ಕೊರೋನಾ ವೈರಸ್ ಇಡೀ ಜಗತ್ತನೇ ವ್ಯಾಪಿಸಿ ಲಕ್ಷಾಂತರ ಮಂದಿಯನ್ನು ಪ್ರಾಣವನ್ನು ತೆಗೆಯುತ್ತಿದೆ ಹಾಗೂ ಕೊಟ್ಯಾಂತರ ಜನರು ನರಳುವಂತೆ ಮಾಡಿದೆ, ಇದರಿಂದಾಗೊ ಅದೆಷ್ಟೋ ರಾಷ್ಟಗಳು ಆರ್ಥಿಕವಾಗಿ ಸೊರಗಿ ಹೋಗಿ ನಿರುದ್ಯೋಗದ ಸಮಸ್ಯೆ ಸೇರಿದಂತೆ ಹಲವು ಮೂಲಭೂತ ಸಮಸ್ಯೆಗಳು ಬಹಳವಾಗಿ ಜನರನ್ನು ಕಾಡುತ್ತಿದೆ. ಇಷ್ಟೆಕ್ಕೆಲ್ಲಾ ಕಾರಣವಾಗಿರುವ ಕೊರೋನಾ ವೈರಸ್ ಅನ್ನು ನಿರ್ನಾಮ ಮಾಡುವ ಸಲುವಾಗಿ ಪ್ರಪಂಚದ ಹಲುವು ರಾಷ್ಟ್ರಗಳು ಕೊರೋನಾ ವೈರಸ್ ಗೆ ಚಿಕಿತ್ಸೆಯನ್ನು ನೀಡಲು ಔಷಧಿಯನ್ನು ಸಿದ್ದಪಡಿಸುತ್ತಿದ್ದಾರೆ. ಕೆಲವು ಔಷಧಿಗಳು ಈಗಾಗಲೇ ಕ್ಲಿನಿಕಲ್ ಟ್ರಯಲ್ಸ್ ಗೆ ಸಿದ್ದವಾಗಿದೆ. ಇದರ ಜೊತೆಗೆ ಭಾರತೀಯ ಪ್ರಾಚೀನ ಔಷಧೀಯ ಪದ್ದತಿಯಾದ ಆಯುರ್ವೇಧ ಪದ್ದತಿಯ ಮೂಲಕ ಕೊರೋನಾ ವೈರಸ್ ಅನ್ನು ನಾಶಪಡಿಸುತ್ತದೆ ಎಂದು ಅನೇಕ ಆಯುರ್ವೇದಿಕ್ ತಜ್ಞರು ಹೇಳುತ್ತಲೇ ಇದ್ದರು ಆದರೆ ಈಗ ಈ ವಿಷಯ ಅಮೇರಿಕಾವನ್ನು ತಲುಪಿ ಅಲ್ಲಿ ಇದರ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹುಟ್ಟಿಕೊಳ್ಳುತ್ತಿದೆ.
ಹೌದು ಇಡೀ ವಿಶ್ವವನ್ನೇ ಕಾಡುತ್ತಿರುವ ಮಾರಣಾಂತಿಕ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಮತ್ತು ಅಮೆರಿಕ ಕೈ ಜೋಡಿಸಿದ್ದು, ಉಭಯ ದೇಶಗಳ ವೈದ್ಯಕೀಯ ವಿಧಾನಗಳನ್ನು ಸಮೀಕರಣಗೊಳಿಸಿ ಮಹಾಮಾರಿಗೆ ಮದ್ದು ಕಂಡುಹಿಡಿಯಲು ಮುಂದಾಗಿದ್ದಾರೆ.
ಈ ಜಂಟಿ ಸಂಶೋಧನೆಯಲ್ಲಿ ಭಾರತೀಯ ಪುರಾತನ ವೈದ್ಯಕೀಯ ಪದ್ಧತಿಯಾದ ಆಯುರ್ವೇದವನ್ನು ಪ್ರೋತ್ಸಾಹಿಸುವ ಕಾರ್ಯದ ಜತೆಗೆ ಕೊರೊನಾ ರೋಗಕ್ಕೆ ಮದ್ದು ಕಂಡುಹಿಡಿಯುವ ಜಂಟಿ ಕ್ಲಿನಿಕಲ್ ಟ್ರಯಲ್ಸ್‍ಗೆ ಉಭಯ ದೇಶಗಳ ಖ್ಯಾತನಾಮರು ತೊಡಗಿಸಿಕೊಂಡಿದ್ದಾರೆ.
ಕೋವಿಡ್ ಚಿಕಿತ್ಸೆಗೆ ಆಯುರ್ವೇದ ಮದ್ದಾಗಬಲ್ಲದು ಎಂಬ ಹೇಳಿಕೆಗಳ ನಡುವೆಯೇ ಆಯುರ್ವೇದ ಔಷಧಗಳನ್ನು ಕೋವಿಡ್ ವೈರಸ್ ನಿಯಂತ್ರಣಕ್ಕಾಗಿ ಕ್ಲಿನಿಕಲ್ ಪ್ರಯೋಗಕ್ಕೆ ಒಳಪಡಿಸಲು ಭಾರತ ಮತ್ತು ಅಮೆರಿಕದ ಆಯುರ್ವೇದ ವೈದ್ಯರು ಮತ್ತು ಸಂಶೋಧಕರು ಮುಂದಾಗಿದ್ದಾರೆ.
ಉಭಯ ರಾಷ್ಟ್ರಗಳ ಆಯುರ್ವೇದ ಪರಿಣಿತರ ತಂಡ ಜಂಟಿಯಾಗಿ ಆಯುರ್ವೇದ ಔಷಧಗಳನ್ನು ಕೋವಿಡ್ ವೈರಸ್ ನಿಯಂತ್ರಣಕ್ಕಾಗಿ ಕ್ಲಿನಿಕಲ್ ಪ್ರಯೋಗಕ್ಕೆ ಒಳಪಡಿಸಲು ಯೋಜಿಸಿದೆ ಎಂದು ಅಮೆರಿಕದಲ್ಲಿರುವ ಭಾರತದ ರಾಯಭಾರಿ ತರಣ್‌ಜಿತ್ ಸಿಂಗ್ ಸಂಧು ತಿಳಿಸಿದ್ದಾರೆ. ಭಾರತೀಯ ಮೂಲದ ವಿಜ್ಞಾನಿಗಳು, ಶಿಕ್ಷಣ ತಜ್ಞರು ಹಾಗೂ ವೈದ್ಯರ ಜತೆ ನಡೆಸಿದ ಸಂವಾದದಲ್ಲಿ ಅವರು ಈ ಕುರಿತು ಮಾಹಿತಿ ನೀಡಿದ್ದು. ಕೋವಿಡ್ ವಿರುದ್ಧದ ಹೋರಾಟದಲ್ಲಿ ಉಭಯ ರಾಷ್ಟ್ರಗಳ ಆಯುರ್ವೇದ ತಜ್ಞರು ಒಟ್ಟಾಗಿ ಕೆಲಸ ಮಾಡಲು ಮುಂದಾಗಿದ್ದಾರೆ. ಜ್ಞಾನ ಮತ್ತು ಸಂಶೋಧನಾ ಸಂಪನ್ಮೂಲಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಭಾರತದ ಕನಿಷ್ಟ ಮೂರು ಲಸಿಕೆ ತಯಾರಿಕಾ ಕಂಪನಿಗಳು ಈ ನಿಟ್ಟಿನಲ್ಲಿ ಅಮೆರಿಕದ ಸಂಸ್ಥೆಗಳ ಜತೆ ಸಹಯೋಗ ಹೊಂದಿವೆ. ಭಾರತ-ಅಮೆರಿಕ ವಿಜ್ಞಾನ ತಂತ್ರಜ್ಞಾನ ವೇದಿಕೆ (ಐಯುಎಸ್‌ಎಸ್‌ಟಿಎಫ್) ಇದಕ್ಕೆ ಸಹಕಾರ ನೀಡುತ್ತಿದೆ ಎಂದು ಅವರು ಹೇಳಿದರು.