ್ತಿದ್ದಾನೆ. ಜಗತ್ತಿನಲ್ಲಿ ಈವರೆಗೆ ಆಗಿರುವ ಸಾವುಗಳಲ್ಲಿ ಕಾಲು ಭಾಗದಷ್ಟು ಸಾವುಗಳು ಅಮೆರಿಕದಲ್ಲೇ ಸಂಭವಿಸಿವೆ. ಅಮೆರಿಕದ ದಕ್ಷಿಣ ಹಾಗೂ ಪಶ್ಚಿಮ ರಾಜ್ಯಗಳಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿದೆ. ರವಿವಾರ ಒಂದೇ ದಿನ ಅಲ್ಲಿ 44,700 ಪ್ರಕರಣಗಳು ದಾಖಲಾಗಿದ್ದು, 508 ಸಾವು ಸಂಭವಿಸಿವೆ. ಈವರೆಗೆ ಸಾವಿಗೀಡಾದ 5 ಲಕ್ಷ ಜನರಲ್ಲಿ ಹೆಚ್ಚಿನವರು ವೃದ್ಧರೇ ಆಗಿದ್ದು, ಯುವಕರು ಹಾಗೂ ಮಕ್ಕಳು ಗಣನೀಯ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಸಾವಿನ ಸಂಖ್ಯೆ ಗಣನೀಯವಾಗಿ ಏರಿಲ್ಲ . ಆದರೆ, ಅಮೆರಿಕ, ಭಾರತ, ಬ್ರೆಜಿಲ್ ಹಾಗೂ ಏಷ್ಯಾದ ಕೆಲವು ಭಾಗಗಳಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ರವಿವಾರದಂದು, ಯೂರೋಪ್‌ನಲ್ಲಿ ದಾಖಲಾದ ಪ್ರಕರಣಗಳಿಗಿಂತ ಹೆಚ್ಚು ಪ್ರಕರಣಗಳು ಲ್ಯಾಟಿನ್ ಅಮೆರಿಕದಲ್ಲಿ ದಾಖಲಾಗಿವೆ. ಹಾಗಾಗಿ, ಉತ್ತರ ಅಮೆರಿಕದಲ್ಲಿ ಆತಂಕದ ಛಾಯೆ ಆವರಿಸಿದೆ. ಇನ್ನು, ವಿಶ್ವದ ಇತರೆಡೆ ಕಣ್ಣು ಹಾಯಿಸುವುದಾದರೆ ಆಸ್ಟ್ರೇಲಿಯಾದಲ್ಲಿ ಹೆಚ್ಚೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ.ಹಾಗಾಗಿ, ಅಲ್ಲಿನ ಅಧಿಕಾರಿಗಳು ಕೆಲವು ಪ್ರದೇಶಗಳಲ್ಲಿ ಸಾಮಾಜಿಕ ಅಂತರದ ಕಟ್ಟುಪಾಡುಗಳನ್ನು ಮತ್ತಷ್ಟು ಬಿಗಿಗೊಳಿಸಲು ತೀರ್ಮಾನಿಸಿದ್ದಾರೆ.
ದೇಶದಲ್ಲಿ ಮತ್ತೆ ಏರಿಕೆ ಕಂಡ ಸೋಂಕಿತರ ಸಂಖ್ಯೆ: ದೇಶದಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ರವಿವಾರ ಬೆಳಗ್ಗೆ ಎಂಟರಿಂದ ಸೋಮವಾರ ಬೆಳಗ್ಗೆ 8 ರ ವರೆಗಿನ ಅವಧಿಯಲ್ಲಿ 19,459 ಹೊಸ ಪ್ರಕರಣಗಳು ದೃಢಪಟ್ಟಿವೆ. 380 ಸಾವಿನ ಪ್ರಕರಣಗಳು ದೃಢಪಟ್ಟಿವೆ. ಈ ಪೈಕಿ ಮಹಾರಾಷ್ಟ್ರದ ಸಂಖ್ಯೆಯೇ ಅಧಿಕ. 24 ಗಂಟೆಗಳ ಅವಧಿಯಲ್ಲಿ ಸೋಂಕಿತರ ಸಂಖ್ಯೆ 15 ಸಾವಿರಕ್ಕಿಂತ ಹೆಚ್ಚು ಬೆಳಕಿಗೆ ಬರುವುದು ಸತತ ಆರನೇ ದಿನವಾಗಿದೆ. ಜೂ.1ರ ಬಳಿಕ ದೇಶದಲ್ಲಿ ಇದುವರೆಗೆ 3.57 ಲಕ್ಷ ಪ್ರಕರಣಗಳು ಪತ್ತೆಯಾಗಿವೆ. ಇಷ್ಟು ಮಾತ್ರವಲ್ಲದೆ ಗುಣಮುಖರಾಗುವ ಪ್ರಮಾಣ ಶೇ.58.67ಕ್ಕೆ ಏರಿಕೆಯಾಗಿದೆ.