ಶ್ರದ್ಧಾ ಶ್ರೀನಾಥ್ ಅವರು ಮೂಗುತಿ ಸುಂದರಿ ಎಂದೇ ಪ್ರಖ್ಯಾತಿ ಆದವರು. ಇದೀಗ ಬೇರೆ ನಟಿಯರೂ ಸಹ ತಮ್ಮ ಮೂಗಿಗೆ ಮೂಗುತಿ ಧರಿಸೋಕೆ ಆರಂಭಿಸಿದ್ದಾರೆ. ಇದರಿಂದ ಅವರ ಸೌಂದರ್ಯ ಮತ್ತಷ್ಟು ಹೆಚ್ಚಾಗುತ್ತಿದೆ. ಇದೀಗ ಮೂಗುತಿ ಸುಂದರಿಯರ ಸಾಲಿಗೆ ರಚಿತಾ ರಾಮ್ ಬಂದಿದ್ದಾರೆ. 


ಹೌದು, ನಟಿ ರಚಿತಾ ರಾಮ್ ಇದೀಗ ಮೂಗುತಿ ಸುಂದರಿ. ಅವರು ತಮ್ಮ ಮುದ್ದಾದ ಮೂಗುತಿ ಜೊತೆಗೆ ರಚಿತಾ ಒಂದು ಫೋಟೋ ತಗೆದುಕೊಂಡಿದ್ದಾರೆ. ರಚಿತಾ ಅವರ ಈ ಹೊಸ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ಹಂಚಿಕೊಂಡಿದ್ದಾರೆ.


ರಚಿತಾ ರಾಮ್ ಅಂದ್ರೆನೇ ಹಾಗೆ. ಅವರು ಆಗಾಗ ಬೇರೆ ಬೇರೆ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯವೇ ಸರಿ. ಈ ಹಿಂದೆ ಶ್ರದ್ಧಾ ಶ್ರೀನಾಥ್, ಶ್ರುತಿ ಹರಿಹರನ್ ಹಾಗೂ ರಶ್ಮಿಕಾ ಮಂದಣ್ಣ ಸೇರಿದಂತೆ ಅನೇಕ ನಟಿಯರು ಡಿಫರೆಂಟ್ ಮೂಗುತಿಗಳ ಮೂಲಕ ಗಮನ ಸೆಳೆದಿದ್ದರು. ಇದೀಗ ರಚಿತಾ ರಾಮ್ ಸರದಿಯಷ್ಟೇ.


Find out more: