ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ ಇದೀಗ ಐದು ಭಾಷೆಯಲ್ಲಿ ಬರುತ್ತಿದೆ. ಇದು ಸಹಜವಾಗಿಯೇ ಸಿನಿ ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚು ಮಾಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗು ಹಿಂದಿಯಲ್ಲಿ ಈ ಸಿನಿಮಾ ತೆರೆ ಕಾಣೋಕೆ ಸಜ್ಜಾಗಿದೆ. ಆದರೆ ಸದ್ಯ ಸಿಗುತ್ತಿರುವ ಮಾಹಿತಿ ಪ್ರಕಾರ, ಆಗಸ್ಟ್ 9ರಂದು ದಕ್ಷಿಣದ ನಾಲ್ಕು ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಅದರಲ್ಲೂ ಆಗಸ್ಟ್ 15ರಂದು ಕುರುಕ್ಷೇತ್ರ ಸಿನಿಮಾ ಹಿಂದಿಯಲ್ಲಿ ಬರುತ್ತಿದೆ ಎನ್ನಲಾಗುತ್ತಿದೆ. 

ಕುರುಕ್ಷೇತ್ರ ಸಿನಿಮಾ ಅತ್ಯಂತ ದೊಡ್ಡ ಸಿನಿಮಾ. ಇದಕ್ಕೆ ದೊಡ್ಡ ಮಟ್ಟದ ಬಜೆಟ್ ಹಾಕಿದ್ದಾರೆ. ಅಲ್ಲದೇ, ಇದನ್ನು ನಿರ್ಮಾಣ ಮಾಡಿದವರು ರಾಜಕಾರಣಿ ಮುನಿರತ್ನ. ಅಷ್ಟಕ್ಕೂ ಇದೀಗ ಕುರುಕ್ಷೇತ್ರ ಸಿನಿಮಾಕ್ಕೆ ಅದ್ಯಾವ ಭಾಷೆಯ ಯಾವ ಚಿತ್ರಗಳು ಪೈಪೋಟಿ ಒಡ್ಡಲಿವೆ ಎಂದು ಪ್ರಶ್ನೆ ಎದರಾಗಿದೆ. ಈ ಪ್ರಶ್ನೆಯ ಜಾಡು ಹಿಡಿದು ಹೊರಟರೆ ಸಿಗೋದೆ ಮತ್ತೊಂದು ವಿಶೇಷವಾದಂತಹ ಮಾಹಿತಿ.

ಹಿಂದಿಯಲ್ಲಿ ಮೊದಲನೆಯದಾಗಿ ನೋಡೋದಾದರೆ ಮಿಶನ್ ಮಂಗಲ್. ಹೌದು ಅಕ್ಷಯ್ ಕುಮಾರ್ ಅವರು ಅಭಿನಯಸಿರೋ ಬಾಲಿವುಡ್‌ ಸಿನಿಮಾ ಮಿಶನ್ ಮಂಗಲ್ ಕೂಡ ಆಗಸ್ಟ್ 15ಕ್ಕೆ ಚಿತ್ರಮಂದಿರಕ್ಕೆ ತೆರೆಗೆ ಬರಲಿದೆ. ಕಳೆದ ಹತ್ತು ವರ್ಷದಲ್ಲಿ ಅಕ್ಷಯ್ ಕುಮಾರ್ ಕಮರ್ಷಿಯಲ್ ಆಗಿ ಹೆಚ್ಚು ಸಕ್ಸಸ್ ಕಂಡಿದ್ದಾರೆ ಎನ್ನುತ್ತಾರೆ ಸಿನಿ ಪಂಡಿತರು. ಬಾಕ್ಸ್ ಆಫೀಸ್ ನಲ್ಲೂ ಒಳ್ಳೆಯ ಬಿಸಿನೆಸ್ ಮಾಡುತ್ತಾರೆ. ಹೀಗಾಗಿ ಅಕ್ಷಯ್ ಅವರ ಮಿಷನ್ ಮಂಗಲ್ ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಇದೆ. ಇದು ಕುಡ ಕುರುಕ್ಷೇತ್ರ ಸಿನಿಮಾಗೆ ತಕ್ಕಮಟ್ಟಿಗಿನ ಹೊಡೆತ ಕೊಡಬಹುದು ಎನ್ನಲಾಗುತ್ತಿದೆ. 

ಸೌತ್ ಇಂಡಿಯಾದಲ್ಲಿ ತಲಾ ಎಂದು ಗುರುತಿಸಿಕೊಂಡವರು ಎಂದರೆ ಅದು ಅಜಿತ್ ಕುಮಾರ್. ಹೌದು ಅವವರ ಚಿತ್ರವು ಒದೇ ಆಗಸ್ಟ್ 8ಕ್ಕೆ ತೆರೆಗೆ ಬರಲಿದೆ. ಹಿಂದಿಯ ಪಿಂಕ್ ಚಿತ್ರದ ತಮಿಳು ರಿಮೇಕ್ ಚಿತ್ರ ನೇರ್ಕೊಂಡ ಪಾರ್ವಿ ಎಂಬುದು ಕುರುಕ್ಷೇತ್ರಕ್ಕೂ ಮುಂಚೆಯೇ ಚಿತ್ರಮಂದಿರಕ್ಕೆ ಬರೋದರಿಂದ ಇದು ಕುರುಕ್ಷೇತ್ರ ಸಿನಿಮಾಕ್ಕೂ ಪರಿಣಾಮ ಬೀರಬಬಹುದು ಎನ್ನಲಾಗಿದೆ. ಇದೆಲ್ಲದರ ಜೊತೆಗೆ ಕನ್ನಡದಲ್ಲೂ ಕೆಂಪೆಗೌಡ 2 ಸಿನಿಮಾ ಬರುತ್ತಿದೆ. ಇದರಲ್ಲಿ ಕೋಮಲ್ ಅವರು ಹಿರೋ ಆಗಿ ಅಭಿನಯ ಮಾಡಿದ್ದಾರೆ. ಇದು ಆಗಸ್ಟ್ 9 ರಂದು ಚಿತ್ರ ತೆರೆ ಕಾಣಲಿದೆ. ಇದು ಕುರುಕ್ಷೇತ್ರ ಚಿತ್ರಕ್ಕೆ ಪೈಪೋಟಿ ನೀಡದಿದ್ದರೂ ಕೋಮಲ್ ಅವರ ಅದೃಷ್ಟವನ್ನು ಈ ಸಿನಿಮಾ ಪರೀಕ್ಷೆ ಮಾಡುತ್ತಿದೆ.


Find out more: