ಕೊರೋನಾ ಸೋಂಕು ಪ್ರತಿನಿತ್ಯ ರಾಜ್ಯದಲ್ಲಿ ಅಬ್ಬರಿಸುತ್ತಿದೆ ಇದರಿಂದಾಗಿ ರಾಜ್ಯದ ಮೂಲೆ ಮೂಲೆಯಿಂದಲೂ ಕೂಡ ಸಾಕಷ್ಟು ಕೊರೋನಾ ಪ್ರಕರಣಗಳು ದಾಖಲಾಗುತ್ತಿದೆ, ಅದೇ ರೀತಿ ಕೊರೋನಾ ಇಂದಾಗಿ ಸಾಯುವ ಪ್ರಮಾಣವೂ ಕೂಡ ಹೆಚ್ಚಾಗುತ್ತಿದೆ.
ಅದರಂತೆ ಇಂದೂ ಕೂಡ ರಾಜ್ಯದಲ್ಲಿ ಕೊರೋನಾ ವೈರಸ್ 4ಸಾವಿರದ ಗಡಿಯನ್ನು ದಾಡಿ ಮುಂದೆ ಸಾಗಿದೆ ಅದರಂತೆ ಸಾವಿನ ಪ್ರಮಾಣವೂ ಕೂಡ ದಾಖಲೆಯ ಮಟ್ಟದಲ್ಲಿ ಹೆಚ್ಚಾಗಿದೆ. ಅಷ್ಟಕ್ಕೂ ಇಂದು ದಾಖಲಾದ ಕೊರೋನಾ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ..?
ಶನಿವಾರವೂ ರಾಜ್ಯದಲ್ಲಿ ಕೊರೊನಾ ಮಹಾಮಾರಿ ಮತ್ತೆ ಅಬ್ಬರಿಸಿದ್ದು,ಒಂದೇ ದಿನ 4537 ಕೋವಿಡ್ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇದರಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 59,652ಕ್ಕೇರಿಕೆಯಾಗಿದೆ.ಜೊತೆಗೆಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿದ್ದು, ಇಂದು 93 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 1240ಕ್ಕೆ ಏರಿಕೆಯಾಗಿದೆ.
ರಾಜ್ಯದ ಏಳು ಜಿಲ್ಲೆಗಳಲ್ಲಿ ಲಾಕ್‌ಡೌನ್ ಇದ್ದರೂ ಸೋಂಕಿತರ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದ್ದು ಶನಿವಾರ 4537 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.ಇದೇ ವೇಳೆ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಅಂಕೆ ಮೀರಿದ್ದು ಶನಿವಾರ 2344 ಮಂದಿಯಲ್ಲಿ ಸೋಂಕು ಕಾಣಿಸಿದೆ.ಬೆಂಗಳೂರಿನಲ್ಲಿ ದಿನೇ ದಿನೆ ಸೋಂಕಿತರ ಸಂಖ್ಯೆ ಸಾವಿರದ ಗಡಿ ದಾಟುತ್ತಿದ್ದು ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ.
ಕೊರೋನಾ ವೈರಸ್ ನಿಂದಾಗಿ ಕಳೆದ 24 ಗಂಟೆಯಲ್ಲಿ ಬೆಂಗಳೂರಿನಲ್ಲಿ 49 ಸೋಂಕಿತರು ಸೇರಿದಂತೆ ರಾಜ್ಯದಲ್ಲಿ ಒಟ್ಟು 93 ಮಂದಿ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ತಿಳಿಸಿದ್ದಾರೆ.
ಉಳಿದಂತೆ ದಕ್ಷಿಣ ಕನ್ನಡ 509 ಧಾರವಾಡದಲ್ಲಿ 186, ಬಳ್ಳಾರಿಯಲ್ಲಿ 155, ಬೆಳಗಾವಿಯಲ್ಲಿ 137, ವಿಜಯಪುರ 175 ಹಾಗೂ ಯಾದಗಿರಿಯಲ್ಲಿ 4 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ.
ಇನ್ನು ಉಳಿದ ಜಿಲ್ಲೆಗಳಲ್ಲಿ 40 - 50 ಪ್ರಕರಣಗಳು ದಾಖಲಾಗಿವೆ .ಇಂದು ಒಂದೇದಿನ 34819 ಮಂದಿಗೆ ಪರೀಕ್ಷೆ ನಡೆಸಲಾಗಿದೆ.ರಾಜ್ಯದಲ್ಲಿ ಒಟ್ಟು 36,631 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ 22,498 ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಕೊರೋನಾ ಮರಣ ಪ್ರಮಾಣ ಶೇ.2.08ರಷ್ಟಿದ್ದರೆ, ಬೆಂಗಳೂರಿನಲ್ಲಿ ಶೇ.2.13ರಷ್ಟಿದೆ.
ಈ ಮಧ್ಯೆ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಆಗುತ್ತಿರುವವರ ಸಂಖ್ಯೆಯೂ ಹೆಚ್ಚಿದ್ದು ಶನಿವಾರ 1018 ಮಂದಿ ಬಿಡುಗಡೆಯಾಗಿದ್ದಾರೆ.ಈ ಮಧ್ಯೆ ಲಘು ಕೋವಿಡ್ ಕಂಡು ಬಂದಲ್ಲಿ ಅಂತಹವರಿಗೆ ಆಸ್ಪತ್ರೆ ಸೇವೆ ಸಲ್ಲದು ಎಂದು ರಾಜ್ಯ ಸರಕಾರ ಫಾರ್ಮಾನು ಹೊರಡಿಸಿದೆ.
ತೀವ್ರ ಮತ್ತು ಮಧ್ಯಮ ಪೀಡಿತರಿಗೆ ಮಾತ್ರ ಚಿಕಿತ್ಸೆ ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆಸ್ಪತ್ರೆಗಳಿಗೆ ಆದೇಶಿಸಿದೆ. ಸೋಂಕಿನ ಲಕ್ಷಣವಿಲ್ಲದವರು ಮತ್ತು ಲಘು ಸೋಂಕು ಉಳ್ಳವರಿಗೆ ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಾಗುವಂತೆ ಇಲ್ಲವೇ ಮನೆಯಲ್ಲಿಯೇ ಪ್ರತ್ಯೇಕವಾಗಿರುವಂತೆ ಸಲಹೆ ನೀಡಲಾಗಿದೆ.
ಈ ಎಲ್ಲದರ ನಡುವೆ ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೊರೋನಾ ಅಟ್ಟಹಾಸಕ್ಕೆ ಬಿಇಎಂಪಿ ಆಯುಕ್ತರ ತಲೆದಂಡವಾಗಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಬೆಂಗಳುರನ್ನು ಸೂಕ್ತವಾಗಿ ಅಣಿಗೊಳಸಿದ ಕಾರಣ ಬಿಬಿರೆಂಪಿ ಆಯುಕ್ತ ಅನಿಲ್ ಕುಮಾರ್ ಅವರನ್ನು ಎತ್ತಂಗಡಿ ಮಾಡಲಾಗಿದೆ.