ಕೊರೋನಾ ವೈರಸ್ ಇಡೀ ಪ್ರಪಮಚದಾಧ್ಯಂತ ಹೆಚ್ಚಾಗುತ್ತಿದ್ದು ಈಗಾಗಲೇ ಲಕ್ಷಾಂತರ ಮಂದಿ ಸಾವನ್ನಪ್ಪಿದ್ದಾರೆ ಇದರಿಂದಾಗಿ ಪ್ರಪಮಚದ ಎಲ್ಲಾ ದೇಶದಲ್ಲೂ ಕೂಡ ಕೊರೋನಾ ಭೀತಿ ಎದುರಾಗಿದೆ ಇದರಿಂದಾಗಿ ಪ್ರಪಂಚದ ಎಲ್ಲಾ ದೇಶಗಳ ಆರ್ಥಿಕ ಪರಿಸ್ಥಿತಿ ಕುಸಿದೆ. ಜೊತೆಗೆ ಅನೇಕ ಉದ್ಯಮಗಳು ನಿಂತಿದ್ದು ನಿರುದ್ಯೋಗ ಸಮಸ್ಯೆ ಎದುರಾಗಿ ಸಾಕಷ್ಟು ಜನರು ನಿರ್ಗತಿಕರಾಗಿದ್ದಾರೆ ಈ ಜಾಗತಿಕ ಸಮಸ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಕೊರೋನಾ ವೈರಸ್ ಅನ್ನು ಜಗತ್ತಿನ ಅನೇಕ ರಾಷ್ಟ್ರಗಳು ತಯಾರಿಸುತ್ತಿವೆ ಅದೇ ರೀತಿ ರಷ್ಯಾ ಕೂಡ ಕೊರೋನಾ ಗೆ ಔಷಧಿಯನ್ನು ಸಂಶೋಧಿಸಿದ್ದು ಅದು ಕ್ಲಿನಿಕಲ್ ಪ್ರಯೋಗದಲ್ಲೂ ಕೂಡ ಪಾಸ್ ಆಗಿದೆ. ಅಷ್ಟಕ್ಕೂಆ ಔಷಧಿ ಬಿಡುಗಡೆ ಯಾಗುವುದು ಎಂದು ಗೊತ್ತಾ..?
ಸೆಚೆನೋವ್ದಲ್ಲಿ ವಿಶ್ವದ ಮೊದಲ ಕೊರೊನಾ ವೈರಸ್ ಲಸಿಕೆಯ ಕ್ಲಿನಿಕಲ್ ಪ್ರಯೋಗವನ್ನು ಮಾಸ್ಕೋ ವೈದ್ಯಕೀಯ ವಿಶ್ವವಿದ್ಯಾಲಯ ಪೂರ್ಣಗೊಳಿಸಿದೆ ಎಂದು ಟ್ರಾನ್ಸ್ಲೇಷನಲ್ ಮೆಡಿಸಿನ್ ಅಂಡ್ ಬಯೋ ಟೆಕ್ನಾಲಜಿ ಸಂಸ್ಥೆಯ ನಿರ್ದೇಶಕ ವಾಡಿಮ್ ತಾರಸೊವ್ ತಿಳಿಸಿದ್ದಾರೆ.
ಈ ಮೂಲಕ ರಷ್ಯಾ ಮಾನವರ ಮೇಲೆ ಕೊರೋನಾಗೆ ಲಸಿಕೆಯ ಪ್ರಾಯೋಗಿಕ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ಮೊದಲ ರಾಷ್ಟ್ರವಾಗಿದೆ. ಸಂಶೋಧನೆಯ ಫಲಿತಾಂಶಗಳು ಔಷಧಿಗಳ ಪರಿಣಾಮವನ್ನು ಸಾಬೀತುಪಡಿಸಿವೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿವೆ.
ಸೆಕೆನೋವ್ ವಿಶ್ವವಿದ್ಯಾಲಯದ ಮುಖ್ಯ ಸಂಶೋಧಕಿ ಎಲೆನಾ ಸ್ಮೊಲ್ಯಾರ್ಚುಕ್ ಅವರು ರಷ್ಯಾದ ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿ, ಲಸಿಕೆಗಾಗಿ ಮಾನವ ಪ್ರಯೋಗಗಳು ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಂಡಿವೆ ಮತ್ತು ಅವುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಸಂಶೋಧನೆ ಪೂರ್ಣಗೊಂಡಿದೆ ಮತ್ತು ಲಸಿಕೆ ಸುರಕ್ಷಿತವಾಗಿದೆ ಎಂದು ಅದು ಸಾಬೀತಾಗಿದೆ. ಜುಲೈ 15 ಮತ್ತು ಜುಲೈ 20 ರಂದು ಸ್ವಯಂಸೇವಕರನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಸ್ಮೋಲಿಯಾರ್ಚುಕ್ ಉಲ್ಲೇಖಿಸಿದ್ದಾರೆ. ಆದರೆ ಈ ಲಸಿಕೆ ವಾಣಿಜ್ಯ ಉತ್ಪಾದನಾ ಹಂತಕ್ಕೆ ಯಾವಾಗ ಪ್ರವೇಶಿಸುತ್ತದೆ ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಸೆಕೆನೋವ್‍ವಿಶ್ವ ವಿದ್ಯಾನಿಲಯವು ಜೂ.18 ರಂದು ರಷ್ಯಾದ ಗಮಾಲಿ ಇನ್ಸಿಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಮತ್ತು ಮೈಕ್ರೋಬಯೋಲಜಿ ತಯಾರಿಸಿದ ಲಸಿಕೆಯ ಕ್ಲಿನಿಕಲ್ ಪ್ರಯೋಗ ಪ್ರಾರಂಭಿಸಿತ್ತು. ಕ್ಲಿನಿಕಲ್ ಪ್ರಯೋಗದ ಉದ್ದೇಶ ಮಾನವನ ಆರೋಗ್ಯಕ್ಕೆ ಲಸಿಕೆಯ ಸುರಕ್ಷತೆಯನ್ನು ತೋರಿಸುವುದಾಗಿತ್ತು. ಅದನ್ನು ಯಶಸ್ವಿಯಾಗಿ ಮಾಡಲಾಗಿದೆ.
ಲಸಿಕೆಯು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಲಸಿಕೆಗಳ ಸುರಕ್ಷತೆಗೆ ಅನುಗುಣವಾಗಿದೆ ಎಂದು ಸೆಚೆನೊವ್ ವಿಶ್ವವಿದ್ಯಾಲಯದ ಮೆಡಿಕಲ್ ಪ್ಯಾರಸಿಟಾಲಜಿ, ಟ್ರೋಪಿಕಲ್ ಅಂಡ್ ವೆಕ್ಟರ್ ಬೋರ್ನ್ ಡಿಸೀಸ್ ವಿಭಾಗದ ನಿರ್ದೇಶಕ ಅಲೆಕ್ಸಾಂಡರ್ ಲುಕಾಶೆವ್ ಹೇಳಿದ್ದಾರೆ.
ಹೆಚ್ಚಿನ ಲಸಿಕೆಗಳ ಉತ್ಪಾದನೆ ಉತ್ಪಾದಕರನ್ನು ಅನುಸರಿಸಿ ಇರಲಿದೆ. ಸಂಕೀರ್ಣತೆ ಮತ್ತು ಕೊರೊನಾ ಪ್ರಕರಣಗಳ ಏರಿಕೆಯನ್ನು ಗಮನದಲ್ಲಿಟ್ಟುಕೊಂಡು ಲಸಿಕೆ ಉತ್ಪಾದನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಗಮಾಲಿ ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಪಡೆದ ಮಾಹಿತಿಯು, ಮೊದಲ ಮತ್ತು ಎರಡನೆ ಗುಂಪುಗಳ ಸ್ವಯಂಸೇವಕರು ಕೊರೋನಾ ವೈರಸ್ ವಿರುದ್ಧ ಲಸಿಕೆ ಚುಚ್ಚುಮದ್ದಿನ ನಂತರ ರೋಗನಿರೋಧಕ ಪ್ರತಿಕ್ರಿಯೆಯನ್ನು ರೂಪಿಸುತ್ತಿದ್ದಾರೆಂದು ಸಾಬೀತುಪಡಿಸುತ್ತದೆ ಎಂದು ರಷ್ಯಾದ ರಕ್ಷಣಾ ಸಚಿವಾಲಯದ ಹಿಂದಿನ ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಓ) ಪ್ರಕಾರ ಪ್ರಸ್ತುತ ಕನಿಷ್ಠ 21 ಲಸಿಕೆಗಳು ಪ್ರಮುಖ ಪ್ರಯೋಗಗಳಲ್ಲಿವೆ.