ಉಪೇಂದ್ರ ಅವರ ಜೊತೆ ಐ ಲವ್ ಯೂ ಚಿತ್ರದಲ್ಲಿ ತುಂಬ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದ ನಟಿ ರಚಿತಾ ರಾಮ್ ಇದೀಗ ಕಣ್ಣೀರು ಹಾಕಿದ್ದಾರೆ. ಹೌದು, ಈ ಹಿಂದೆ ಪ್ರಿಯಾಂಕಾ ಉಪೇಂದ್ರ ಕೂಡ ರಚಿತಾ ರಾಮ್ ವಿರುದ್ಧ ಕಿಡಿ ಕಾರಿದ್ದರು. ಇದೀಗ ಸ್ವತಃ ರಚಿತಾ ರಾಮ್ ಅವರು ಅಷ್ಟು ಬೋಲ್ಡ್ ಪಾತ್ರವನ್ನು ನಾನು ಮಾಡಬಾರದಿತ್ತು ಎನ್ನುತ್ತಿದ್ದಾರೆ.
ರಚಿತಾ ರಾಮ್ ಐ ಲವ್ ಯೂ ಚಿತ್ರದಲ್ಲಿ ತುಂಬಾ ಬೋಲ್ಡ್ ಆಗಿ ಅಭಿನಯ ಮಾಡಿದ್ದಕ್ಕೆ ಅವರ ಅಪ್ಪ- ಅಮ್ಮನಿಗೆ ತುಂಬಾ ನೋವಾಗಿದೆಯಂತೆ. ಈಗಲೂ ರಚಿತಾ ರಾಮ್ ಮನೆಯಲ್ಲಿ ಮಗುವಿನಂತೆ ಇರುತ್ತಾರೆ. ಹೀಗಾಗಿ ಇಂತಹ ಬೋಲ್ಡ್ ಪಾತ್ರ ಅವರಿಗೆ ಇರಿಸು ಮುರಿಸು ತಂದಿದೆ. ಹೀಗಾಗಿ ಇದೀಗ ಕ್ಷಮೆಯ ಹೊರತು ಬೇರೆನೂ ಕೇಳೋಕೆ ಸಾಧ್ಯವಿಲ್ಲ ಎಂದಿದ್ದಾರೆ.
ಐ ಲವ್ ಯೂ' ಸಿನಿಮಾ ಬಿಡುಗಡೆಯಾಗಿ ಒಂದು ವಾರ ಆಗಿದ. ಈ ಸಿನಿಮಾದಲ್ಲಿನ ಬೋಲ್ಡ್ ಮತ್ತು ಹಾಟ್ ಹಾಡೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡಿತ್ತು. ಇದೇ ಹಾಡಿನಿಂದ ಇದೀಗ ರಚಿತಾ ರಾಮ್ ನೋವು ಅನುಭವಿಸುವಂತೆ ಆಗಿದೆ.