ಕನ್ನಡದ ಹಿರಿಯ ನಟ ಜೈ ಜಗದೀಶ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಸಿಂಗ್ ಈ ದಂಪತಿಯ ಮೂವರು ಮಕ್ಕಳು ಒಟ್ಟಾಗಿಯೇ ನಟಿಸುತ್ತಿರುವ ವಿಷಯ ನಿಮಗೆಲ್ಲಾ ಗೊತ್ತೆ ಇದೆ. ಈ ಚಿತ್ರದ ಹೆಸರು ಯಾನ. ಇದು ಆರಂಭವಾಗಿ ಸುಮಾರು ಒಂದುವರೆ ವರ್ಷವೇ ಮುಗೀತಾ ಬಂದಿದೆ.
ಇದೀಗ ಹೊಸ ಸುದ್ದಿ ಏನಪ್ಪ ಅಂದ್ರೆ, ಯಾನ ಚಿತ್ರ ಬಿಡುಗಡೆಗೆ ಸಜ್ಜಾಗಿದೆ. ಸಿನಿಮಾ ರಿಲೀಸ್ ಡೇಟ್ ಕೂಡ ಫಿಕ್ಸ್ ಆಗಿದೆ. ಜುಲೈ 12 ರಂದು ಸಿನಿಮಾ ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಜೈ ಜಗದೀಶ್ ಅವರ ಮೂವರು ಮಕ್ಕಳಾದ ವೈಭವಿ, ವೈನಿಧಿ ಹಾಗೂ ವೈಸಿರಿ ಅವರು ಅಭಿನಯಿಸಿದ್ದಾರೆ.
ಈ ಮೂವರು ಗ್ಲಾಮರ್ ಬೊಂಬೆಗಳಿಗೆ ಚಕ್ರವರ್ತಿ, ಸುಮಖ್ ಹಾಗೂ ಅಭಿಷೇಕ ಅನ್ನೋ ಯುವಕರು ಸಾಥ್ ನೀಡಿದ್ದಾರೆ. ಈ ಚಿತ್ರದ ಬಗ್ಗೆ ವಿಜಯಲಕ್ಷ್ಮಿ ಸಿಂಗ್ ಅವರೇ ಸ್ವತಃ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹರೀಶ್ ಶೇರಿಗಾರ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.