ಸ್ಯಾಂಡಲ್‌ವುಡ್ ಜಗತ್ತಿನಲ್ಲಿ ಕ್ಯೂಟ್ ಕಪಲ್ ಎಂದರೆ ಅದು ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಎಂದೇ ಹೇಳಲಾಗುತ್ತದೆ. ಅಲ್ಲದೇ ಅವರಿಬ್ಬರ ಕೆಮಿಸ್ಟ್ರಿ ನೋಡಿದರೆ, ಹೀರೋ-ಹೀರೋಯಿನ್ ಅವರು ಹೀಗೆಯೇ ಇರಬೇಕು ಎಂದು ಹೇಳುತ್ತಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಗಂಡ-ಹೆಂಡತಿ ಅಂದರೆ ಇಬ್ಬರೂ ಹೀಗಿರಬೇಕು ಎಂದು ಹೇಳುವವರೇ ಹೆಚ್ಚು. ಅಷ್ಟರ ಮಟ್ಟಿಗೆ ರಾಧಿಕಾ-ಯಶ್ ಅವರ ಜೋಡಿ ಫೇಮಸ್ ಆಗಿದೆ.
ಅಷ್ಟಕ್ಕೂ ರಾಧಿಕಾ ಹಾಗೂ ಯಶ್ ಅವರ ಮಧ್ಯೆ ಲವ್ ಆಗಿದ್ದಾದರೂ ಹೇಗೆ? ನಂತರ ಅವರಿಬ್ಬರೂ ಮದುವೆ ಆಗಿದ್ದೇ ಒಂದು ವಿಶೇಷ ಸ್ಟೋರಿ. ಮೊದಲಿಗೆ ಇಬ್ಬರೂ ಒಂದೇ ಧಾರಾವಹಿಯಲ್ಲಿ ಅಭಿನಯಿಸಿದ್ದರು. ನಂತರ ಒಂದೇ ಸಿನಿಮಾದ ಮೂಲಕವೇ ತೆರೆ ಮೇಲೆ ಕಾಣಿಸಿಕೊಂಡರು. ಹೀಗೆ ಇಬ್ಬರೂ ಟಾಪ್ ನಟ-ನಟಿಯಾಗಿ ಬೆಳೆದು ಬಂದರು. ಆದರೆ ಈ ಮಧ್ಯೆ ಅವರು ನಡೆದು ಬಂದ ಪ್ರಯಾಣ ಮಾತ್ರ ತುಂಬ ವಿಶೇಷ.
ಹೌದು, ರಾಧಿಕಾ-ಯಶ್ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದು ಈ ಹಿಂದೆಯೇ. ಹಲವಾರು ವರ್ಷಗಳ ಕಾಲ ಪ್ರೀತಿಸಿ ಪರಸ್ಪರ ಅರ್ಥೈಸಿಕೊಂಡ ಇಬ್ಬರೂ ಕೊನೆಗೆ ಹಸೆಮಣೆ ಏರಿದರು. ಈ ಇಬ್ಬರ ಮಧ್ಯೆಯೂ ಅಗಾಧವಾದ ಪ್ರೀತಿ ಸ್ನೇಹ ಇದೆ. ಇಬ್ಬರ ಪ್ರೀತಿ ಬಗ್ಗೆ ಎಲ್ಲರಿಗೂ ಗೊತ್ತಿರೋದು ಸಹಜ. ಹೌದು ಇತ್ತೀಚೆಗೆ ರಾಧಿಕಾ ಅವರು ಅದ್ಯಾಕೆ ಯಶ್ ಅವರನ್ನು ಮದುವೆ ಆದರು ಅನ್ನೋದನ್ನು ಅವರು ಬಹಿರಂಗಪಡಿಸಿದ್ದಾರೆ.
ಯಾರನ್ನೇ ಯಾರಾದರೂ ಇಷ್ಟಪಡಬೇಕಾದರೆ ಒಂದು ಕಾರಣ ಇರುತ್ತದೆ. ಹಾಗೆಯೇ ಮದುವೆ ಆಗಬೇಕಾದರೂ ಒಂದು ಕಾರಣ ಇರುತ್ತದೆ. ರಾಧಿಕಾ ಪಂಡಿತ್ ಅವರು ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಹಾಕಿದ್ದರು. ಅದರಲ್ಲಿ ಅದ್ಯಾಕೆ ಯಶ್ ಅವರನ್ನೇ ಮದುವೆ ಆದೆ ಅನ್ನೋದನ್ನು ಅವರು ಬಹಿರಂಗಪಡಿಸಿದ್ದಾರೆ.
ಹೌದು, 'ಜೀವನ ಬೆಸ್ಟ್ ಫ್ರೆಂಡ್ ಜೊತೆಗೆ ಇದ್ದರೆ ಚೆನ್ನಾಗಿರುತ್ತದೆ ಎಂದು ಹೇಳುತ್ತಾರೆ. ಅದಕ್ಕೆ ನಾನು ನನ್ನ ಬೆಸ್ಟ್ ಫ್ರೆಂಡ್ ಅವರನ್ನೇ ಮದುವೆ ಮಾಡಿಕೊಂಡೆ' ಎಂದು ಹೇಳಿದ್ದಾರೆ. 2017ರ ಡಿಸೆಂಬರ್ 9 ರಂದು ಯಶ್-ರಾಧಿಕಾ ಮದುವೆ ಆಗಿದ್ದರು. ಕುಟುಂಬದವರು, ಆಪ್ತರು, ಸ್ನೇಹಿತರು ಮತ್ತು ಚಿತ್ರರಂಗದ ಗಣ್ಯರು ಇಬ್ಬರ ಮದುವೆಗೆ ಸಾಕ್ಷಿಯಾಗಿದ್ದರು.ಇದಾದ ಮೇಲೆ ಡಿಸೆಂಬರ್ 10 ರಂದು ಅರಮನೆ ಮೈದಾನದಲ್ಲಿ ಅದ್ದೂರಿ ಆರತಕ್ಷತೆ ಮಾಡಿಕೊಂಡಿದ್ದರು. ಹೀಗೆ ಪ್ರೀತಿಯಿಂದ ಆರಂಭವಾಗಿ ಮದುವೆ ಮಾಡಿಕೊಂಡು ನಂತರ, ಮಗುವನ್ನೂ ಪಡೆದಿದ್ದಾರೆ.