ಕೊರೋನಾ ಸೋಂಕು ರಾಜ್ಯದಲ್ಲಿ ಪ್ರತಿನಿತ್ಯವೂ ಕೂಡ ಸಾಕಷ್ಟು ಹೆಚ್ಚುತ್ತಲೇ ಇದೆ. ಇಷ್ಟು ದಿನಗಳ ಕಾಲ ನಾಲ್ಕು ಸಾವಿರದ ಗಡಿಯಲ್ಲಿದ್ದ ಕೊರೋನಾ ಇಂದು ಐದು ಸಾವಿರದ ಗಡಿಯನ್ನು ತಲುಪಿದೆ. ಇದರ ಜೊತೆಗೆ ಇಂದು ಸಾಕಷ್ಟು ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯನ್ನು ಹೊಂದಿದ್ದಾರೆ ಎಂಬುದು ಸಮಾಧಾನಕರ ವಿಷಯ. .
ಬುಧವಾರ ಸಾಯಂಕಾಲದಿಂದ ಗುರುವಾರ ಸಾಯಂಕಾಲದವರೆಗಿನ ಕೋವಿಡ್ 19 ಸೋಂಕು ಪ್ರಕರಣಗಳ ವರದಿಯ ಪ್ರಕಾರ, ಈ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 5030 ಕೋವಿಡ್ 19 ಸೋಂಕು ಪ್ರಕರಣಗಳು ವರದಿಯಾಗಿವೆ. ಲಭ್ಯ ವರದಿಗಳ ಪ್ರಕಾರ ಈ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 2071 ಕೋವಿಡ್ 19 ಸೋಂಕಿತರು ಚೇತರಿಸಿಕೊಂಡಿದ್ದಾರೆ. ಇಂದು ರಾಜ್ಯದಲ್ಲಿ ಕೋವಿಡ್ 19 ಸಂಬಂಧಿತ ಒಟ್ಟು 97 ಸಾವು ಸಂಭವಿಸಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ಇಂದು ಮತ್ತೆ ಎರಡು ಸಾವಿರದ ಗಡಿಯನ್ನು ದಾಟಿದ್ದು, ಇಂದು ಇಲ್ಲಿ 207 ಸೋಂಕಿತರು ಪತ್ತೆಯಾಗಿದ್ದಾರೆ. ಆ ಬಳಿಕದ ಸ್ಥಾನದಲ್ಲಿ ರಾಯಚೂರು (258), ಕಲಬುರಗಿ (229), ದಕ್ಷಿಣ ಕನ್ನಡ (218), ಬೆಳಗಾವಿ (214), ಧಾರವಾಡ (183), ಬಳ್ಳಾರಿ (164), ಬೆಂಗಳೂರು ಗ್ರಾಮಾಂತರ (161), ಉಡುಪಿ (160), ಮೈಸೂರು (116), ಹಾಸನ (108), ದಾವಣಗೆರೆ (107) ಮತ್ತು ಬಾಗಲಕೋಟೆ (106) ಜಿಲ್ಲೆಗಳಿವೆ.
ಇಂದು ರಾಜ್ಯದಲ್ಲಿ ಕೋವಿಡ್ 19 ಸೋಂಕಿಗೆ ಒಟ್ಟು 97 ಜನ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಇದುವರೆಗೆ ಈ ಮಹಾಮಾರಿಗೆ ಬಲಿಯಾದವರ ಒಟ್ಟು ಸಂಖ್ಯೆ 1616ಕ್ಕೆ ಏರಿಕೆ ಆಗಿದೆ.
ಇಂದು ರಾಜ್ಯಾದ್ಯಂತ ಒಟ್ಟು 2071 ಕೋವಿಡ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ. ರಾಜ್ಯದಲ್ಲಿ ಇಂದಿನವರೆಗೆ ಒಟ್ಟು 80863 ಕೋವಿಡ್ 19 ಸೋಂಕು ಪ್ರಕರಣಗಳು ದಾಖಲುಗೊಂಡಿದೆ. ಮತ್ತು ಇವರಲ್ಲಿ 29310 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೂ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 49931 ಇದೆ.
ಕೋವಿಡ್ 19 ಸೋಂಕಿಗೆ ಇದುವರೆಗೂ ರಾಜ್ಯದಲ್ಲಿ 1616 ಸಾವು ಸಂಭವಿಸಿದೆ. ಹಾಗೂ 06 ಜನ ಕೋವಿಡ್ 19 ಸೋಂಕಿತರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 640 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 2207 ಪಾಸಿಟಿವ್ ಪ್ರಕರಣ ಸೇರಿದಂತೆ, ರಾಯಚೂರು (258), ಕಲಬುರಗಿ (229), ದಕ್ಷಿಣ ಕನ್ನಡ (218), ಬೆಳಗಾವಿ (214), ಧಾರವಾಡ (183), ಬಳ್ಳಾರಿ (164), ಬೆಂಗಳೂರು ಗ್ರಾಮಾಂತರ (161), ಉಡುಪಿ (160), ಮೈಸೂರು (116), ಹಾಸನ (108), ದಾವಣಗೆರೆ (107) ಮತ್ತು ಬಾಗಲಕೋಟೆ (106) ಇವಿಷ್ಟು ಜಿಲ್ಲೆಗಳಲ್ಲಿ ಇಂದು ಮೂರಂಕಿಯ ಕೋವಿಡ್ 19 ಪ್ರಕರಣಗಳು ದಾಖಲಾಗಿವೆ.