ಇಡೀ  ದೇಶವನ್ನೇ ಕಿತ್ತು ತಿನ್ನುತ್ತಿರುವ ಕೊರೋನಾ ವೈರಸ್ ಗೆ ರಾಜ್ಯದಲ್ಲಿ ಸಾವಿರಾರು ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇನ್ನು ಲಕ್ಷಾಂತರ ಮಂದಿ ಕೊರೋನಾ ಸೋಂಕಿನಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ, ಇಂತಹ ಒಂದು ಸಂದರ್ಭದಲ್ಲಿ ಕೊರೋನಾ ವೈರಸ್ ಅನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಪ್ರಪಂಚದ  ಎಲ್ಲಾ ರಾಷ್ಟ್ರಗಳು ಕೊರೋನಾಗೆ ಔಷಧಿಯನ್ನು ತಯಾರಿಸಲಾಗುತ್ತಿದೆ. ಅದರಂತೆ ಭಾರತದಲ್ಲೂ ಕೂಡ ಔಷಧಿಯನ್ನು ತಯಾರಿಸಲಾಗಿದ್ದು ಈಗಾಗಲೇ ಎರಡು ಹಂತದ ಪರೀಕ್ಷೆ ಮುಗಿದಿದ್ದು ಮೂರನೇ ಹಂತದ ಕ್ಲಿನಿಕಲ್ ಟೆಸ್ಟ್ ಗೆ ತಯಾರಿಯನ್ನು ನಡೆಸಲಾಗುತ್ತಿದೆ.

 

ಹೌದು ಭಾರತ್ ಬಯೋಟೆಕ್ ಮತ್ತು ಜಿಡಸ್ ​ಕ್ಯಾಡಿಲಾ ಅಭಿವೃದ್ಧಿಪಡಿಸಿರುವ ಕೋವಿಡ್​​ ಲಸಿಕೆ ಕೊವಾಕ್ಸಿನ್​ನ ಮಾನವ ಕ್ಲಿನಿಕಲ್ ಪ್ರಯೋಗವು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಾಳೆಯಿಂದ ನಡೆಯಲಿದೆ. ಈ ಬಗ್ಗೆ ಮಾಹಿತಿ ನೀಡಿರುವ ಏಮ್ಸ್​ ಪ್ರಾಧ್ಯಾಪಕ ಸಂಜಯ್​ ರೈ, ಕೊವಾಕ್ಸಿನ್‌ನ ಮಾನವ ಕ್ಲಿನಿಕಲ್ ಪ್ರಯೋಗಕ್ಕೆ ಏಮ್ಸ್ ಎಥಿಕ್ಸ್ ಸಮಿತಿಯಿಂದ ಅನುಮೋದನೆ ಪಡೆಯಲಾಗಿದೆ. ನಾಳೆಯಿಂದ ದಾಖಲಾತಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು.

 

ಹರ್ಯಾಣದ ರೊಹ್ಟಕ್‌ನಲ್ಲಿರುವ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಜು.17ರಿಂದ ಕೊವಾಕ್ಸಿನ್​​ನ್ನು ಮಾನವರ ಮೇಲೆ ಪ್ರಯೋಗ ಮಾಡಲಾಗುತ್ತಿದೆ. ಹಾಗೇ, ನಾಳೆ (ಜು.20)ಯಿಂದ ಉತ್ತರ ಗೋವಾದ ರೆಡ್ಕರ್​ ಖಾಸಗಿ ಆಸ್ಪತ್ರೆಯಲ್ಲೂ ಕೊವಾಕ್ಸಿನ್​ ಹ್ಯೂಮನ್​ ಟ್ರಯಲ್​ ಪ್ರಾರಂಭವಾಗುತ್ತಿದೆ.

 

ದೇಶಾದ್ಯಂತ ಒಟ್ಟು 12 ವೈದ್ಯಕೀಯ ಸಂಸ್ಥೆಗಳಲ್ಲಿ ಕೊವಾಕ್ಸಿನ್​ ಲಸಿಕೆಯ ಮಾನವರ ಮೇಲಿನ ಪ್ರಯೋಗ ನಡೆಯಲಿದೆ. ಇದೀಗ ಉತ್ತರ ಗೋವಾದ ಆಸ್ಪತ್ರೆಯಲ್ಲೂ ಪ್ರಾರಂಭವಾಗಿದೆ. ನಾವು ಗೋವಾದ ಸ್ವಯಂ ಸೇವಕರ ಮೇಲೆ ನಾಳೆಯಿಂದ ಲಸಿಕೆ ಪ್ರಯೋಗ ಮಾಡುತ್ತಿದ್ದೇವೆ. ಪ್ರಯೋಗಕ್ಕೆ ಒಳಗಾಗಲಿರುವವರ ಸ್ವಾಬ್​​ನ್ನು ದೆಹಲಿಗೂ ಕಳಿಸಲಾಗುವುದು ಎಂದು ರೆಡ್ಕರ್​ ಆಸ್ಪತ್ರೆಯ ಧನಂಜಯ ಲಾಡ್​ ತಿಳಿಸಿದ್ದಾರೆ.

ನಾವು ನಾಳೆಯಿಂದ ಪ್ರಯೋಗ ಶುರು ಮಾಡಿದರೂ ಒಮ್ಮೆಲೆ ಲಸಿಕೆಯನ್ನು ನೀಡುವುದಿಲ್ಲ. ಮೊದಲನೇದಾಗಿ ಅವರ ಸಾಮರ್ಥ್ಯವನ್ನು ಟೆಸ್ಟ್​ ಮಾಡಿಕೊಳ್ಳುತ್ತೇವೆ. ಹಾಗೇ, ದೆಹಲಿಗೆ ಕಳಿಸಿದ ಸ್ವಾಬ್​ನ ರಿಪೋರ್ಟ್​ ಬಂದ ಮೇಲೆ ಲಸಿಕೆ ಪ್ರಯೋಗ ಶುರುವಾಗುತ್ತದೆ ಎಂದಿದ್ದಾರೆ.  

 

ಆರೋಗ್ಯವಂತ ಹಾಗು ಕೋವಿಡ್​-19 ಇಲ್ಲದವರನ್ನು ಪ್ರಯೋಗಕ್ಕೆ ಆಯ್ಕೆ ಮಾಡಿಕೊಳ್ಳಲಾಗುವುದು. 18ರಿಂದ 55 ವರ್ಷ ವಯೋಮಾನದವರ ಮೇಲೆ ಪ್ರಯೋಗಿಸಲಾಗುವುದು ಎಂದು ತಿಳಿಸಿದ್ದಾರೆ.

ಪ್ರಯೋಗದಲ್ಲಿ ಭಾಗವಹಿಸಲು ಇಚ್ಚಿಸುವ ಯಾವುದೇ ಆರೋಗ್ಯವಂತ ವ್ಯಕ್ತಿಯು Ctaiims.covid19@gmail.comಗೆ ಇಮೇಲ್ ಕಳುಹಿಸಬಹುದು. ಇಲ್ಲವೇ SMS ಕಳುಹಿಸಬಹುದು ಅಥವಾ ದೂರವಾಣಿ7428847499ಗೆ ಕರೆ ಮಾಡಬಹುದು. ಮೊದಲ ಮತ್ತು ಎರಡನೇ ಹಂತದಲ್ಲಿ 375 ಸ್ವಯಂಸೇವಕರಲ್ಲಿ 100 ಮಂದಿಯನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ ಎಂದಿದ್ದಾರೆ. ಈಗಾಗಲೇ ಕೆಲವು ಸ್ವಯಂಸೇವಕರನ್ನು ವಿಚಾರಣೆಗೆ ನೋಂದಾಯಿಸಿದ್ದೇವೆ.

ನಾಳೆಯಿಂದ ನಮ್ಮ ತಂಡವು ಅವರಿಗೆ ಲಸಿಕೆ ನೀಡುವ ಮೊದಲು ಅವರ ಆರೋಗ್ಯ ತಪಾಸಣೆಯನ್ನು ಪ್ರಾರಂಭಿಸುತ್ತೇವೆ ಎಂದು ರೈ ತಿಳಿಸಿದ್ದಾರೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯು (ಐಸಿಎಂಆರ್) ಕೋವಾಕ್ಸಿನ್‌ ಪ್ರಯೋಗವನ್ನು ದೇಶದ 12 ಕಡೆಗಳಲ್ಲಿ ನಡೆಸಲಿದೆ.

 

 

Find out more: