
ಕ್ರಿಕೆಟ್ ತಾರೆಯರು ಸಿನಿಮಾ ತಾರೆಯರ ಜೊತೆ ಡೇಟಿಂಗ್ ಮಾಡೋದು, ಲವ್ ನಲ್ಲಿ ಬೀಳೋದು ಹೊಸದೇನೂ ಅಲ್ಲ. ಇದರಲ್ಲಿ ಎಷ್ಟೋ ಜನ ಪ್ರೀತಿಸಿ ಮದುವೆ ಆದವರಿದ್ದಾರೆ. ಹಾಗಾದರೆ ಇದೀಗ ಹೊಸ ನ್ಯೂಸ್ ಏನಪ್ಪ ಅಂತೀರಾ? ನಟ ಸಾರ್ವಭೌಮ ಚಿತ್ರದ ನಾಯಕಿ ಬೂಮ್ರಾ ಬಲೆಗೆ ಬಿದ್ದಿದ್ದಾರೆಯೇ ಎನ್ನುವ ಸಂದೇಹಗಳು ವ್ಯಕ್ತವಾಗುತ್ತಿವೆ.
ಹೌದು, ಅನುಪಮ ಪರಮೇಶ್ವರ ಅವರು ದಕ್ಷಿಣ ಭಾರತದವರು. ಭೂಮ್ರ ಉತ್ತರ ಭಾರತದವರು. ಹಾಗೆಂದ ಮಾತ್ರಕ್ಕೆ ಪ್ರೀತಿಸಬಾರದು ಎನ್ನುವ ನಿಯಮವೇನಿಲ್ಲ. ಆದರೆ, ಇವರಿಬ್ಬರಿಗೂ ಹೇಗೆ ಪ್ರೀತಿ ಆರಂಭವಾಗಿದೆ ಎಂದು ಅಭಿಮಾನಿಗಳು ಯೋಚನೆ ಮಾಡುತ್ತಿದ್ದಾರೆ.
ಟೀಂ ಇಂಡಿಯಾ ಆಟಗಾರ ಬೂಮ್ರಾ ಟ್ವೀಟರ್ ನಲ್ಲಿ ಫಾಲೋ ಮಾಡುತ್ತಿರುವುದು ಕೇವಲ ೩೫ ಜನರನ್ನು. ಅದರಲ್ಲಿ ಅನುಪಮಾ ಪರಮೇಶ್ವರ್ ಒಬ್ಬರು. ಬೂಮ್ರಾ ಕೇವಲ ಫಾಲೋ ಮಾಡುತ್ತಿಲ್ಲ. ಜೊತೆಗೆ ಅನುಪಮಾ ಅವರ ಫೋಟೊಗಳಿಗೆ ಲೈಕ್ ಒತ್ತಿ ಶೇರ್ ಕೂಡ ಮಾಡುತ್ತಿದ್ದಾರೆ. ಇಬ್ಬರ ಮಧ್ಯ ಅದೇನೋ ನಡೆದಿದೆ ಅನ್ನೋ ಅನುಮಾನಗಳಿವೆ.
ಇತ್ತ ಅನುಪಮಾ ಪರಮೇಶ್ವರ ಕೂಡ ಬೂಮ್ರಾ ಅವರನ್ನು ಫಾಲೋಮಾಡುತ್ತಿದ್ದಾರೆ. ಬೂಮ್ರಾ ಹಾಕಿದ ಪ್ರತಿಯೊಂದು ಪೋಸ್ಟ್ ಗಳಿಗೂ ಅನುಪಮಾ ಲೈಕ್ ಒತ್ತಿ ಶೇರ್ ಮಾಡುತ್ತಿದ್ದಾರೆ. ಇನ್ನೊಂದು ವಿಶೇಷ ಏನಂದ್ರೆ, ಅನುಪಮಾ ಬೇರೆ ಯಾವುದೇ ಕ್ರಿಕೆಟ್ ಆಟಗಾರರನ್ನು ಫಾಲೋ ಮಾಡುತ್ತಿಲ್ಲ ಬೂಮ್ರಾ ಹೊರತು ಪಡಿಸಿ.
ಹೀಗಾಗಿ ಇಬ್ಬರು ಪ್ರೀತಿ ಮಾಡುತ್ತಿದ್ದಾರೆ ಎನ್ನುವ ಗಾಸಿಪ್ ಗಳು ಹರಿದಾಡುತ್ತಿವೆ. ಇದಕ್ಕೆ ಸ್ಪಷ್ಟೀಕರಣವನ್ನು ಇಬ್ಬರಲ್ಲಿ ಒಬ್ಬರು ಕೊಡಬೇಕಿದೆ.