ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬದ ಅಂಗವಾಗಿ ಇನ್ಸ್ ಪೆಕ್ಟರ್ ವಿಕ್ರಂ ಚಿತ್ರದ ಟೀಸರ್ ಬಿಡುಗಡೆಯಾಗಿತ್ತು, ಟೀಸರ್ ಬಿಡುಗಡೆಯಾಗಿ ಸಖತ್ ಹವಾ ಕ್ರಿಯೇಟ್ ಮಾಡುತ್ತಿದೆ. ಇದೀಗ ಮತ್ತೆ 'ಆನಂದ್ ಆಡಿಯೋ' ದಲ್ಲಿ ರಿಲೀಸ್ ಬಿಡುಗಡೆ ಆಗಿದೆ. ಯೆಸ್, ಭರ್ಜರಿ ಮೊತ್ತಕ್ಕೆ ಟೀಸರ್ ಆನಂದ್ ಆಡಿಯೋ ಪಾಲಾಗಿದೆ.


ದಸರಾ ಹಬ್ಬಕ್ಕೆ ಈ ಚಿತ್ರವನ್ನು ಬಿಡುಗಡೆ ಮಾಡುವ ಆಲೋಚನೆ ಇದೆ. ಇನ್ನು ಸಸ್ಪೆನ್ಸ್​ ರೋಲ್​ ನಲ್ಲಿ ಚಾಲೆಂಜಿಂಗ್​ ಸ್ಟಾರ್​ ದರ್ಶನ ಕಾಣಿಸಿಕೊಂಡಿದ್ದಾರೆ. ಆದರೆ ಯಾವ ಪಾತ್ರದಲ್ಲಿ ದಚ್ಚು ಕಾಣಿಸಿಕೊಳ್ಳಿದ್ದಾರೆ ಅನ್ನೋದು ಇನ್ನೂ ಬಹಿರಂಗ ಆಗಿಲ್ಲ. ರಘು ಮುಖರ್ಜಿ ಇದೇ ಮೊದಲ ಬಾರಿಗೆ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.


ಇನ್ಸ್ ಪೆಕ್ಟರ್ ವಿಕ್ರಂ ಚಿತ್ರದ ಚಿತ್ರೀಕರಣ ಸಹ ಕೊನೆ ಹಂತದಲ್ಲಿದ್ದು, ಈ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತವಿದೆ. ಒಟ್ಟು ಚಿತ್ರದಲ್ಲಿ 5 ಹಾಡುಗಳಿದ್ದು, ಇದೇ ಸೆಪ್ಟಂಬರ್​ ತಿಂಗಳಲ್ಲಿ ಆಡಿಯೋ ರಿಲೀಸ್ ಮಾಡಿ. ದಸರಾಗೆ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಮಾಪಕರು ಪ್ಲಾನ್ ಮಾಡಿಕೊಂಡಿದ್ದಾರೆ. 


Find out more: