ಕರೀನಾ ಕಪೂರ್ ಬಾಲಿವುಡ್ ಲೋಕದಲ್ಲಿನ ಹಳೆಯ ಮುಖ. ಸ್ವಲ್ಪ ದಿನಗಳ ಯಾವುದೇ ಚಿತ್ರಗಳಲ್ಲಿ ನಟಿಸದೇ ಇದ್ದ ಈಕೆ, ವೀರ್ ದಿ ವೆಡ್ಡಿಂಗ್ ಚಿತ್ರದ ಮೂಲಕ ಬಾಲಿವುಡ್ ಲೋಕದ ಅಂಗಳಕ್ಕೆ ಮತ್ತೆ ವಾಪಾಸಾದವಳು. ಆದರೆ ಇದೀಗ ವಿಚಿತ್ರ ದಾಖಲೆಯೊಂದು ಕರೀನಾ ಹೆಸರಿನಲ್ಲೆ ದಾಖಲಾಗಿದೆ.
ಹೌದು, ವೀರ್ ದಿ ವೆಡ್ಡಿಂಗ್ ಚಿತ್ರ ಬಾಕ್ಸ್ ಆಫಿಸನಲ್ಲಿ ಅಂತಹ ಗಳಿಕೆಯನ್ನೇನೂ ಮಾಡಿರಲಿಲ್ಲ. ಆದರೂ ಕರೀನಾ ಕಪೂರ ಗೆ ಇರೋ ಬೇಡಿಕೆ ಕಡಿಮೆ ಏನೂ ಆಗಿಲ್ಲ. 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಕರೀನಾ ಅವರ ಕೆಲವು ಸಿನಿಮಾಗಳು ದಾಖಲೆ ಬರೆದಿವೆ. ಆದರೆ ಇದೀಗ ಮತ್ತೊಂದು ವಿಚಿತ್ರ ದಾಖಲೆಯನ್ನು ಕರೀನಾ ಕಪೂರ್ ಮಾಡಿದ್ದಾರೆ.
ಹೌದು, ಕರೀನಾ ಅವರು 2012 ರಲ್ಲಿ ನಟಿಸಿದ್ದ ಹೀರೋಯಿನ್ ಅನ್ನೋ ಚಿತ್ರದಲ್ಲಿ 130 ಡ್ರೆಸ್ ಧರಿಸಿದ್ದರಂತೆ. ಈ ಉಡುಪಗಳು ಎಲ್ಲವೂ ವಿಶ್ವದ ಪ್ರಸಿದ್ಧ ವಿನ್ಯಾಸಕರು ತಯಾರಿಸಿದ್ದು. ಹೀರೋಯಿನ್ ಚಿತ್ರದಲ್ಲಿ 130 ಡ್ರೆಸ್ ಗಳಲ್ಲಿ ಮಿಂಚಿದ್ದ ಕರೀನಾ ದಾಖಲೆ ಬರೆದಿದ್ದರು.