ಇದೇ ಆಗಸ್ಟ್ 9 ರಂದು ಬಹುನಿರೀಕ್ಷಿತ ಚಿತ್ರ, ಬಹುಬಜೆಟ್ ಚಿತ್ರ ಕುರುಕ್ಷೇತ್ರ ರಿಲೀಸ್ ಆಗಲಿದೆ. ದರ್ಶನ್ ಅವರ ಅಭಿಮಾನಿಗಳಂತೂ ಈ ಚಿತ್ರ ವೀಕ್ಷಣೆಗೆ ಕಾತುರಿದಂಲೇ ಕಾದು ಕುಳಿತಿದ್ದಾರೆ. ಆದರೆ ಇದೀಗ ಕುರುಕ್ಷೇತ್ರ ಚಿತ್ರಕ್ಕೆ ಸಮಸ್ಯೆಯೊಂದು ಎದುರಾಗಿದೆ. ಅದು ಕರ್ನಾಟಕ ರಾಜ್ಯದಲ್ಲಿಯೇ ಕುರುಕ್ಷೇತ್ರಕ್ಕೆ ಅಗತ್ಯವಿದ್ದಷ್ಟುಉ ಥೀಯಟರ್ ಲಭ್ಯವಾಗಿಲ್ಲ. ಅಷ್ಟಕ್ಕು ಇದಕ್ಕೆ ಕಾರಣ ಏನು ಎಂದು ಹುಡುಕಿಕೊಂಡು ಹೊರಟರೆ ಬಂದು ನಿಲ್ಲೋದು ಕುರುಕ್ಷೇತ್ರ ತಂಡದ ವ್ಯಾಪರ ನೀತಿಯಂತೆ.
ಹೌದು, ಕುರುಕ್ಷೇತ್ರ ಸಿನಿಮಾ ದೇಶದ ಐದು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರೋದೇನೋ ನಿಜ. ಆದರೆ ರಾಜ್ಯದಲ್ಲಿಯೇ ಕಡಿಮೆ ಸಂಖ್ಯೆ ಥೀಯಟರ್ ಸಿಕ್ಕರೆ ನಿಜಕ್ಕೂ ಇದು ದರ್ಶನ್ ಅಭಿಮಾನಿಗಳಿಗೆ ಬೇಸರದ ಸಂಗತಿಯೇ ಸರಿ ಎನ್ನಬಹುದು. ಬಹುತಾರಾಗಣ ಹೊಂದಿದ ಈ ಚಿತ್ರಕ್ಕೆ ಕಡಿಮೆ ಚಿತ್ರಮಂದಿರ ಸಿಕ್ಕಿರೋದು ಮೈನಸ್ ಪಾಯಿಂಟ್ ಆಗುವ ಸಾಧ್ಯತೆಯೂ ಹೆಚ್ಚಾಗಿದೆ.
ರಾಜ್ಯದಲ್ಲಿ ಕುರುಕ್ಷೇತ್ರ 300 ಕ್ಕೂ ಹೆಚ್ಚು ಥೀಟಟರ್ ಗಳಲ್ಲಿ 2ಡಿ ಮತ್ತು 3ಡಿ ವರ್ಶನ್ ಗಳಲ್ಲಿ ಬಿಡುಗಡೆ ಆಗುತ್ತದೆ ಎಂದು ಚಿತ್ರತಂಡ ಈ ಹಿಂದೆಯೇ ಹೇಳಿಕೊಂಡಿತ್ತು. ಆದರೆ ಇದೀಗ ಅದು ಹುಸಿಯಾಗಿದೆ. ಕಾರಣ ಏನಪ್ಪ ಅಂದರೆ, ಕುರುಕ್ಷೇತ್ರ ಸಿನಿಮಾವನ್ನು ಥೀಯಟರ್ ನವರು ಪಡೆಯಬೇಕು ಎಂದರೆ, ಎಂದಿಗಿಂತ ಮೂರುಪಟ್ಟು ಹೆಚ್ಚು ಹಣ ತೆತ್ತು ಕೊಡಬೇಕಂತೆ. ಅಂದರೆ ಒಂದು ಥೀಯಟರ್ 5 ಲಕ್ಷ ನೀಡೋ ಬದಲು 15 ಮೊದಲೇ ನೀಡಿ, ಚಿತ್ರವನ್ನು ಪಡೆಯಬೇಕು ಎಂದು ಹೇಳಲಾಗಿದೆ.
ನಿರ್ಮಾಪಕ ಮುನಿರತ್ನ ಹಾಗೂ ರಾಕ್‌ಲೈನ್ ವೆಂಕಟೇಶ್ ಅವರು ಅನುಸರಿಸಿರೋ ಈ ನೀತಿ ಪ್ರದರ್ಶಕ ವಲಯಕ್ಕೆ ನಿಜಕ್ಕೂ ಕಷ್ಟ ಎನಿಸುತ್ತಿದೆ, ಮುರು ಪಟ್ಟು ಹೆಚ್ಚು ಹಣವನ್ನು ನೀಡೋದು ಚಿತ್ರಮಂದಿರದ ಮಾಲೀಕರಿಗೆ ಹೊರೆ ಆಗಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಅನೇಕ ಚಿತ್ರಮಂದಿರಗಳು ಮುನಿರತ್ನ ಕುರುಕ್ಷೇತ್ರ ಸಿನಿಮಾ ಬಗ್ಗೆ ಹೆಚ್ಚು ಆಸಕ್ತಿ ತೋರಿ ಖರೀದಿ ಮಾಡಿಲ್ಲ ಎನ್ನಲಾಗುತ್ತಿದೆ.
ಇದು ಕೋಮಲ್ ಅವರಿಗೆ ವರವಾಗಿ ಪರಿಣಮಿಸಿದೆ. ಹೌದು ಕೋಮಲ್ ಅವರ ಚಿತ್ರ ಕೆಂಪೆಗೌಡ 2, 200 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನವನ್ನು ಅನಾಯಾಸಗವಾಗಿ ಪಡೆದುಕೊಂಡಿದೆ. ಹೀಗಾಗಿ ಕೆಂಪೇಗೌಡ 2 ನಿಜಕ್ಕೂ ಉತ್ತಮ ಪ್ರದರ್ಶನ ಕಾಣುತ್ತಾ? ಅಥವಾ ಬಹುತಾರಾಗಣ ಚಿತ್ರದ ಮುಂದೆ ಮಕಾಡೆ ಮಲಗುತ್ತದೆಯಾ ಎನ್ನುವುದನ್ನು ಕಾದು ನೋಡಬೇಕಾಗಿದೆ.