ಕಾಲಿವುಡ್ ಸ್ಟಾರ್ ಸೂರ್ಯ ಅವರು ಜ್ಯೋತಿಕಾ ಅವರನ್ನು ತಮ್ಮ ಎರಡನೇ ಹೆಂಡತಿ ಎಂದು ಹೇಳಿದ್ದಾರೆ. ಇದರಿಂದ ಇಡೀ ಕಾಲಿವುಡ್ ಲೋಕಬೇ ಬೆಚ್ಚಿ ಬಿದ್ದಿದೆ. ಹಾಗಾದ್ರೆ ನಿಜಕ್ಕೂ ಜ್ಯೋತಿಕಾ ಅವರು ಸುರ್ಯ ಅವರಿಗೆ ಎರಡನೇ ಹೆಂಡತಿಯಾ? ಅನ್ನೋ ಪ್ರಶ್ನೆಗೆ ಉತ್ತರ  ಇತ್ತೀಚೆಗೆ 44 ವರ್ಷದ ಹುಟ್ಟು ಹಬ್ಬದ ಆಚರಿಸಿಕೊಂಡ ನಟ ಸೂರ್ಯ ಅವರು ಪತ್ನಿ ಜ್ಯೋತಿಕಾ ಅವರ ಬಗ್ಗೆ ಮಾತನಾಡಿದ್ದಾರೆ. ನಾಗರಹಾವು ಚಿತ್ರದಲ್ಲಿ ಜ್ಯೋತಿಕಾ ಉಪೇಂದ್ರ ಜೊತೆಗೆ ಅಭಿನಯಿಸಿದ್ದರು.


ಕಾಲಿವುಡ್ ಸ್ಟಾರ್ ಸೂರ್ಯ ಅವರು 44ನೇ ವರ್ಷದ ಹುಟ್ಟು ಹಬ್ಬದಲ್ಲಿ ಒಂದು ಗುಟ್ಟನ್ನು ಬಿಟ್ಟು ಕೊಟ್ಟಿದ್ದಾರೆ. 2006 ರಲ್ಲಿ ಚೆನ್ನೈನಲ್ಲಿ ವಿವಾಹ ಆಗಿದ್ದರು. ಇವರು ಇಲ್ಲಿಯವರೆಗೆ ದಕ್ಷಿಣ ಭಾರತದ ಆದರ್ಶ ತಾರಜೋಡಿ ಎಂದೇ ಫೇಮಸ್ ಆಗಿದ್ದಾರೆ. ನಟ ಸೂರ್ಯ ಹಾಗೂ ಜ್ಯೋತಿಕಾ ಅವರಿಗೆ ದೇವ್ ಮತ್ತು ದಿವ್ಯಾ ಎಂಬ ಇಬ್ಬರು ಮಕ್ಕಳಿದ್ದಾರೆ. 2006 ರಲ್ಲಿ ಜ್ಯೋತಿಕಾ ಅವರು ಬಹುಭಾಷೆಯ ನಟಿ. ಆದರೆ ಸೂರ್ಯ ಇನ್ನೂ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು.


ಇಬ್ಬರು ಜೊತೆಯಾಗಿ 3 ಚಿತ್ರಗಳನ್ನು ಮಾಡಿದ್ದು, ತೆರೆಮೇಲಿನ ಇವರ ಕೆಮಿಸ್ಟ್ರಿ ಕಂಡ ಜನ ಸೂರ್ಯ ಹಾಗೂ ಜ್ಯೋತಿಕಾ ಕುರಿತಾಗಿ ಗಾಸಿಪ್​ ಮಾಡತೊಡಗಿದ್ದರು. ಆಗಲೇ ಅವರಿಬ್ಬರ ಮಧ್ಯೆಯೂ ಒಂದು ಪ್ರೀತಿ ಮೂಡಿತ್ತು. ಗಾಸಿಪ್​ ಕೊನೆಗೂ ನಿಜವಾಗಿ ಇಬ್ಬರೂ ಪ್ರೀತಿ ವಿಷಯ ಬಾಯ್ಬಿಟ್ಟರು. ಈ ವಿಷಯ ಮನೆಯವರಲ್ಲಿ ಹೇಳಿದಾಗ ಮನೆಯಲ್ಲಿ ಯಾರೂ ಕೂಡಾ ಒಪ್ಪಲಿಲ್ಲ. ಸೂರ್ಯ ಅವರ ತಂದೆಗೂ ಈ ಮದುವೆ ಇಷ್ಟ ಇರಲಿಲ್ಲ. ಆದರೆ ನಂತರ ಆಗಿದ್ದೇನು ಗೊತ್ತಾ?


ಆಗ ಜ್ಯೋತಿಕಾಗೆ ಕೊಟ್ಟ ಮಾತಿಗಾಗಿ ತಂದೆಯನ್ನು ಎದುರಿಸಿ ಸೀಕ್ರೆಟ್ ಆಗಿ ಸೂರ್ಯ ಮತ್ತು ಜ್ಯೋತಿಕಾ ಮದುವೆಯಾದರು, ನಂತರ ಎರಡೂ ಮನೆಯವರು ಒಪ್ಪಿ ಮತ್ತೊಮ್ಮೆ ಇಬ್ಬರ ಮದುವೆಯನ್ನು ಅದ್ದೂರಿಯಾಗಿ ಮಾಡಿದರು. ಹೀಗೆ ಜ್ಯೋತಿಕಾರನ್ನು ಎರಡು ಬಾರಿ ಮದುವೆಯಾದರಂತೆ ನಟ ಸೂರ್ಯ. ಅದಕ್ಕಾಗಿಯೆ ನಟ ಸೂರ್ಯ ತಮಾಷೆಗಾಗಿ ಜ್ಯೋತಿಕಾ ನನ್ನ ಎರಡನೆ ಪತ್ನಿ ಅಂತ ಹೇಳಿದ್ದಾರೆ

Find out more: