ಶಿವರಾಜ್ ಕುಮಾರ್ ಇತ್ತೀಚೆಗೆ ಒಂದರ ಮೇಲೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಹೌದು ಇದೀಗ ಶಿವಣ್ಣ ಅಭಿನಯದ ರುಸ್ತುಂ ಇದೇ ತಿಂಗಳ ಕೊನೆಯಲ್ಲಿ ಬಿಡುಗಡೆಗೆ ಸಿದ್ಧವಾಗಿದೆ. ಇದರ ಜೊತೆಗೆ ಮತ್ತೊಂದು ಹೊಸ ಸುದ್ದಿಯನ್ನು ಶಿವಣ್ಣ ನೀಡಿದ್ದಾರೆ.
ಹೌದು, ಈ ಹಿಂದೆ ಮೈ ನೇಮ್ ಇಸ್ ಅಂಜಿ ಅನ್ನೋ ಟೈಟಲ್ ಚಿತ್ರದಲ್ಲಿ ನಟಿಸೋಕೆ ಶಿವಣ್ಣ ಒಪ್ಪಿಕೊಂಡಿದ್ದರು.ಇದೀಗ ಆ ಚಿತ್ರದ ಹೆಸರನ್ನು ಭಜರಂಗಿ-2 ಹೆಸರಲ್ಲಿ ಸಿಕ್ವೇಲ್ ಮಾಡಲು ಮುಂದಾಗಿದ್ದಾರೆ. ಈ ಚಿತ್ರಕ್ಕೆ ಜೂನ್ 20 ರಿಂದ ಅಧಿಕೃತ ಚಾಲನೆ ಸಿಗುತ್ತಿದೆ.
ಜೂನ್ 20 ರಿಂದ ಜುಲೈ 5 ರ ವರೆಗೆ ಫಸ್ಟ್ ಶೆಡ್ಯುಲ್ ಚಿತ್ರೀಕರಣ ಫಿಕ್ಸ್ ಆಗಿದ್ದು, ಸ್ಕ್ರಿಪ್ಟ್ ವರ್ಕ್ ಈಗಾಗಲೇ ಮುಗಿದಿದೆ ಎನ್ನಲಾಗಿದೆ. ಚಿತ್ರಕಥೆಗೆ ಸಂಭಾಷಣೆಯನ್ನು ಬರೆಯಲಾಗಿದೆ. ಅಂದುಕೊಂಡಂತೆ ನಡೆದರೆ ಜೂನ್ 20 ಕ್ಕೆ ಚಿತ್ರೀಕರಣ ಆರಂಭವಾಗಲಿದೆ.