ರಾಜ್ಯದಲ್ಲಿ ಕೊರೋನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಪ್ರತಿನಿತ್ಯ ಸಾವಿರಾರು ಕೇಸ್ ಗಳು ದಾಖಲಾಗುತ್ತಿದೆ. ಅದೇ ರೀತಿ ಅಷ್ಟೇ ಮಂದಿ ಕೊರೋನಾ ವೈರಸ್ ಇಂದಾಗಿ ಗುಣಮುಖರಾಗಿದ್ದಾರೆ. ಅಷ್ಟಕ್ಕೂ ಇಂದು ದಾಖಲಾದ ಕೊರೋನಾ ಸೋಂಕಿತರ ಸಂಖ್ಯೆ ಎಷ್ಟು ಗೊತ್ತಾ..?




ಮಂಗಳವಾರ ಸಾಯಂಕಾಲದಿಂದ ಬುಧವಾರ ಸಾಯಂಕಾಲದವರೆಗಿನ ಕೋವಿಡ್ 19 ಸೋಂಕು ಪ್ರಕರಣಗಳ ವರದಿಯ ಪ್ರಕಾರ, ಈ 24 ಗಂಟೆಗಳ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 8642 ಕೋವಿಡ್ 19 ಸೋಂಕು ಪ್ರಕರಣಗಳು ವರದಿಯಾಗಿವೆ.  ಈ ನಿರ್ಧಿಷ್ಟ ಅವಧಿಯಲ್ಲಿ ರಾಜ್ಯದಲ್ಲಿ ಒಟ್ಟು 7201 ಸೋಂಕಿತರು ಗುಣಮುಖರಾಗಿದ್ದಾರೆ. ಮತ್ತು ಈ ಅವಧಿಯಲ್ಲಿ 126 ಸೋಂಕಿತರು ಮೃತಪಟ್ಟಿದ್ದಾರೆ.


 


ಇದೀಗ ರಾಜ್ಯದಲ್ಲಿ ಒಟ್ಟು ಕೋವಿಡ್ 19 ಸೋಂಕಿತರ ಸಂಖ್ಯೆ ಎರಡೂವರೆ ಲಕ್ಷದ ಗಡಿ ಸಮೀಪಿಸಿದ್ದು, ನಮ್ಮಲ್ಲಿ ಸದ್ಯಕ್ಕೆ ಒಟ್ಟು 2,49,590 ಸೋಂಕು ಪ್ರಕರಣಗಳು ದಾಖಲಾಗಿವೆ. ಈ ನಡುವೆ ಸೋಂಕಿತರ ಚೇತರಿಕೆ ಸಂಖ್ಯೆಯೂ ಒಂದೂವರೆ ಲಕ್ಷದ ಗಡಿಯನ್ನು ದಾಟಿರುವುದು ಆಶಾದಾಯಕ ವಿಷಯವಾಗಿದೆ. 1,64,150 ಸೊಂಕಿತರು ಇದೀಗ ಚೇತರಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಇದೀಗ ಒಟ್ಟು 81,097 ಸಕ್ರಿಯ ಕೋವಿಡ್ 19 ಸೋಂಕು ಪ್ರಕರಣಗಳಿವೆ.





ಹಾಗೂ ರಾಜ್ಯದಲ್ಲಿ ಕೋವಿಡ್ 19 ಸೊಂಕು ಸಂಬಂಧಿ 4327 ಸಾವಿನ ಪ್ರಕರಣಗಳು ದಾಖಲಾಗಿವೆ ಹಾಗೂ 16 ಜನ ಕೋವಿಡ್ 19 ಸೋಂಕಿತರು ಅನ್ಯ ಕಾರಣದಿಂದ ಮೃತಪಟ್ಟಿದ್ದಾರೆ. 704 ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.





ಈ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲೆಯಲ್ಲಿ 2804 ಕೋವಿಡ್ 19 ಸೊಂಕು ಪ್ರಕರಣಗಳು ವರದಿಯಾಗುವ ಮೂಲಕ ಸೋಂಕು ಪ್ರಕರಣಗಳಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಆ ಬಳಿಕದ ಸ್ಥಾನಗಳಲ್ಲಿ ಶಿವಮೊಗ್ಗ (915), ಮೈಸೂರು (562), ಬಳ್ಳಾರಿ (537), ಬೆಳಗಾವಿ (379), ಉಡುಪಿ (375), ಧಾರವಾಡ (253), ದಾವಣಗೆರೆ (228), ಹಾಸನ (228), ದಕ್ಷಿಣ ಕನ್ನಡ (234), ಮಂಡ್ಯ (185), ಬಾಗಲಕೋಟೆ (163), ಕಲಬುರಗಿ (154), ರಾಯಚೂರು (153), ಗದಗ (149), ಕೊಪ್ಪಳ (133), ಹಾವೇರಿ (137), ರಾಮನಗರ (126), ಉತ್ತರ ಕನ್ನಡ (119), ಚಾಮರಾಜನಗರ (111), ವಿಜಯಪುರ (107) ಮತ್ತು ಚಿಕ್ಕಮಗಳೂರು (100)  






ರಾಜ್ಯದಲ್ಲಿ ಇದುವರೆಗೆ ಒಟ್ಟು 5,82,124 Rapid ಆ್ಯಂಟಿಜೆನ್ ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದೆ. ಇದನ್ನು ಹೊರತಾಗಿಸಿ ರಾಜ್ಯಾದ್ಯಂತ 16,15,135 ಜನರಿಗೆ RT PCR ಮತ್ತು ಇನ್ನಿತರೇ ವಿಧಾನಗಳ ಮೂಲಕ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಯನ್ನು ನಡೆಸಲಾಗಿದೆ. ಮತ್ತು ಈ ಎಲ್ಲಾ ವಿಧಾನಗಳ ಮೂಲಕ ರಾಜ್ಯದಲ್ಲಿ ಇಂದಿನವರೆಗೆ ಒಟ್ಟು 21,97,259 ಜನರಿಗೆ ಕೋವಿಡ್ 19 ಸೋಂಕು ಪತ್ತೆ ಪರೀಕ್ಷೆಯನ್ನು ನಡೆಸಲಾಗಿದೆ.

Find out more: