
ಕೊರೋನಾ ಸೋಂಕು ಸಂಖ್ಯೆ ದಿನದಿಂದ ದಿನಕ್ಕೆ ಶರವೇಗದಲ್ಲಿ ನುಗ್ಗಯತ್ತಿದೆ. ಪ್ರತಿನಿತ್ಯವೂ ಕೂಡ ರಾಜ್ಯದಲ್ಲಿ ಸಾವಿರದ ಗಡಿಯನ್ನು ದಾಟಿ ಮುಂದದೋಗುತ್ತಿದೆ. ಅದೇರೀತಿ ಕೊರೋನಾ ದಿಂದ ಸಾವನ್ನಪ್ಪುತ್ತ್ಇರುವವರ ಸಂಖ್ಯೆಯೂ ಕೂಡ ಪ್ರತಿನಿತ್ಯವೂ ಕೂಡ ಹೆಚ್ಚಾಗುತ್ತಿದೆ. ಅದೇ ರೀತಿ ಕೊರೋನಾ ದಿಂದ ಗುಣ ಮುಖರಾದವರ ಸಂಖ್ಯೆಯೂಕೂಡ ಹೆಚ್ಚಾಗುತ್ತಿದೆ. ಅಷ್ಟಕ್ಕೂ ಭಾನುವಾರ ದಾಖಲಾದ ಕೊರೋನಾ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ..?
ಕಿಲ್ಲರ್ ಕೊರೋನಾ ಭಾನುವಾರ ರಾಜ್ಯದಲ್ಲಿ ಅಬ್ಬರಿಸಿದ್ದು ಕಳೆದ 24 ಗಂಟೆಯಲ್ಲಿ ಬರೋಬ್ಬರಿ 5985 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 178087ಕ್ಕೆ ಏರಿಕೆಯಾಗಿದೆ.
ಭಾನುವಾರ ಇಂದು ಬೆಂಗಳೂರಿನಲ್ಲಿ 22 ಮಂದಿ ಸೇರಿದಂತೆ ರಾಜ್ಯದಲ್ಲಿ 107 ಮಂದಿ ಮಹಾಮಾರಿ ಕೊರೋನಾಗೆ ಬಲಿಯಾಗಿದ್ದು ರಾಜ್ಯದಲ್ಲಿ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 3198ಕ್ಕೆ ಏರಿಕೆಯಾಗಿದೆ.
ಭಾನುವಾರ ಬೆಂಗಳೂರು ನಗರವೊಂದರಲ್ಲೆ 1948 ಪ್ರಕರಣಗಳು ವರದಿಯಾಗಿದ್ದು, ಕಳೆದ 24 ಗಂಟೆಗಳಲ್ಲಿ 1837 ಮಂದಿ ಸೋಂಕಿನಿಂದ ಗುಣಮುಖರಾಗಿ, ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಇಂದು ಒಟ್ಟು 4670 ಗುಣಮುಖರಾಗಿ ಬಿಡುಗಡೆಯಾಗಿದ್ದು ಈವರೆಗೆ ಒಟ್ಟು 93908 ಮಂದಿ ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಒಟ್ಟು 80973 ಸಕ್ರಿಯ ಪ್ರಕರಣಗಳಿವೆ. ಬೆಂಗಳೂರಿನಲ್ಲಿ 33815ಸಕ್ರಿಯ ಪ್ರಕರಣಗಳಿವೆ. ರಾಜ್ಯದಲ್ಲಿ ಒಟ್ಟು 678 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 379369 ಮಂದಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದ್ದು, ರಾಜ್ಯ್ದಲ್ಲಿ ಈವರೆಗೆ ಒಟ್ಟು 1706447 ಕೋವಿಡ್ ಪರೀಕ್ಷೆಗಳನ್ನು ನಡೆಸಲಾಗಿದೆ.
ಇನ್ನುಳಿದಂತೆ ಬಳ್ಳಾರಿ ಯಲ್ಲಿ 380 , ಬೆಳಗಾವಿ 235, ಕೊಪ್ಪಳ 106, ಗದಗ 114 , ಮೈಸೂರು 455, ಉಡುಪಿ 282, ರಾಯಚೂರು 202, ಧಾರವಾಡ 196, ಕಲಬುರಗಿ 194, ಹಾಸನ 168, ದಾವಣಗೆರೆ 158, ಬಾಗಲಕೋಟೆ 149, ಶಿವಮೊಗ್ಗ 149, ದಕ್ಷಿಣ ಕನ್ನಡ 132, ವಿಜಯಪುರ 129, ಚಿಕ್ಕಮಗಳೂರು 113, ಚಿತ್ರದುರ್ಗ 98, ಬೆಂಗಳೂರು ಗ್ರಾಮಾಂತರ 95, ಯಾದಗಿರಿ 91,ಕೋಲಾರ 87, ಹಾವೇರಿ 80, ತುಮಕೂರು 78, ಬೀದರ್ 70, ಮಂಡ್ಯ 63, ಉತ್ತರ ಕನ್ನಡ 59, ಚಿಕ್ಕಬಳ್ಳಾಪುರ 47, ಚಾಮರಾಜನಗರ 47, ರಾಮನಗರ 38 ಮತ್ತು ಕೊಡಗು 22 ಜನರು ಸೋಂಕಿತರು ಪತ್ತೆಯಾಗಿದ್ದಾರೆ .