ಬಾಹುಬಲಿ ಖ್ಯಾತಿಯ ನಟ ರಾಣಾ ದಗ್ಗುಬಾಟಿ. ಇವರು ಇದೀಗ ಕಿಡ್ನಿ ವೈಪಲ್ಯದಿಂದ ಬಳಲುತ್ತಿದ್ದಾರೆ. ಅಲ್ಲದೇ ಇದೀಗ ವಿದೇಶದಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರಲ್ಲಿ ವಿಶೇಷ ಏನಪ್ಪ ಅಂದರೆ, ರಾಣಾ ದಗ್ಗುಬಾಟಿ ಅವರಿಗೆ ಕಿಡ್ನಿ ಕಸಿ ಅಗತ್ಯವಿದ್ದು, ಅವರ ತಾಯಿಯೇ ಮೂತ್ರಪಿಂಡ ದಾನಕ್ಕೆ ಮುಂದಾಗಿದ್ದಾರೆ. 


ತೆಲುಗು ಅಷ್ಟೇ ಅಲ್ಲದೇ ಬೇರೆ ಭಾಷೆಯಲ್ಲಿಯೂ ರಾಣಾ ದಗ್ಗುಬಾಟಿ ಅಭಿಯಿಸಿದ್ದಾರೆ. ಇವರು ಇದೀಗ ಒಂದು ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ಹೈದರಾಬಾದ್ ಮತ್ತು ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 


ಆದರೆ, ರಾಣಾ ದಗ್ಗುಬಾಟಿಗೆ ಚೇತರಿಕೆ ಆಗಿಲ್ಲ. ಹೀಗಾಗಿ ಅವರು ಇದೀಗ ಅಮೆರಿಕದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿ ಅವರಿಗೆ ಬದಲಿ ಕಿಡ್ನಿ ಜೋಡಣೆ ಮಾಡಬೇಕು ಎಂದು ವೈದ್ಯರು ಹೇಳಿರೋ ಕಾರಣಕ್ಕೆ ಅವರ ತಾಯಿ ಲಕ್ಷ್ಮೀ ಅವರು ರಾಣಾ ದಗ್ಗುಬಾಟಿಗೆ ಕಿಡ್ನಿ ದಾನ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. 


Find out more: