ಕೆಜಿಎಫ್ ಸಿನಿಮಾ ಮೂಲಕ ಮನೆಮಾತಾದ ರಾಕಿಂಗ್ ಸ್ಟಾರ್ ಯಶ್ ಕೇವಲ ತೆರೆ ಮೇಲೆ ಅಷ್ಟೇ ಅಲ್ಲ ನಿಜ ಜೀವನದಲ್ಲೂ ಹೀರೋ ಆಗಿ ಮಿಂಚುತ್ತಿದ್ದಾರೆ. ಹಾಗಾದ್ರೆ ಅದಕ್ಕೆ ಕಾರಣವಾದ್ರೂ ಏನು? ನಿಜ ಜೀವನದಲ್ಲೀ ಯಶ್ ಹೀರೋ ಆಗಿರೋದಾದ್ರೂ ಹೇಗೆ ಅನ್ನೋದು ಇಲ್ಲಿದೆ ನೋಡಿ.

ರಾಕಿಂಗ್ ಸ್ಟಾರ್ ಯಶ್ ಅವರಿಗೆ ಇವತ್ತು ದೊಡ್ಡ ಅಭಿಮಾನಿಗಳಿದ್ದಾರೆ. ಯಶ್ ಕೂಡ ಸಿನಿಮಾದಾಚೆಗೂ ಹೆಸರು ಮಾಡಿದ್ದಾರೆ. ತಮ್ಮ ಯಶೋಮಾರ್ಗ ಅನ್ನೋ ಸಂಸ್ಥೆ ಮೂಲಕ ಅವರು ಮತ್ತಷ್ಟು ಉತ್ತರ ಕರ್ನಾಟಕದ ಜನರ ಬಾಯಲ್ಲಿ ಹೆಸರಾಗಿದ್ದಾರೆ. ಹೌದು, ಯಶೋ ಮಾರ್ಗ ಅನ್ನೋದು ಬಡವರ ಏಳಿಗೆಗಾಗಿ ನಿರ್ಮಾಣ ಮಾಡಿದ ಸಂಸ್ಥೆ. ಕಳೆದ ವರ್ಷ ರಾಜ್ಯದಲ್ಲಿ ನೀರಿನ ಸಮಸ್ಯೆ ಎದುರಾದಾಗ ಹುಟ್ಟಿಕೊಂಡ ಸಂಸ್ಥೆ ಇದು. 

ಇದೀಗ ರಾಜ್ಯದ ಅನೇಕ ಜಿಲ್ಲೆಗಳು ಬರಗಾಲದಿಂದ ನರಳುತ್ತಿವೆ. ನೀರಿಲ್ಲದೇ ಲಕ್ಷಾಂತರ ಜನರು ಪರಿತಪಿಸುತ್ತಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕದ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಇಂತಹ ಜಿಲ್ಲೆಗಳಲ್ಲಿ ನಿರಿಗಾಗಿ ಹಾಹಾಕಾರವೇ ನಡೆಯುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಯಶ್ ರಾಯಚೂರಿನ ಹಳ್ಳಿ ಹಳ್ಳಿಗಳಿಗೂ ನೀರಿನ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ಸರಬರಾಜು ಮಾಡುತ್ತಿದ್ದಾರೆ. 

ಯಶ್ ಅವರ ಯಶೋಮಾರ್ಗ ಸಂಸ್ಥೆಯ ಮೂಲಕ ಯಶ್ ತಮ್ಮ ಸಾಮಾಜಿಕ ಸೇವೆ ಸಲ್ಲಿಸುತ್ತಿದ್ದಾರೆ. ರೈತರ ಕಷ್ಟಗಳಿಗೆ ಬೆನ್ನೆಲುಬಾಗಿ ನಿಲ್ಲುವ ಯಶ್, ಕಳೆದ ವರ್ಷಗ ಕೆಲವು ಹಳ್ಳಿಗಳ ಕೆರೆಯ ಹೂಳನ್ನು ಎತ್ತಿಸಿದ್ರು. ಈ ಬಾರಿ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ. ಹೀಗೆ ಇವುರ ಇತರೇ ಸಿನಿಮಾ ನಟರಿಗೆ ಮಾದರಿಯಾಗುದ್ದಾರೆ ಅನ್ನೋದು ಮಾತ್ರ ಸತ್ಯ.


Find out more:

kgf