ತುಮಕೂರಿನಲ್ಲಿ ದಿನದಿಂದ ದಿನಕ್ಕೆ ಕೊರೋನ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ತುಮಕೂರು ಜಿಲ್ಲಾಡಳಿತ ಕೆಲವು ಎಚ್ದಚರಿಕೆಯ ಕ್ರಮಗಳನ್ನು ಕೈಗೊಂಡಿದೆ. ಇತ್ತೀಚೆಗೆ ಎಲ್ಲೆಡೆ ಮಳೆಯಾಗುವುದತ್ತಿರುವುದರಿಂದ ತಂಪಾದ ವಾತಾವಣರ ನಿರ್ಮಾಣವಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ನೆಗಡಿ ಕೆಮ್ಮು ಜ್ವರಗಳು ಕಾಣಿಸಿಕೊಂಡ ಪರಿಣಾಮ ಸಾಕಷ್ಟು ಜನರು ಕೊರೋನಾ ಭೀತಿಯಲ್ಲಿದ್ದಾರೆ ಆದರೆ ಈ ಭೀತಿಯನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ರೀತಿಯ ಕ್ರಮವೊಂದನ್ನು ಕೈಗೊಂಡಿದೆ. ಅಷ್ಟಕ್ಕೂ ಆಕ್ರಮ ಏನು ಗೊತ್ತಾ..?
ತುಮಕೂರು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರು ಮತ್ತು ಶಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊರೊನಾ ಶಂಕೆ ಹಿನ್ನೆಲೆಯಲ್ಲಿ ಈಗಾಗಲೆ ಹಲವರನ್ನು ಮನೆಗಳಲ್ಲಿ ಮತ್ತು ವಸತಿ ನಿಲಯಗಳಲ್ಲಿ ಕ್ವಾರಂಟೈನ್ ಇರಿಸಲಾಗಿದೆ. ಈ ನಡುವೆ ಜಿಲ್ಲೆಯಲ್ಲಿ ಕೆಲವು ಮಂದಿ ಸಣ್ಣ ಪುಟ್ಟ ಜ್ವರ, ತಲೆನೋವು, ನೆಗಡಿ ಹೀಗೆ ತೀವ್ರವಲ್ಲದ ಕಾಯಿಲೆಗಳಿಗೆ ತುತ್ತಾಗಿ ಕೊರೊನಾ ಕಾರಣಕ್ಕೆ ಭಯಗೊಳ್ಳುತ್ತಿದ್ದಾರೆ.
ಇಂತಹ ಗಂಭೀರವಲ್ಲದ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಸಿಲುಕುತ್ತಿರುವವರ ಚಿಕಿತ್ಸೆಗೆ ಜಿಲ್ಲಾ ಮಟ್ಟದಲ್ಲಿ ಮತ್ತು ತಾಲ್ಲೂಕು ಮಟ್ಟದಲ್ಲಿ ಕೋವಿಡ್ ಕೇರ್ ಸೆಂಟರ್ (ಸಿಸಿಸಿ) ಆರಂಭಿಸಲಾಗುತ್ತಿದೆ. ಈಗಾಗಲೆ ಜಿಲ್ಲಾ ಕೇಂದ್ರದ ಕ್ಯಾತ್ಸಂದ್ರದ ಟ್ರಕ್ ಟರ್ಮಿನಲ್ ಬಳಿಯ ಕ್ರೀಡಾ ವಸತಿ ಸಮುಚ್ಚಯದಲ್ಲಿ ಸಿಸಿಸಿ ಆರಂಭವಾಗುತ್ತಿದೆ.
ಕೊರೊನಾ ರೋಗದ ಗುಣಲಕ್ಷಣಗಳು ಇಲ್ಲದ ವ್ಯಕ್ತಿಗಳ ಆರೈಕೆಗೆ ಈ ಕೇಂದ್ರಗಳನ್ನು ಪ್ರಮುಖವಾಗಿ ಬಳಸಿಕೊಳ್ಳಲಾಗುತ್ತದೆ. ಇಲ್ಲಿ ದಿನದ 24 ಗಂಟೆಯೂ ವೈದ್ಯಕೀಯ ಸೌಲಭ್ಯಗಳು ದೊರೆಯಲಿವೆ. ಪ್ರತ್ಯೇಕವಾದ ವೈದ್ಯರು ಮತ್ತು ಶುಶ್ರೂಷಕಿಯರ ತಂಡ ಇರಲಿದೆ. ಇದರಿಂದ ಸಹಜವಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಯ ಮೇಲಿನ ಒತ್ತಡ ಕಡಿಮೆ ಆಗುತ್ತದೆ. ಕೊರೊನಾ ಸೋಂಕಿನ ಜತೆಗೆ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರನ್ನು ಈ ರೋಗದ ಲಕ್ಷಣಗಳು ಇಲ್ಲದ ರೋಗಿಗಳಿಂದ ಪ್ರತ್ಯೇಕವಾಗಿ ಇರಿಸಿ ಆರೈಕೆ ಮಾಡಲು ಈ ಕೇಂದ್ರಗಳು ಆರಂಭವಾಗುತ್ತಿವೆ.
ತಾಲ್ಲೂಕು ಕೇಂದ್ರಗಳಲ್ಲಿಯೂ ಈಗಾಗಲೇ ಕೋವಿಡ್ ಕೇರ್ ಸೆಂಟರ್‌ಗಳಿಗೆ ಕಟ್ಟಡಗಳನ್ನು ಗುರುತಿಸಿರುವ ಜಿಲ್ಲಾಡಳಿತ ಅಲ್ಲಿ ಅಗತ್ಯ ವ್ಯವಸ್ಥೆಗಳನ್ನು ಕೈಗೊಂಡಿದೆ. ಸಮುದಾಯ ಭವನಗಳು, ಹಾಸ್ಟೆಲ್‌ಗಳು, ವಸತಿ ಶಾಲೆಗಳು, ಕ್ರೀಡಾ ಸಮುಚ್ಚಯಗಳು, ಕಲ್ಯಾಣ ಮಂಟಪಗಳು, ಹೋಟೆಲ್‌ಗಳಲ್ಲಿ ಈ ಕೇಂದ್ರಗಳನ್ನು ಆರಂಭಿಸುವಂತೆ ಸರ್ಕಾರ ನಿರ್ದೇಶನ ನೀಡಿದೆ.
ಈ ಕೇಂದ್ರಗಳಲ್ಲಿ 100 ಮಂದಿ ರೋಗಿಗಳಿಗೆ ಒಬ್ಬ ವೈದ್ಯರು, 50 ಮಂದಿ ರೋಗಿಗಳಿಗೆ ಒಬ್ಬ ಶುಶ್ರೂಷಕಿ 8 ಗಂಟೆಗಳ ಪಾಳಿಯಂತೆ ಕೆಲಸ ನಿರ್ವಹಿಸುವರು. ರೋಗಿಗಳ ಸಂಖ್ಯೆ ಆಧರಿಸಿ ಎಷ್ಟು ಮಂದಿ ಈ ಕೇಂದ್ರಗಳಲ್ಲಿ ಕೆಲಸ ಮಾಡಬೇಕು ಎನ್ನುವುದನ್ನು ಮಾರ್ಗಸೂಚಿಯಲ್ಲಿ ಸರ್ಕಾರವು ತಿಳಿಸಿದೆ.
ಟ್ರಕ್‌ಟರ್ಮಿನಲ್‌ನಲ್ಲಿ ಸಕಲ ವ್ಯವಸ್ಥೆ: ಟ್ರಕ್ ಟರ್ಮಿನಲ್‌ನ ಕ್ರೀಡಾ ಸಮುಚ್ಚಯದಲ್ಲಿ ರೂಪಿಸುತ್ತಿರುವ ಕೋವಿಡ್ ಕೇರ್ ಸೆಂಟರ್‌ನಲ್ಲಿ 400 ಮಂದಿ ರೋಗಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ತಳಮಹಡಿ ಮತ್ತು ಮೊದಲ ಮಹಡಿ, ಎರಡನೇ ಮತ್ತು ಮೂರನೇ ಮಹಡಿಯಲ್ಲಿ ವಸತಿ ವ್ಯವಸ್ಥೆ ರೂಪಿಸಲಾಗಿದೆ. ಗಾಳಿ ಮತ್ತು ಬೆಳಕಿನ ವ್ಯವಸ್ಥೆಗಾಗಿ ಕಿಟಕಿಗಳನ್ನು ಮಾರ್ಪಡಿಸಲಾಗಿದೆ. ಸ್ನಾನಕ್ಕೆ, ಕುಡಿಯುವುದಕ್ಕೆ ಬಿಸಿನೀರು ಸೌಲಭ್ಯ ಇರಲಿದೆ.
ಈಗಾಗಲೇ ಇಲ್ಲಿ ಮಂಚ ಮತ್ತು ಹಾಸಿಗೆಗಳನ್ನು ಅಳವಡಿಸಲಾಗಿದೆ. ಸಮುಚ್ಚಯದಲ್ಲಿ ಕೊಳವೆಬಾವಿ ಇದ್ದು ಮೂರು ಸಂಪ್‌ಗಳಲ್ಲಿ ನೀರು ಸಂಗ್ರಹಿಸಬಹುದು. ಈ ಸಮುಚ್ಚಯದಲ್ಲಿ ಪುರುಷ ರೋಗಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಿದರೆ ಸಮೀಪದ ಹಾಸ್ಟೆಲ್‌ನಲ್ಲಿ ಮಹಿಳಾ ರೋಗಿಗಳಿಗೆ ಮೀಸಲಿಡಲಾಗಿದೆ.