ಜಿಂದಗಿ ನ ಮಿಲೇಗಾ ದುಬಾರಾ ಚಿತ್ರವನ್ನು ನೋಡದೇ ಇರೋರಾದ್ರೂ ಯಾರು? ಹೌದು ಈ ಚಿತ್ರ ೨೦೧೧ ರಲ್ಲಿ ರಿಲೀಸ್ ಆಗಿತ್ತು. ಇದು ಬಾಲಿವುಡ್ ಸಿನಿಮಾಗಳ ಲೋಕದಲ್ಲಿ ಸ್ಮರಣೀಯ ಚಿತ್ರವಾಯಿತು. ಈ ಚಿತ್ರ ಬಿಡುಗಡೆ ಆಗಿ ಇದೀಗ ೮ ವರ್ಷಗಳೇ ಆಗಿವೆ. ಈ ಖುಷಿಯನ್ನು ಚಿತ್ರತಂಡ ಹಂಚಿಕೊಂಡಿದೆ. 

ಹೌದು, ಈ ಖುಷಿಯನ್ನು ಚಿತ್ರತಂಡ ಟ್ವಿಟರ್‌ ಹಾಗೂ ಇನ್‌ಸ್ಟಾಗ್ರಾಂಗಳಲ್ಲಿ ಹಂಚಿಕೊಂಡಿದೆ. ಈ ಹಿಂದೆ 2001ರಲ್ಲಿ 'ದಿಲ್‌ ಚಾಹತಾ ಹೈ' ಚಿತ್ರ ಬಿಡುಗಡೆ ಆಗಿತ್ತು. ಅದಾದ ಮೇಲೆ ಹತ್ತು ವರ್ಷಗಳ ನಂತೆರ ಬಂದಿದ್ದೆ ಜಿಂದಗಿ ನ ಮಿಲೇಗಾ ದು ಬಾರಾ.  

ಈ ಚಿತ್ರದಲ್ಲಿ ಅಭಯ್‌ ಡಿಯೋಲ್‌,ಹೃತಿಕ್‌ ರೋಷನ್‌, ಕತ್ರಿನಾ ಕೈಫ್‌, ಫರ್ಹಾನ್‌ ಅಖ್ತರ್‌ ಇನ್ನು ಹಲವರು ಅಭಿನಯಿಸಿದ್ದರು. ಈ ಚಿತ್ರದಲ್ಲಿ ಯುವಕರ ತಂಡ ಪ್ರವಾಸ ಹೋಗುವಾಗಿನ ಅನುಭವ ಇದೆ. ಜೀವನದಲ್ಲಿ ಎಲ್ಲರೂ ಒಂದಲ್ಲ ಒಂದು ವಿಷಯಕ್ಕೆ ಭಯ ಪಡುತ್ತಾರೆ. ಆದರೆ ಸಿಕ್ಕ ಒಂದು ಜೀವನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಅನ್ನೋದೇ ಈ ಸಿನಿಮಾದ ತಿರುಳು. 


Find out more: