ಬಾಹುಬಲಿ ಖ್ಯಾತಿಯ ಪ್ರಭಾಸ ಇದೀಗ ಸಾಹೋ ಚಿತ್ರದಲ್ಲಿ ನಟಿಸುತ್ತಿರೋದು ಎಲ್ಲರಿಗೂ ಗೊತ್ತೇ ಇದೆ. ಅಲ್ಲದೇ ಚಿತ್ರೀಕರಣವೂ ಇನ್ನೇನು ಮುಗಿದ್ದು, ಆಗಸ್ಟ್ 15 ಕ್ಕೆ ಚಿತ್ರ ತೆರೆ ಮೇಲೆ ಬರುತ್ತದೆ ಎನ್ನಲಾಗಿತ್ತು. ಆದರೆ ಇದೀಗ ಸದ್ಯಕ್ಕೆ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗಿದೆ. ಅಷ್ಟಕ್ಕೂ ಕಾರಣ ಏನು ಅಂತೀರಾ? ಇಲ್ಲಿದೆ ನೋಡಿ ಉತ್ತರ.
ಹೌದು ಸಾಹೋ ಚಿತ್ರ ಆಗಸ್ಟ್ ತಿಂಗಳಾಂತ್ಯಕ್ಕೆ ಪೋಸ್ಟ್ ಪೋನ್ ಆಗಿದೆ. ಇದರಿಂದ ಪ್ಯಾನ್ ಇಂಡಿಯನ್ನ ಚಿತ್ರಗಳಿಗೆ ಹೊಡೆತ ಬಿದ್ದಿದೆ. ಅಷ್ಟಕ್ಕೂ ಸಾಹೋ ರಿಲೀಸ್ ಡೇಟ್ ಪೋಸ್ಟ್ ಪೋನ್ ಆಗಿದ್ದಾದ್ರೂ ಯಾಕೆ?
ಸಾಹೋ ಚಿತ್ರ 300 ಕೋಟಿ ಬಜೆಟ್ ನಲ್ಲಿ ತಯಾರಾಗುತ್ತಿದೆ. ಇದು ಕೇವಲ ತೆಲುಗು ಚಿತ್ರರಂಗವಲ್ಲದೇ ಇಡೀ ಭಾರತದ ಗುಣಮಟ್ಟವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ತೋರಿಸುವ ಸಿನಿಮಾ. ಹೀಗಾಗಿ ಒಳ್ಳೆ ಕ್ವಾಲಿಡಿ ಸಿನಿಮಾ ಕೊಡುವ ಉದ್ದೇಶದಿಂದ ಸಿನಿಮಾ ಬಿಡುಗಡೆ 15 ದಿನ ವಿಳಂಬವಾಗುತ್ತಿದೆ ಎಂದು ಸಿನಿಮಾ ತಂಡ ಹೇಳೀಕೊಂಡಿದೆ.