ರಾಕಿಂಗ್ ಸ್ಟಾರ್ ಯಶ್ ಇದೀಗ ಮತ್ತೆ ಸುದ್ದಿಯಲ್ಲಿ ಇದ್ದಾರೆ. ಬಾಡಿಗೆ ಮನೆ ವಿವಾದ ಇನ್ನೇನು ಮುಗೀತು ಅನ್ನುವಾಗಲೇ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಬಾಡಿಗೆ ಮನೆ ನೀಡಿದ ಮಾಲೀಕನಿಗೆ ಯಶ್ ಕುಟುಂಬ ಮೋಸ ಮಾಡಿದೆ ಎನ್ನುವ ಮಾತುಗಳು ಇದೀಗ ಕೇಳಿ ಬರುತ್ತಿವೆ. 

 

ಹೌದು, ಸ್ಯಾಂಡಲ್ ವುಡ್ ನಲ್ಲಿ ರಾಕಿಂಗ್ ಸ್ಟಾರ್ ಎಂದೇ ಹೆಸರು ಮಾಡಿರುವ ಯಶ್ ಇದೀಗ ಮತ್ತೆ ವಿವಾದಕ್ಕೆ ಈಡಾಗಿದ್ದಾರೆ. ಕತ್ರಿಗುಪ್ಪೆಯಲ್ಲಿ ಬಾಡಿಗೆಗೆ ಇದ್ದ ಮನೆಯನ್ನು ಅವರು ಖಾಲಿ ಮಾಡಿದ್ದಾರೆ. ಜೊತೆಗೆ ಮಾಲೀಕರಿಗೆ ನೀಡಬೇಕಾದ ಹಣವನ್ನು ಡಿಡಿ ಮೂಲಕ‌ ನೀಡಿದ್ದಾರೆ. 

 

ಆದರೆ ವಿಷಯ ಅದಲ್ಲ, ಮನೆ ಖಾಲಿ ಮಾಡುವಾಗ ಯಶ್ ಕುಟುಂಬ ಮನೆಯನ್ನು ಹಾಳು ಮಾಡಿ ಹೋಗಿದೆ ಅನ್ನೋದು ಬಾಡಿಗೆ ಮನೆ ನೀಡಿದ ಮಾಲೀಕರ ಆರೋಪ. ಹೌದು ಮನೆ ಕಿ ತೆಗೆದು ಒಳಗೆ ನೋಡುತ್ತಿದ್ದಂತೆಯೇ ಲೈಟು ಹಾಗೂ ನೀರಿನ ಸಿಂಕ್ ಎಲ್ಲವ ಹಾಳಾಗಿದೆ. ಬಾಗಿಲು ಕೂಡ ಅಸ್ತವ್ಯಸ್ತ ಆಗಿದೆ ಎಂದು ಮಾಲೀಕರು ಹೇಳಿದ್ದಾರೆ.

 

(ಯಶ್ ಬಾಡಿಗೆ ಇದ್ದ ಮನೆ) 

 

ಹೀಗಾಗಿ ಮನೆ ಖಾಲಿ ಮಾಡುವಾಗ ಯಶ್ ಕುಟುಂಬ ಸಭ್ಯ ರೀತಿಯಲ್ಲಿ ವರ್ತಿಸಬೇಕಿತ್ತು. ಹೀಗೆ ಕೊಟ್ಟ ಮನೆಯನ್ನು ಹಾಳು ಮಾಡಿ ಹೋಗಬಾರದಿತ್ತು ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಆದರೆ ಈ ಆರೋಪಕ್ಕೆ ಯಶ್ ಏನು ಹೇಳ್ತಾರೆ ಎಂದು‌ ಕಾದು ನೋಡಬೇಕಿದೆ. 

Find out more: