ಸಮಂತಾ ಅಭಿನಯದ ಅದರಲ್ಲು ಮಹಿಳಾ ಕೇಂಧ್ರಿತ ಚಿತ್ರ ಓ ಬೇಬಿ, ದೇಶಿಯ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಹಣ ಗಳಿಸಿದೆ. ಅಷ್ಟೇ ಅಲ್ಲದೇ ವಿದೇಶದಲ್ಲೂ ಅಂದರೆ ಅಮೇರಿಕಾದಲ್ಲಿ ಈ ಫ್ಯಾಂಟಸಿ ಡ್ರಾಮಾ, 1 ಮಿಲಿಯನ್ ಡಾಲರ್ ಕ್ಲಬ್ ಸೇರಿದೆ. ಈ ಕುರಿತು ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ.
2019 ಸಮಂತ ಅವರಿಗೆ ಒಳ್ಳೆಯ ಲಾಭ ತಂದುಕೊಟ್ಟ ವರ್ಷ. ಕೆಲವು ತಿಂಗಳ ಹಿಂದೆಯಷ್ಟೇ ಸಮಂತ ಅವರ ಮಜಿಲಿ ಚಿತ್ರ ಬಿಡುಗಡೆ ಆಗಿತ್ತು. ಇದು ಬಾಕ್ಸ್ ಆಫಿಸ್ ನಲ್ಲಿ ಹಿಟ್ ಕೂಡ ಆಗಿತ್ತು. ಇದೀಗ ಮತ್ತೆ ಓಹ್ ಬೇಬಿ ಚಿತ್ರ ಕೂಡ ಒಳ್ಳೆಯ ಗಳಿಕೆ ತಂದು ಕೊಟ್ಟಿದೆ.
ಇತ್ತೀಚೆನ ದಿನಗಳಲ್ಲಿ ಸಮಂತಾ ಅವರು ಉತ್ತಮ ಚಿತ್ರಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಅದರಲ್ಲೂ ಓಹ್ ಬೇಬಿ ಚಿತ್ರ ಅವರಿಗೆ ವಿಶೇಷವಂತೆ. ಈ ಚಿತ್ರ ಚೀನಾದಲ್ಲೂ ಮುಂಜಾನೆ ಪ್ರದರ್ಶನ ಕಂಡ ಮೊದಲ ಮಹಿಳಾ ಕೇಂಧ್ರಿತ ಚಿತ್ರವಾಗಿದೆ. ಭಾಷೆ ಅಡೆತಡೆ ಮುರಿದು ಅಂತರಾಷ್ಟ್ರ ಮಟ್ಟದಲ್ಲಿ ಓಹ್ ಮುಂಚಿತ್ತಿರೋದು ಸಮಂತಾಗೆ ಖುಷಿ ನೀಡಿದೆ.
---------------