ದಕ್ಷಿಣ ಭಾರತದ ಇಮ್ರಾನ್ ಹಶ್ಮಿ ಎಂದು ವಿಜಯ್ ದೇವರಕೊಂಡ ಅವರನ್ನು ಕರೆಯುತ್ತಾರೆ. ವಿಜಯ್ ದೇವರಕೊಂಡ ಇದೀಗ ತಮ್ಮ ಕಿಸ್ ಸೀನ್‌ಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ರಶ್ಮಿಕಾ ಮಂದಣ್ಣ ಜೊತೆಗೆ ಲಿಪ್ ಲಾಕ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ಅವರು, ಒಂದು ಸಿನಿಮಾದಲ್ಲಿ ಚುಂಬಿಸುವ ಹಾಗೂ ಲಿಪ್ ಲಾಕ್ ಮಾಡುವ ಸೀನ್ ಅಗತ್ಯ ಇದ್ದರೆ,ಕೇವಲ ರಶ್ಮಿಕಾ ಮಾತ್ರವಲ್ಲ, ಆ ಜಾಗದಲ್ಲಿ ಯಾರೇ ಇದ್ದರೂ ನಾನು ಚುಂಬಿಸುತ್ತೇನೆ ಎಂದಿದ್ದಾರೆ .
ಅಷ್ಟೇ ಅಲ್ಲದೇ, ಆ ಜಾಗದಲ್ಲಿ ಒಂದು ಖಾಲಿ ಚೇರ್ ಇದ್ದರೂ ಕೂಡ ನಾನು ಅದೇ ರೀತಿ ರೋಮ್ಯಾನ್ಸ್ ಮಾಡುತ್ತೇನೆ, ಯಾಕೆಂದರೆ ಒಬ್ಬ ನಟನಾಗಿ ಇದನ್ನೆಲ್ಲ ನಾನು ಮಾಡಲೇಬೇಕು. ಆದಾಗ್ಯೂ ಅದೆಲ್ಲ ರೀಲ್. ಆದರೆ ಅದು ಒಬ್ಬ ಪ್ರೇಕ್ಷಕನಿಗೆ ನಿಜ ಎಂಬಂತೆ ತೋರಿಸಬೇಕು ಅದೇ ನಿಜವಾದ ನಟನೆ ಎಂದು ಅವರು ಹೇಳಿದ್ದಾರೆ.
ಇನ್ನು ಸೆಂಟಿಸೆಂಟ್ ಗಾಗಿ ಹಾಗೂ ಪ್ರಚಾರ ಗಿಟ್ಟಿಸಿಕೊಳ್ಳೋಕೆ ಈ ರೀತಿ ಲಿಪ್ ಲಾಕ್ ದೃಶ್ಯಗಳನ್ನು ಸೇರಿಸಲಾಗುತ್ತಿದೆ ಎಂದು ಹೇಳುವುದು ಮೂರ್ಖತನ. ಅಷ್ಟೇ ಅಲ್ಲದೇ ಮುತ್ತಿಕ್ಕುವ ದೃಶ್ಯಗಳಿಂದಲೇ ಸಿನಿಮಾ ಹಿಟ್ ಆಗುತ್ತದೆ ಅನ್ನೋದು ಸಹ ಮೂರ್ಖತನ ಎಂದು ವಿಜಯ್ ದೇರಕೊಂಡ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.