ಕನ್ನಡದ ಟಾಪ್ ನಟಿಯರಲ್ಲಿ ಹರಿಪ್ರಿಯಾ ಅವರೂ ಒಬ್ಬರು. ಸಾಲು ಸಾಲು ಸಿನಿಮಾಗಳನ್ನು ಹರಿಪ್ರಿಯಾ ಮಾಡಿ ಮುಗಿಸಿದ್ದಾರೆ. ಇದೀಗ ಸಿನಿಮಾ ಶೂಟಿಂಗ್ ನಿಂದ ಕೊಂಚ ಬ್ರೇಕ್ ತೆಗೆದುಕೊಂಡಿರುವ ಅವರು, ಪ್ರವಾಸಕ್ಕೆ ಹೋಗಿದ್ದಾರೆ. ಅದೂ ತಮ್ಮ ತಾಯೊಯೊಂದಿಗೆ ಪ್ರವಾಸದ ಮಜಾ ಮಾಡುತ್ತಿದ್ದಾರೆ. 


ಹೌದು.  ಹರಿಪ್ರಿಯಾ ಅಭಿನಯದ ಬಿಚ್ಚುಗತ್ತಿ, ಕುರುಕ್ಷೇತ್ರ, ಎಲ್ಲಿದ್ದೇ ಇಲ್ಲೀತನಕ, ಕನ್ನಡ್ ಗೊತ್ತಿಲ್ಲ, ಕಥಾ ಸಂಗಮ ಈ ಎಲ್ಲ ಚಿತ್ರಗಳ ಹರಿಪ್ರಿಯಾ ಅಭಿನಯದ ದೃಶ್ಯಗಳು ಮುಗಿದಿವೆ. ಇನ್ನೊಂದು ವಿಶೇಷ ಏನೆಂದರೆ, ಈ ಎಲ್ಲ ಚಿತ್ರಗಳೂ ಇದೇ ವರ್ಷದಂದುಉ ತೆರೆ ಕಾಣಲಿವೆ ಎನ್ನಲಾಗಿದೆ. ಇಷ್ಟೊಂದು ಬ್ಯುಸಿಯಾಗಿ ಶೂಟಿಂಗ್ ಮುಗಿಸಿರುವ ಹರಿಪ್ರಿಯಾ ಇದೀಗ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. 


ಇತ್ತೀಚೆಗಷ್ಟೇ ಹರಿಪ್ರಿಯಾ ಅಭಿನಯದ ಡಾಟರ್ ಆಫ್ ಪಾರ್ವತಮ್ಮ ಹಾಗೂ ಸೂಜಿದಾರ ಚಿತ್ರಗಳು ಬಿಡುಗಡೆ ಆಗಿ ಹೋದವು. ಇನ್ನು ಮುಂದೆ ಒಂದರ ನಂತರ ಒಂದು ಚಿತ್ರಗಳು ರಿಲೀಸ್ ಗೆ ಸಿದ್ಧವಾಗುತ್ತವೆ. ಹೀಗಾಗಿ ಬಿಡುವಿಲ್ಲದೇ ನಟಿಸಿದ ಹರಿಪ್ರಿಯಾ ಅವರು ಇದೀಗ ತಾಯಿಯ ಜೊತೆಗೆ ಪ್ರವಾಸದಲ್ಲಿದ್ದಾರೆ. 


Find out more: