ಮಹಾಮಾರಿ ಕೊರೊನಾವೈರಸ್‌ಗೆ ಇಡೀ ದೇಶವೇ ನಲುಗಿ ಹೋಗಿರುವ ನಿಟ್ಟಿನಲ್ಲಿ ದೇಶವಾಸಿಗಳು ಮನೆ ಬಿಟ್ಟು ಹೊರಬರದಂತ ಸ್ಥಿತಿ ಎದುರಾಗಿದೆ. ದಿನವಿಡಿ ಮನೆಯೊಳಗೇ ಇರುವ ಜನರು ಈ ಲಾಕ್ ಡೌನ್ ಸಂದರ್ಭದಲ್ಲಿ ಮನರಂಜನೆಗಾಗಿ ಅಥವಾ ಬೇಸರ ಕಳೆಯುವುದಕ್ಕೋ ಇಲ್ಲ ಸಮಯವನ್ನು ಕಳೆಯುವ ಉದ್ದೇಶದಿಂದ ಅಂತರ್ಜಾಲದಲ್ಲಿ ಆಗಾಗ ಇಣುಕಿ ನೋಡುತ್ತಲೇ ಇರುತ್ತಾರೆ ಆದರೆ ಜನರು ಇಣುಕಿ ನೋಡುವಾಗ ಯಾವ ವೆಬ್ ಸೈಟ್‌ಗಳನ್ನು ಹೆಚ್ಚಾಗಿ ನೋಡಿದ್ದಾರೆ ಎಂಬುದರ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.

 

ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಜನರು ಮನೆಯಲ್ಲೇ ಕಾಲ ಕಳೆಯುವವವರೇ ಹೆಚ್ಚು ಹೀಗಿರುವಾಗ ಮನೆಯಲ್ಲಿನ ಬೇಸರವನ್ನು ಕಳೆದುಕೊಳ್ಳುವ ಉದ್ದೇಶದಿಂದ ಅಂತರ್ಜಾಲವನ್ನು ಜಾಲಾಡುವುದು ಪ್ರತಿನಿತ್ಯದ ಕಾಯಕವನ್ನಾಗಿ ಸಾಕಷ್ಟು ಜನರು ಮಾಡಿಕೊಂಡಿರುತ್ತಾರೆ. ಈ ರೀತಿ ಜಾಲಾಡುವಂತಹ ಸಂದರ್ಭದಲ್ಲಿ ಸಾಕಷ್ಟು ಜನರು ಕೆಲವು ಪೋರ್ನ್ ವೆಬ್ ಸೈಟ್‌ಗಳ ಮೇಲೂ ಕಣ್ಣಾಡಿಸಿದರ ಸಂಖ್ಯೆ ದೊಡ್ಡದಿದೆ.

 

 ಈ ಕುರಿತು ಪೋರ್ನ್ ಹಬ್ ಬಿಡುಗಡೆ ಮಾಡಿರುವ ವರದಿ ಪ್ರಕಾರ, ಮಾ.24 ರಂದು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಲಾಕ್ ಡೌನ್ ಮಾಡಿದ ಬಳಿಕ ಪೋರ್ನ್ ವೆಬ್ ಸೈಟ್ ಗಳ ವೀಕ್ಷಣೆ ಪ್ರಮಾಣದಲ್ಲಿ ಬಹುಪಟ್ಟು ಏರಿಕೆ ಕಂಡಿದೆ ಎಂದು ಹೇಳಿದೆ. ಪೋರ್ನ್ ಹಬ್ ಮಾಹಿತಿ ಪ್ರಕಾರ, ಭಾರತದಲ್ಲಿ ಮಾ.೨೪ರಂದು ಪೋರ್ನ್ ಸೈಟ್ ಗಳ ವೀಕ್ಷಣೆ ಪ್ರಮಾಣ ಶೇ.23ರಷ್ಟಿತ್ತು. ಮಾ.27 ರಂದು ಈ ಪ್ರಮಾಣ ಶೇ.95ಕ್ಕೆ ಗಣನೀಯ ಏರಿಕೆ ಕಂಡಿದೆ.

 

ಇದಾದ ಬಳಿಕ ಈ ಪ್ರಮಾಣದಲ್ಲಿ ಸ್ವಲ್ಪ ಕುಸಿತ ಕಾಣುತ್ತಾ ಬಂದಿತು. ಏಪ್ರಿಲ್ ೧ ರಂದು ಈ ಪ್ರಮಾಣ ಶೇ.೬೪ಗೆ ತಲುಪಿತು. ಅಂದರೆ ಭಾರತೀಯರು ಸಾಮಾಜಿಕ ಅಂತರ ಮತ್ತು ಉಚಿತ ಅಶ್ಲೀಲ ಎರಡನ್ನೂ ಹೆಚ್ಚು ಮಾಡುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.

 

ಇದು ಕೇವಲ ಭಾರತದ ಕತೆಯಲ್ಲ. ಅಮೆರಿಕ, ಇಂಗ್ಲೆಂಡ್, ಇಟಲಿ, ಸ್ಪೇನ್ ಮತ್ತು ರಷ್ಯಾ ಸೇರಿದಂತೆ ಹಲವಾರು ದೇಶಗಳಲ್ಲಿ ಅಶ್ಲೀಲ ವೀಕ್ಷಣೆ ಪ್ರಮಾಣ ಹೆಚ್ಚಾಗಿದೆ. ಆದರೆ ಭಾರತದಲ್ಲಿ ಮಾತ್ರ ಇದು ದಾಖಲೆ ಮಟ್ಟದಲ್ಲಿ ಜಿಗಿತ ಕಂಡಿದೆ ಎಂದು ವರದಿಯಲ್ಲಿ ಬಹಿರಂಗವಾಗಿದೆ.

 

ವಿವಿಧ ದೇಶಗಳಲ್ಲಿ ದೊಡ್ಡ ಪ್ರಮಾಣದ ಸೋಂಕು ಮತ್ತು ಸಾವು ದಾಖಲಿಸಲು ಆರಂಭಗೊಂಡಾಗ ಪೋರ್ನ್ಹಬ್ ಆರಂಭದಲ್ಲಿ ಇಟಲಿ, ಅಮೆರಿಕ ಮತ್ತು ಸ್ಪೇನ್ಗೆ ಒಂದು ತಿಂಗಳವರೆಗೆ ಉಚಿತ ಪ್ರೀಮಿಯಂ ಚಂದಾದಾರಿಕೆಯನ್ನು ನೀಡಿತು. ಸಾಂಕ್ರಾಮಿಕ ರೋಗ ಹರಡುತ್ತಿದ್ದಂತೆ ಈ ಪ್ರಸ್ತಾಪವನ್ನು ಶೀಘ್ರದಲ್ಲೇ ಎಲ್ಲಾ ದೇಶಗಳಿಗೂ ವಿಸ್ತರಿಸಲಾಯಿತು.

 

ಪೋರ್ನ್ ಹಬ್ ಕೇವಲ ಅಶ್ಲೀಲ ಚಿತ್ರಗಳನ್ನುಮಾತ್ರ ಜನರಿಗೆ ನೀಡುತ್ತಿಲ್ಲ. ಬದಲಾಗಿ ಮೈಂಡ್ಗೀಕ್ ಒಡೆತನದ ಅಶ್ಲೀಲ ವಿಡಿಯೋ ಪ್ಲಾಟ್ಫಾರ್ಮ್ ಉದ್ಯಮದಲ್ಲಿ ಕೆಲಸ ಮಾಡುವ ನಟರಿಗೆ ನೆರವು ನೀಡುತ್ತಿದೆ. ಇದು ಸೆಕ್ಸ್ ವರ್ಕರ್ಸ್ ಔಟ್ರಿಚ್ ಯೋಜನೆಗೆ $ 25,000 ದೇಣಿಗೆ ನೀಡಿದೆ ಮತ್ತು ನ್ಯೂಯಾರ್ಕ್ ನಗರದದಲ್ಲಿ 15,000 ನೀಡಿದೆ.

 

ಜನರನ್ನು ಮನೆಯಲ್ಲಿಯೇ ಉಳಿಯುವಂತೆ ಮಾಡುವಲ್ಲಿ ನಮ್ಮ ಫ್ರೀ ಪೋರ್ನ್ ಸೌಲಭ್ಯ ಕೂಡ ಸಹಕಾರಿಯಾಗಿದೆ ಎಂದು ಪೋರ್ನ್ಹಬ್ನ ಉಪಾಧ್ಯಕ್ಷ ಕೋರೆ ಪ್ರೈಸ್ ಅವರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

Find out more: