ವಿಜಯ್ ದೇವರಕೊಂಡ ಅರ್ಜುನ್ ರೆಡ್ಡಿ ಚಿತ್ರದಿಂದ ದೊಡ್ಡ ಮಟ್ಟದಲ್ಲಿ ಹಿಟ್ ಆದರು. ಇದೀಗ ಡಿಯರ್ ಕಾಮ್ರೆಡ್ ಚಿತ್ರ ತೆರೆ ಮೇಲೇ ಪ್ರದರ್ಶನ ಕಾಣುತ್ತಿದೆ. ಆದರೆ ವಿಜಯ್ ದೇವರಕೊಂಡ ಅವರ ಅಭಿನಯದ ಹೀರೋ ಚಿತ್ರದ ಶೂಟಿಂಗ್ ಇತ್ತೀಚೆಗೆ ಆರಂಭ ಆಗಿದೆ. ಅಲ್ಲದೇ ಈ ಚಿತ್ರದ ಕೆಲವು ಪ್ರಮುಖ ದೃಶ್ಯಗಳನ್ನು ದೆಹಲಿಯಲ್ಲಿ ಶೂಟ್ ಮಾಡಲಾಯಿತು.


ವಿಜಯ್ ದೇವರಕೊಂಡ ಅವರು ಇದೀಗ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ನಟ ಎಂಬುದು ನಿರ್ವಿವಾದ. ಆದರೆ ಹೀರೋ ಚಿತ್ರದ ಸುಮಾರು ಶೇ.20ರಷ್ಟು ಶೂಟಿಂಗ್ ಪೂರ್ಣಗೊಂಡಿದ್ದು, ನಿರ್ಮಾಪಕರು ಚಿತ್ರದ ಔಟ್ ಪುಟ್ ಬಗ್ಗೆ ಸಂತೋಷವಾಗಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಚಿತ್ರದ ಶೂಟಿಂಗ್ ಬಗ್ಗೆ ಇದೀಗ ಸಂಕಷ್ಟವೊಂದು ಎದುರಾಗಿದೆ. 


ಹೀರೋ ಚಿತ್ರಕ್ಕೆ ನಿರ್ಮಾಪಕರು ಹೆಚ್ಚಿನ ಹಣವನ್ನು ಹೂಡಿಕೆ ಮಾಡಿದ್ದರು ಎನ್ನಲಾಗಿದೆ. ಆದರೆ ಈ ಈ ಪ್ರಾಜೆಕ್ಟ್ ಮಧ್ಯದಲ್ಲಿ ನಿಲ್ಲಿಸಲು ಅವರು ನಿರ್ಧರಿಸಿದ್ದಾರಂತೆ. ಹೌದು, ಸಿನೆಮಾ ಎಕ್ಸ್‌ಪ್ರೆಸ್ ಪ್ರಕಾರ, ಪ್ರೊಡಕ್ಷನ್ ಹೌಸ್ ಚಿತ್ರದ ಔಟ್ ಪುಟ್ ಸಂತಸಗೊಂಡಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಅದನ್ನು ಇಲ್ಲಿಂದ ಹೇಗೆ ಮುಂದೆ ತೆಗೆದುಕೊಂಡು ಹೋಗುವುದು ಎಂಬ ಬಗ್ಗೆ ನಿರ್ದೇಶಕರೊಂದಿಗೆ ಒಂದು ತೀರ್ಮಾನಕ್ಕೆ ಬರಲು ಸಾಧ್ಯವಾಗಲಿಲ್ಲವಂತೆ ಎಂದು ತಿಳಿದು ಬಂದಿದೆ. 


ಹೀರೋ ಚಿತ್ರದ ನಿರ್ಮಾಣಕ್ಕಾಗಿ ಇದುವರೆಗೆ 15 ಕೋಟಿ ರೂ. ಖರ್ಚು ಮಾಡಿದ್ದರೂ, ಅದನ್ನು ಕೈಬಿಡಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಚಿತ್ರವನ್ನು ಕಾಕಾ ಮುಟ್ಟೈ ಖ್ಯಾತಿಯ ಆನಂದ್ ಅಣ್ಣಾಮಲೈ ನಿರ್ದೇಶಿಸುತ್ತಿದ್ದರು. ಆದರೆ ಈ ಚಿತ್ರದ ವಿಶೇಷತೆ ಏನು ಅಂದರೆ, ವಿಜಯ್ ದೇವರಕೊಂಡ ಅವರು ವೃತ್ತಿಪರ ಬೈಕರ್ ಪಾತ್ರದಲ್ಲಿ ನಟಿಸಲಿದ್ದು, ಪಾತ್ರಕ್ಕಾಗಿ ಕಠಿಣ ತರಬೇತಿಯನ್ನು ಪಡೆದಿದ್ದಾರೆ ಎಂದು ಹೇಳಲಾಗಿತ್ತು.


ಅರ್ಜುನ್ ರೆಡ್ಡಿಯಲ್ಲಿ ವಿಜಯ್ ಶಾಲಿನಿ ಪಾಂಡೆ, ಮಾಳವಿಕಾ ಮೋಹನ್ ಅವರು ಜೋಡಿಯಾಗಿದ್ದರು. ಅವರು ಹೀರೋ ಚಿತ್ರದಲ್ಲಿಯೂ ಮಹಿಳಾ ಪಾತ್ರಗಳನ್ನು ನಿರ್ವಹಿಸಲು ಒಪ್ಪಿಕೊಂಡಿದ್ದರು. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿತ್ತು. ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆ ಮಾಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿತ್ತು ಎಂದು ತಿಳಿದು ಬಂದಿದೆ.


Find out more: