ನಟಿ ಕೊಯಿನಾ ಮಿತ್ರಾ ಅವರಿಗೆ ಇದೀಗ ಸಂಕಷ್ಟ ಎದರಾಗಿದೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಈ ಬಾಲಿವುಡ್ ನಟಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಅಲ್ಲದೇ 2013 ರಲ್ಲಿ ಮಾಡೆಲ್ ಪೂನಂ ಜೊತೆಗೆ ಸೇರಿ 22ರು ಲಕ್ಷ ಸಾಲ ಮರುಪಾವತಿ ಮಾಡಬೇಕಾಗಿತ್ತು. ಅದರಲ್ಲಿ 3 ಲಕ್ಷದ ಚೆಕ್ ಬೌನ್ಸ್ ಆಗಿತ್ತು. 


ಈ ಹಿನ್ನೆಲೆ ನಟಿಯ ವಿರುದ್ಧ ಜುಲೈ 19, 2013 ರಂದು ಪೂನಂ ನೋಟಿಸ್ ನೀಡಿದ್ದರು. ಆದರೆ ಇವರ ವಿರುದ್ಧವೇ ಕೊಯಿನಾ ಮರುನೋಟಿಸ್ ಕಳುಸಿದ್ದರು. ನಂತರ ಅಕ್ಟೋಬರ್ 10 2013 ರಂದು ಕೊಯೆನಾ ಮಿತ್ರಾ ವಿರುದ್ಧ ಮೆಟ್ರೋಪಾಲಿಟನ್ ನ್ಯಾಯಲಯದಲ್ಲಿ ಪೂನಂ ದೂರು ದಾಖಲಿಸಿದ್ದರು. 


ಈ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್ ಇಂದು ತೀರ್ಪು ಪ್ರಕರಣಸಿದೆ. ಆರೋಪಿ ಕೆಯೆನಾ ಅವರಿಗೆ 6 ತಿಂಗಳ ಜೈಲು ವಿಧಿಸಿರುವ ನ್ಯಾಯಾಲಯ, 1.64 ಲಕ್ಷ ಬಡ್ಡಿ ಸೇರಿ 4.64 ಹಣ ವಾಪಾಸ್ ನೀಡುವಂತೆ ಆದೇಶ ಹೊರಡಿಸಿದೆ. 

Find out more: