'ಅಹಂ ಪ್ರೇಮಾಸ್ಮಿ' ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಅಡಿಯಿಟ್ಟಿದ್ದ ಪಂಜಾಬಿ ಸುಂದರಿ ಹಾಗೂ ಬಹುಭಾಷಾ ನಟಿ ಆರ್ತಿ ಛಾಬ್ರಿಯಾ ಅವರು ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು, ಇವರು ಮುಂಬೈ ಮೂಲದ ವಿಶಾರದ್ ಬೀಡಸ್ಸಿ ಅವರನ್ನು ವಿವಾಹವಾಗಿದ್ದಾರೆ.
ಕಳೆದ ಮಾರ್ಚ್ 21 ರಂದು ತಮ್ಮ ಗೆಳೆಯ ವಿಶಾರದ್ ಅವರೊಂದಿಗೆ ಆರ್ತಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ ತಮ್ಮ ಪ್ರೇಮ ಕಹಾನಿ ಯಾರಿಗೂ ತಿಳಿಯದಂತೆ ಇಟ್ಟಿದ್ರು. ಇದೀಗ ಕಳೆದ ಜೂನ್ 24ರಂದು ಕುಟುಂಬ ಹಾಗೂ ಸ್ನೇಹಿತ ವರ್ಗದ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ತಮ್ಮ ಮದುವೆ ಫೋಟೊವನ್ನು ಸಾಮಾಜಿಕ ಜಾಲತಾಣದಲಲ್ಲಿ ಹರಿಬಿಟ್ಟು ಅಭಿಮಾನಿಗಳಿಗೆ ಆಶ್ಚರ್ಯ ಮೂಡಿಸಿದ್ದಾರೆ. ಹೀಗಾಗಿ ಅಭಿಮಾನಿಗಳು ಇದೀಗ ಆರ್ತಿ ಮದುವೆ ನೋಡಿ ಖುಷ್ ಆಗಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಸಹೋದರ ಬಾಲಾಜಿ ಅವರು ಅಭಿನಯಿಸಿದ 'ಅಹಂ ಪ್ರೇಮಾಸ್ಮಿ' ಅನ್ನೋ ಆರ್ತಿ ಅವರು ಮಿಂಚಿದ್ದರು. ಇದಾದ ನಂತರ ಶಿವರಾಜ್ ಕುಮಾರ್ ಅಭಿಇನಯದ 'ಸಂತ' ಸಿನಿಮಾದಲ್ಲೂ ನೃತ್ಯ ಮಾಡಿದ್ದರು. ಈ ಮೂಲಕ ಪಡ್ಡೆ ಹುಡುಗರ ಹೃದಯ ಕದ್ದಿದ್ದರು.