ಕಣ್ಣು ಮಿಟುಕಿಸಿ ದೇಶದಾದ್ಯಂತ ಸುದ್ದಿಯಾಗುವುದರ ಜೊತೆಗೆ ಟ್ರೋಲ್ ಆಗಿದ್ದ ಪ್ರಿಯಾ ವಾರಿಯರ್ ಇದೀಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ಹೌದು, ಹಿನ್ನೆಲೆ ಗಾಯಕಿಯಾಗಿಯೂ ಸಿನಿಲೋಕಕ್ಕೆಕಾಲಿಟ್ಟಿದ್ದಾಳೆ. ಈ ಮೂಲಕ ಪ್ರಿಯಾ ತಾನು ಕೇವಲ ನಟಿ ಅಷ್ಟೇ ಅಲ್ಲ, ಹಾಡುಗಾರ್ತಿಯೂ ಹೌದು ಎನ್ನುತ್ತಿದ್ದಾರೆ. 


ಹೌದು ಪ್ರಿಯಾ ವಾರಿಯರ್ ಅಂದರೆ ಸಾಕು ಕಣ್ಸನ್ನೆ ಬೆಡಗಿ ಎಂದೇ ಪ್ರಖ್ಯಾತಿ ಪಡೆದವಳು. ಆದರೆ ಅದಕ್ಕೂ ಮುನ್ನ ಕೆಲವು ಸಂಗೀತ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು ಪ್ರಿಯಾ ವಾರಿಯರ್. ಕೆಲವು ವೇದಿಕೆಗಳಲ್ಲಿ ಪ್ರಿಯಾ ಹಾಡಿ, ಸಂಗೀತಗಾರರು ಹಾಗೂ ಪ್ರೇಕ್ಷಕರಿಂದ ಶಹಬ್ಬಾಸ್‌ ಎನಿಸಿಕೊಂಡಿದ್ದರು. 


ಹೀಗಾಗಿ ಇದೀಗ ಚಿತ್ರದ ಹಾಡೊಂದನ್ನು ಹಾಡುವ ಮೂಲಕ ಅಧಿಕೃತವಾಗಿ ಹಿನ್ನೆಲೆ ಗಾಯಕಿ ಆಗಿದ್ದಾರೆ. ಅದು ಬೇರೆ ಯಾವುದು ಅಲ್ಲ, ರಾಜೇಶ ವಿಜಯನ್‌- ನಿರಂಜ್‌ ಅವರ ಫೈನಲ್ಸ್‌ ಎಂಬ ಚಿತ್ರದ ಹಾಡಿಗೆ ಪ್ರಿಯಾ ವಾರಿಯರ್ ಧ್ವನಿ ಆಗಿದ್ದಾರೆ. ಈ ಹಾಡನ್ನು ಕೈಲಾಸ್ ಮೆನನ್ ಅವರು ಸಂಯೋಜನೆ ಮಾಡಿದ್ದಾರೆ. 


Find out more: