ದಿನದಿಂದ ದಿನಕ್ಕೆ ಕೊರೋನಾ ಅಬ್ಬರ ಹೆಚ್ಚಾಗುತ್ತಿದ್ದು ಇಂದು ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮೂರು ಸಾವಿರದ ಗಡಿಯನ್ನು ತಾಟಿದೆ ಅದರಲ್ಲೂ ರಾಜ್ಯರಾಜಧಾನಿಯಲ್ಲಿ ಸಾವಿರದ ಗಡಿಯನ್ನು ದಾಡಿ ಮುನ್ನುಗ್ಗುತ್ತಿದೆ, ಅದೇ ರೀತಿ ಸಾವಿನ ಸಂಖ್ಯೆ ಯೂ ಕೂಡ ಹೆಚ್ಚಾಗುತ್ತಿದೆ, ಅಷ್ಟಕ್ಕೂ ಇಂದು ರಾಜ್ಯದಲ್ಲಿ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ ಎಷ್ಟು ಗೊತ್ತಾ..?

 

ರಾಜ್ಯದಲ್ಲಿಂದು ಕೋರೋನಾ ಅಟ್ಟಹಾಸ ಮುಂದುವರೆದಿದ್ದು ಕಳೆದ 24 ಗಂಟೆಗಳಲ್ಲಿ 3176 ಜನರಲ್ಲಿ ಕೋವಿಡ್ -19 ವೈರಸ್ ಇರುವುದು ಪತ್ತೆಯಾಗಿದೆ. ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ರಾಜ್ಯದಲ್ಲಿ 3000 ಕ್ಕೂ ಹೆಚ್ಚು ಮಂದಿಗೆ ಕೊರೋನಾ ತಗುಲಿದ್ದಿ, ಸಾವಿನಲ್ಲೂ ಕೂಡ ಕೊರೋನಾ ದಾಖಲೆ ಬರೆದಿದೆ, ರಾಜ್ಯದಲ್ಲಿ ಇಂದು ಮಹಾಮಾರಿಗೆ ಬರೋಬ್ಬರಿ 87 ಮಂದಿ ಜೀವ ಚೆಲ್ಲಿದ್ದಾರೆ, ಮೂಲಕ ಕರ್ನಾಟಕದಲ್ಲಿ ಕೊರೋನಾ ಸಾವಿನ ಸಂಖ್ಯೆ 928 ಕ್ಕೇರಿದೆ.

 

ಬೆಂಗಳೂರಿನಲ್ಲಿ ಇಂದು 60 ಕೊರೋನಾ ಸೋಂಕಿತರು ಕಿಲ್ಲರ್ ಕೊರೋನಾಗೆ ಬಲಿಯಾಗಿದ್ದಾರೆ. ಮೂಲಕ ಬೆಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 437 ಕ್ಕೆ ಏರಿಕೆಯಾಗಿದೆ ಬೆಂಗಳೂರು ಸೇರಿದಂತೆ ಆರಕ್ಕೂ ಹೆಚ್ಚು ಜಿಲ್ಲೆಗಳು ಹಾಗೂ ರಾಜ್ಯದ ವಿವಿಧೆಡೆ ಲಾಕ್ ಡೌನ್ ಜಾರಿಯಾದ ಮೊದಲ ದಿನವೇ ಭಾರಿ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗಿದ್ದು ಆತಂಕ ಮೂಡಿಸಿದೆ.

 

ಮತ್ತೊಮ್ಮೆ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ರಕರಣ ದಾಖಲಾಗಿದ್ದು ಇಂದು ಮಹಾನಗರಿಯಲ್ಲಿ 1975 ಮಂದಿಗೆ ಕೊರೋನಾ ದೃಢಪಟ್ಟಿದೆ. ಆತಂಕಕಾರಿ ವಿಷಯವೆಂದರೆ ಶಿವಮೊಗ್ಗ ಮೂಲದ ಸ್ವಾಮೀಜಿಯೊಬ್ಬರೂ ಸಹ ಕರುನಾಗೆ ಬಲಿಯಾಗಿದ್ದಾರೆ.

ಇಂದು 1076 ಮಂದಿ ಕೊರೋನಾ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 18466 ಮಂದಿ ಕಿಲ್ಲರ್ ಕೊರೋನಾದಿಂದ ಪಾರಾಗಿದ್ದಾರೆ, ಇನ್ನು 597 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

 

ರಾಜ್ಯದಲ್ಲಿ ಒಟ್ಟು 27853 ಆಕ್ಟಿವ್ ಕೇಸ್ ಗಳಿದ್ದು, ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 47253 ಕ್ಕೆ ಏರಿಕೆಯಾಗಿದೆ.

ತಾನು ಸಂಶೋಧಿಸಿರುವ ಕೋವಿಡ್-19 ಲಸಿಕೆಯು ಜುಲೈ 27ರೊಳಗೆ ಮಾನವರ ಮೇಲೆ ಪ್ರಯೋಗಿಸುವ ಅಂತಿಮ ಹಂತವನ್ನು ಪ್ರವೇಶಿಸಲಿದೆಯೆಂದು ಅಮೆರಿಕದ ಬಯೋಟೆಕ್ ಸಂಸ್ಥೆ ಮೊಡೆರ್ನಾ ಮಂಗಳವಾರ ಘೋಷಿಸಿದೆ.

 

ಲಸಿಕೆಯ ಮೂರನೆ ಹಂತದ ಟ್ರಯಲ್ನಲ್ಲಿ ಅಮೆರಿಕದಾದ್ಯಂತ 30 ಸಾವಿರ ಮಂದಿ ಪಾಲ್ಗೊಳ್ಳಲಿದ್ದು, ಅವರಲ್ಲಿ ಅರ್ಧಾಂಶದಷ್ಟು ಮಂದಿ 100 ಮೈಕ್ರೋಗ್ರಾಂ ಡೋಸ್ ಲಸಿಕೆಯನ್ನು ಪಡೆಯಲಿದ್ದಾರೆ ಉಳಿದ ಅರ್ಧಾಂಶದಷ್ಟು ಮಂದಿ ಮಾತ್ರೆ ರೂಪದಲ್ಲಿ ಔಷಧಿಯನ್ನು ಸ್ವೀಕರಿಸಲಿದ್ದಾರೆ ಎಂದು ಮೊಡೆರ್ನಾದ ಹೇಳಿಕೆ ತಿಳಿಸಿದೆ.

 

ಲಸಿಕೆಯು ಸುರಕ್ಷಿತವಾದುದು ಹಾಗೂ ಸಾರ್ಸ್-ಕೋವಿಡ್2 ವೈರಸ್ ನಂತಹ ಸೋಂಕನ್ನು ತಡೆಗಟ್ಟಬಲ್ಲದು ಎಂಬುದನ್ನು ನಿರೂಪಿಸುವ ರೀತಿಯಲ್ಲಿ ಲಸಿಕೆಯನ್ನು ಸಿದ್ಧಪಡಿಸಲಾಗಿದೆ ಎಂದು ಮೊಡೆರ್ನಾ ತಿಳಿಸಿದೆ. ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಬಳಿಕವೂ ಅದರ ಮೇಲಿನ ಅಧ್ಯಯನವನ್ನು 2022 ಅಕ್ಟೋಬರ್ 27ರವರೆಗೂ ನಡೆಸಲಾಗುವುದು ಎಂದು ಕ್ಲಿನಿಕಲ್ ಟ್ರಯಲ್ಸ್.ಜಿಓವಿ ಆನ್ಲೈನ್ ಪತ್ರಿಕೆಯ ವರದಿಯು ತಿಳಿಸಿದೆ.

 

Find out more: