ಕೊರೋನಾ ವೈರಸ್ ಗೆ ಲಸಿಕೆಯನ್ನು ಇಡೀ ವಿಶ್ವದಾಧ್ಯಂತ ಸಾಕಷ್ಟು ದೇಶಗಳು ಸಂಶೋಧಿಸುತ್ತಿದ್ದು, ಈಗಾಗಲೇ ಸಾಕಷ್ಟು ದೇಶಗಳು ಔಷಧಿಯನ್ನು ಸಂಶೋಧಿಸಿದ್ದು ಕ್ಲಿನಿಕಲ್ ಪ್ರಯೋಗವನ್ನು ನಡೆಸುತ್ತಿದೆ. ಅದೇ ರೀತಿ ದೇಶೀಯ ಲಸಿಕೆಯೂ ಕೂಡ ಸಿದ್ದವಾಗಿ ಕ್ಲಿನಿಕಲ್ ಪರೀಕ್ಷೆಯನ್ನು ನಡೆಸುತ್ತಿದೆ. ಆದರೆ ಮತ್ತೊಂದು  ದೇಶ ಕೊರೋನಾ ವೈರಸ್ ಗೆ ಔಷಧಿಯನ್ನು ಸಂಶೋಧಿಸಿ ಮಾರುಕಟ್ಟೆಗೆ ತರಲು ಸಿದ್ದತೆಯನ್ನು ನಡೆಸಿದ್ದಾರೆ, ಅಷ್ಟಕ್ಕೂ ಕೊರೋನಾ ಗೆ ಔಷಧಿಯನ್ನು ಸಂಶೋಧಿಸಿದ ದೇಶ ಯಾವುದು ಗೊತ್ತಾ..?

 

ಅಂತೂ ಕರೊನಾಗೆ ನಿರೀಕ್ಷೆಗೂ ಮುನ್ನವೇ ಲಸಿಕೆ ಸಜ್ಜಾಗುತ್ತಿದೆ. ಸೆಪ್ಟಂಬರ್​ ಅಥವಾ ವರ್ಷಾಂತ್ಯಕ್ಕೆ ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ ತಜ್ಞರಂತೂ ಮುಂದಿನ ವರ್ಷದ ಆರಂಭಕ್ಕೆ ಸಿದ್ಧವಾಗಬಹುದೆಂದು ಅಂದಾಜಿಸಿದ್ದರು.

 

ದೇಶಿಯ ಕರೊನಾ ಲಸಿಕೆ ಕೊವಾಕ್ಸಿನ್​ ಕೂಡ ಆಗಸ್ಟ್​ 15ಕ್ಕೆ ಸಿದ್ಧವಾಗಲಿದೆ ಎಂದೇ ಬಿಂಬಿಸಲಾಗಿತ್ತು. ಆದರೆ, ಮೊದಲ ಹಂತದ ಕ್ಲಿನಿಕಲ್​ ಟ್ರಯಲ್​ ಈಗ ಆರಂಭವಾಗಿದೆ. ಹೀಗಾಗಿ ಸಿದ್ಧಗೊಳ್ಳಲು ಇನ್ನೂ ಕನಿಷ್ಠ ಮೂರು ತಿಂಗಳಾದರೂ ಬೇಕು. ನಂತರ ಎರಡನೇ ಹಂತ ಶುರುವಾಗಬೇಕಿದೆ. ಅಮೆರಿಕದ ಮಾಡೆರ್ನಾ ಹಾಗೂ ಬ್ರಿಟನ್ನಿನ ಆಕ್ಸ್​ಫರ್ಡ್​ ವಿವಿ ಲಸಿಕೆಗಳು ಎರಡನೇ ಹಾಗೂ ಮೂರನೇ ಹಂತದ ಕ್ಲಿನಿಕಲ್​ ಟ್ರಯಲ್​ ನಡೆಸುತ್ತಿವೆ. ಈ ಪ್ರಕ್ರಿಯೆಗಳು ಮುಗಿಯಲು ಕೆಲ ತಿಂಗಳುಗಳು ಬೇಕು ಎನ್ನುವುದು ಕಂಪನಿಗಳ ವಾದ.

 

ಆದರೆ, ಇದೆಲ್ಲದರ ನಡುವೆ ರಷ್ಯಾದ ಲಸಿಕೆ ಸದ್ದಿಲ್ಲದೆ ಸಂಶೋಧನೆಯನ್ನು ಮುಗಿಸಿ ಮಾರುಕಟ್ಟೆಗೆ ಬರಲು ಸಜ್ಜಾಗಿದೆ. ಇದನ್ನು ಅಲ್ಲಿನ ಸರ್ಕಾರವೇ ಅಭಿವೃದ್ಧಿಪಡಿಸಿರುವುದು ವಿಶೇಷವಾಗಿದೆ. ಮಾಸ್ಕೋದ ಸೆಚೆನೋವ್​ ವಿಶ್ವವಿದ್ಯಾಲಯ ಸರ್ಕಾರಿ ಅಧೀನದ ಗಮಾಲಿ ಸಾಂಕ್ರಾಮಿಕ ರೋಗ ಹಾಗೂ ಸೂಕ್ಷ್ಮ ಜೀವಿಶಾಸ್ತ್ರ ಸಂಸ್ಥೆಯೊಂದಿಗೆ ಸೇರಿ ಲಸಿಕೆ ಅಭಿವೃದ್ಧಿ ಪಡಿಸಿದೆ.

 

ಕ್ಲಿನಿಕಲ್​ ಟ್ರಯಲ್​ ಮುಕ್ತಾಯವಾಗಿದ್ದು, ಲಸಿಕೆ ಪರಿಣಾಮಕಾರಿ ಹಾಗೂ ಮಾನವರ ಬಳಕೆಗೆ ಸುರಕ್ಷಿತವಾಗಿದೆ ಎಂದು ಸಂಸ್ಥೆಯ ತಜ್ಞರು ಮಾಹಿತಿ ನೀಡಿದ್ದಾರೆ. ರಕ್ಷಣಾ ಇಲಾಖೆಯ ಯೋಧರ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿದೆ. ಲಸಿಕೆ ಪರಿಣಾಮಕಾರಿಯಾಗಿದೆ ಎನ್ನುವ ಫಲಿತಾಂಶ ದೊರೆತಿದೆ ಎಂದು ಸಂಶೋಧಕಿ ಎಲೆನಾ ಸ್ಮೊಲ್ಯಾರ್​ಚುಕ್​ ರಷ್ಯನ್​ ಸುದ್ದಿ ಸಂಸ್ಥೆ ತಾಸ್​ಗೆ ತಿಳಿಸಿದ್ದಾರೆ.

 

ಲಸಿಕೆ ಆಗಸ್ಟ್​ ಮಧ್ಯದ ವೇಳೆಗೆ ಜನರ ಬಳಕೆಗೆ ಲಭ್ಯವಾಗಲಿದೆ ಎಂದು ಗಮಾಲಿ ಸಂಸ್ಥೆ ನಿರ್ದೇಶಕ ಅಲೆಕ್ಸಾಂಡರ್​ ಗಿಂಟ್ಸ್​ಬರ್ಗ್​ ಮಾಹಿತಿ ನೀಡಿದ್ದಾರೆ. ಸಪ್ಟೆಂಬರ್​ ವೇಳಗೆ ಖಾಸಗಿ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ಇದರ ಉತ್ಪಾದನೆ ಆರಂಭಿಸಲಿವೆ ಎಂದು ತಿಳಿಸಿದ್ದಾರೆ.

 

ರಷ್ಯಾ ಲಸಿಕೆ ಎರಡು ಹಂತದ ಕ್ಲಿನಿಕಲ್​ ಪ್ರಯೋಗವನ್ನು ಮಾತ್ರ ಮಾಡಿದ್ದು, ವಿಶ್ವಸಂಸ್ಥೆ ಮಾನದಂಡದ ಪ್ರಕಾರ ಮೂರನೇ ಹಂತದ ಕ್ಲಿನಿಕಲ್​ ಪ್ರಯೋಗವನ್ನು ನಡೆಸಬೇಕು. ಆದರೆ, ಖಚಿತ ಫಲಿತಾಂಶಗಳು ದೊರೆತಲ್ಲಿ ಮಾತ್ರ ಬೃಹತ್​ ಪ್ರಮಾಣದಲ್ಲಿ ಉತ್ಪಾದನೆಗೆ ಅವಕಾಶ ನೀಡಲಾಗುತ್ತದೆ. ರಷ್ಯಾದಲ್ಲಿ ಕೆಲ ದಿನಗಳ ಬಳಕೆ ಬಳಿಕವಷ್ಟೇ ಇದು ಇತರೆಡೆಗಳಲ್ಲಿ ಬಳಕೆಗೆ ಪರಿಗಣಿಸಬಹುದು ಎಂದು ಹೇಳಲಾಗಿದೆ. ಮೊದಲ ಕ್ಲಿನಿಕಲ್​ ಪ್ರಯೋಗಕ್ಕೆ ಒಳಗಾದ ಯೋಧರು ಜುಲೈ 13ರಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಎರಡನೇ ಹಂತದ ಪ್ರಯೋಗದಲ್ಲಿ ಭಾಗಿಯಾದವರು ಜುಲೈ 20ರಂದು ಡಿಸ್ಚಾರ್ಜ್​ ಆಗಲಿದ್ದಾರೆ.

 

Find out more: