ಯಜಮಾನ ಈ ಚಿತ್ರ ದರ್ಶನ್ ಅವರಿಗೆ ಮತ್ತೊಂದು ಸಕ್ಸಸ್ ತಂದುಕೊಟ್ಟ ಚಿತ್ರ. ರೈತರ ಬಗ್ಗೆ ಕಾಳಜಿ ಹೊಂದಿರುವ ಸಂದೇಶದ ಈ ಚಿತ್ರ ಶತದಿನಗಳನ್ನು ಪೂರೈಸಿದ್ದು ಇತಿಹಾಸ. ಆದರೆ ಇದೀಗ ಹೊಸ ವಿಷ್ಯ ಏನಪ್ಪ ಅಂದರೆ, ಇದೇ ಯಜಮಾನ ಚಿತ್ರ ಇಂದು ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. 


ಹೌದು, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಆಗಸ್ಟ್ 21 ರಂದು ಅಂದರೆ ಇಂದೇ ಯಜಮಾನ ಸಿನಿಮಾ ಸಂಜೆ 7 ಗಂಟೆಗೆ ಪ್ರಸಾರ ಆಗಲಿದೆ. ಹೀಗಾಗಿ ದರ್ಶನ್ ಅಭಿಮಾನಿಗಳು ಇದೀಗ ಫುಲ್ ಖುಷ್ ಆಗಿದ್ದಾರೆ. 


ಬಹಳ ದಿನಗಳ ನಂತರ ದರ್ಶನ್ ಈ ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಜೊತೆಗೆ ಮತ್ತೊಬ್ಬ ನಾಯಕಿಯೂ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಏನೇ ಆಗಲಿ ಇಂದು ದರ್ಶನ್ ಅಭಿಮಾನಿಗಳು ಸಂಜೆ ಟಿವಿ ಮೇಲೆ ಮತ್ತೊಮ್ಮೆ ತಮ್ಮ ನೆಚ್ಚಿನ ನಾಯಕನ ಚಿತ್ರ ವೀಕ್ಷಿಸಲಿದ್ದಾರೆ.


Find out more: