ಕುರುಕ್ಷೇತ್ರ ಚಿತ್ರ ಈಗಾಗಲೇ ಬಿಡುಗಡೆ ಆಗಬೇಕಿತ್ತು. ಆದರೆ ಅಂದುಕೊಂಡತೆ ಆಗಲಿಲ್ಲ. ದೊಡ್ಡ ಬಜೆಟ್ ಸಿನಿಮಾ ಆದ ಕಾರಣ ಈ ಚಿತ್ರದಲ್ಲಿ ಘಟಾನುಘಟಿಗಳು ಅಭಿನಯಿಸಿದ್ದಾರೆ. ಅಲ್ಲದೇ ಚಿತ್ರ ಐದು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಹೀಗಾಗಿ ಗ್ರಾಫಿಕ್ಸ್ ಕೆಲಸ ಮತ್ತು ಡಬ್ಬಿಂಗ್ ಕೆಲಸ ಹಾಗೂ ಇನ್ನಿತರ ಸಣ್ಣ ಪುಟ್ಟ ಕೆಲಸಗಳ ಕಾರಣದಿಂದ ಸಿನಿಮಾ ಬಿಡುಗಡೆಗೆ ತಡವಾಗಿದೆ.
ಕುರುಕ್ಷೇತ್ರ ಸಿನಿಮಾ ವಿಶ್ವದಾದ್ಯಂತ ಸುಮಾರು 5 ಭಾಷೆಗಳಲ್ಲಿ ಬಿಡುಗಡೆ ಆಗುತ್ತದೆ. ಆಗಸ್ಟ್ 9 ರಂದು ಸಿನಿಮಾ ಬಿಡುಗಡೆ ಆಗಲಿದೆ ಎಂದು ಸಿನಿಮಾ ನಿರ್ಮಾಪಕ ಮುನಿರತ್ನ ಹೇಳಿದ್ದಾರೆ. ಆದರೆ ಅಚ್ಚರಿ ಸಂಗತಿ ಎಂದರೆ, ಕುರುಕ್ಷೇತ್ರ ಸಿನಿಮಾ ಬಿಡುಗಡೆಗೂ ಮುನ್ನವೇ ದಾಖಲೆ ಮೇಲೆ ದಾಖಲೆ ಬರೆದಿದೆ. ಹಾಗಾದ್ರೆ ಆ ದಾಖಲೆಗಳಾದ್ರೂ ಏನು ಅಂತೀರಾ?
ಒಟ್ಟಾರೆ ಮೂರು ದಾಖಲೆಗಳನ್ನು ಕುರುಕ್ಷೇತ್ರ ಈಗಾಗಲೇ ತನ್ನ ಮಡಿಲಲ್ಲಿ ಹಾಕಿಕೊಂಡಿದೆ. ಒಂದು, ಚಿತ್ರದ ಕನ್ನಡ ವರ್ಶನ್ ಟಿವಿ ರೈಟ್ಸ್ 9 ಕೋಟಿಗೆ ಮಾರಾಟವಾಗಿದೆ. ಎರಡು, ಹಿಂದಿ ಡಬ್ಬಿಂಗ್ ರೈಟ್ಸ್ 9.5 ಕೋಟಿಗೆ ಮಾರಾಟವಾಗಿದೆ. ಇನ್ನು ಮೂರನೆಯದಾಗಿ ಕುರುಕ್ಷೇತ್ರದ ಚಿತ್ರದ ಕನ್ನಡ ವರ್ಶನ್ ಆಡಿಯೋ ರೈಟ್ಸ್ 1.5 ಕೋಟಿ ರೂ.ಗೆ ಮಾರಾಟವಾಗಿದೆ. ಹೀಗೆ ಚಿತ್ರ ಬಿಡುಗಡೆಗೆ ಇನ್ನೂ ಎರಡು ತಿಂಗಳು ಬಾಕಿ ಇರುವಾಗಲೇ ದಾಖಲೆ ನಿರ್ಮಿಸಿದೆ.
ಕುರುಕ್ಷೇತ್ರ ಚಿತ್ರದಿಂದ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‌ವುಡ್‌ನತ್ತ ಮುಖ ಮಾಡಿ ನೋಡುವಂತೆ ಮಾಡಿದ್ದೇವೆ ಎಂದು ಚಿತ್ರತಂಡದವರು ಈಗಾಗಲೇ ಹೇಳಿಕೊಂಡಿದ್ದಾರೆ. ಪ್ರತಿ ಹಂತದಲ್ಲೂ ಕುಸುರಿ ಹಿಡಿಯಲಾಗಿದೆಯಂತೆ. ದೃಶ್ಯವೈಭಕ್ಕೆ ಕೊರೆತೆಯೇ ಇಲ್ಲ ಎನ್ನಲಾಗಿದೆ. ಹೀಗಾಗಿ ಇದೀಗ ದರ್ಶನ್ ಅಭಿಮಾನಿಗಳು ಸಿನಿಮಾ ಬಿಡುಗಡೆಗಾಗಿ ತುದಿಗಾಲಲ್ಲಿ ನಿಂತಿದ್ದಾರೆ.