ರವಿಚಂದ್ರನ್ ಪುತ್ರ ಮನೋರಂಜನ್ ಅವರು ಇದೀಗ ದುಬಾರಿ ಬೈಕ್ ಖರೀದಿಸಿದ್ದಾರೆ. ಈ ಬೈಕ್ ಖರೀದಿಸಬೇಕು ಎಂದು ಮನೋರಂಜನ್ ಅವರು ಶಾಲೆಗೆ ಹೋಗುವ ದಿನಗಳಲ್ಲಿಯೇ ಕನಸು ಕಂಡಿದ್ದರಂತೆ. ಅದಾದ ಮೇಲೆ, ಇದೀಗ ನಿಜ ಜೀವನದಲ್ಲಿ ಅದನ್ನು ಅವರು ಅಭಿಮಾನಿಗಳ ಜೊತೆ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. 


ಹೌದು, ಕ್ರೇಜಿಸ್ಟಾರ್ ರವಿಚಂದ್ರನ್ ಮಗ ಮನೋರಂಜನ್ ಅವರು ಇದೀಗ ಚೀಲಂ ಮತ್ತು ಪ್ರಾರಂಭ ಎಂಬ ಎರಡು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಎರಡೂ ಚಿತ್ರಗಳ ಚಿತ್ರೀಕರವನ್ಣನೂ ಶುರು ಮಾಡಿದ್ದಾರೆ. ಆದರೆ ಇತ್ತೀಚಿಗಷ್ಟೆ ಸಹೋದರಿಯ ಮದುವೆ ಮುಗಿಸಿದ ಅವರು, ಮನೆಗೆ ಮತ್ತೊಬ್ಬ ಅತಿಥಿಯನ್ನ ಬರಮಾಡಿಕೊಂಡಿದ್ದಾರೆ.


ಅಷ್ಟಕ್ಕೂ ಆ ಬೈಕ್ ಯಾವುದು ಅನ್ನೋದು ವಿಶೇಷ. ಅದೇ ಡುಕಾಟಿ 959 ಬೈಕ್. ಇದು 955 ಸಿಸಿ ಹೊಂದಿದೆ. ಸುಮಾರು 200 ಕೆ.ಜಿ. ತೂಕವಿದೆ. ಅಲ್ಲದೇ ಪೆಟ್ರೋಲ್ ಮಾದರಿ ಬೈಕ್ ಇದಾಗಿದ್ದು, ಒಟ್ಟಾರೆಯಾಗಿ 14 ಕಿ.ಮೀ ಮೈಲೇಜ್ ಕೊಡುತ್ತದೆ ಎಂದು ತಿಳಿದು ಬಂದಿದೆ. 


Find out more: