ಇನ್‌ಫೋಸಿಸ್ ಫೌಂಡೇಶನ್‌ನ ಸುಧಾ ಮೂರ್ತಿ ಇದೀಗ ಮತ್ತ ಸುದ್ದಿಯಲ್ಲಿದ್ದಾರೆ. ಹೌದು ಉತ್ತರ ಕರ್ನಾಟಕ, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಉಂಟಾಗಿರುವ ಪ್ರವಾಹದಿಂದ ಸಂಕಷ್ಟ ಅನುಭವಿಸುತ್ತಿರುವ ಸಂತ್ರಸ್ತರಿಗೆ 10 ಕೋಟಿ ನೆರವು ನೀಡೋಕೆ ಮುಂದೆ ಬಂದಿದ್ದಾರೆ. ಇಷ್ಟೇ ಅಲ್ಲದೇ ನಿರಾಶ್ರಿತರಿಗೆ ಮನೆ ಕಟ್ಟಿ ಕೊಡುವುದಕ್ಕೆ ನೆರವು ನೀಡುವುದಾಗಿ ಅವರು ಹೇಳಿದ್ದಾರೆ. 

ನಮ್ಮ ರಾಜ್ಯದಲ್ಲೇ ಅಷ್ಟೇ ಅಲ್ಲದೇ ದೇಶದಲ್ಲಿ ಹೀಗೆ ಯಾವುದೇ ಪರಿಸರ ವಿಕೋಪ ಆದರೂ ಅದಕ್ಕೆ ಸ್ಪಂಧಿಸುವುದರಲ್ಲಿ ಇನ್‌ಫೋಸಿಸ್ ಎತ್ತಿದ ಕೈ. ಹೌದು ಇದೀಗ ಸಹಜವಾಗಿಯೇ ಅವರು ಮತ್ತೊಮ್ಮೆ ಸ್ಪಂಧನೆ ಮಾಡಿದ್ದಾರೆ. ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಗದಗ, ಚಿಕ್ಕಮಗಳೂರು, ಹಾವೇರಿ, ಶಿವಮೊಗ್ಗ, ಹಾವೇರಿ, ಬೀದರ್, ಚಿಕ್ಕೋಡಿ, ರಾಯಚೂರು, ಬಾಗಲಕೋಟೆ, ಯಾದಗಿರಿ, ವಿಜಯಪುರ, ಕೊಪ್ಪಳ, ಧಾರವಾಡ, ಹಾಸನ, ಉಡುಪಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಅತಿಯಾದ ಮಳೆ ಸುರಿಯುತ್ತಿದೆ. 

ಈ ಹಿಂದೆಯೂ ಫೆಬ್ರುವರಿಯಲ್ಲಿ ಪುಲ್ವಾಮಾ ದಾಳಿ ನಡೆದಿತ್ತು. ಅದರಲ್ಲಿ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಎಲ್ಲ ಯೋಧರ ಕಟುಂಬಗಳಿಗೆ ಇನ್‌ಫೋಸಿಸ್ ಪ್ರತಿ‍ಷ್ಠಾನದ ಸುಧಾ ಮುರ್ತಿ ಅವರು ಹತ್ತು ಲಕ್ಷ ರೂ ಹಣವನ್ನು ನೆರವು ನೀಡಿದ್ದರು. ಕೊಡಗಿನಲ್ಲಿ ಉಂಟಾದ ಪ್ರವಾಹದಲ್ಲಿ ಸುಧಾಮೂರ್ತಿ ಅವರು ಸಹ ನೆರವು ನೀಡಿದ್ದರು.  

ಸುಧಾಮೂರ್ತಿ ಅವರು ಈ ರೀತಿ ಸಹಾಯ ಮಾಡುವ ಗುಣದಿಂದಲೇ ಹೆಸರುವಾಗಿಯಾದವರು. ಇನ್ನು ವಿದ್ಯಾಪೋಷಕ ಅನ್ನೋ ಸರ್ಕಾರೇತರ ಸಂಸ್ಥೆಯಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರು ಶಿಕ್ಷಣದಕ್ಕೆ ಸಹಾಯ ಮಾಡುತ್ತಿದ್ದಾರೆ. ಇದೀಗ ಉತ್ತರ ಕರ್ನಾಟಕದಲ್ಲಿ ಹಾಗೂ ದಕ್ಷಿಣದ ಕೆಲವು ಭಾಗಗಳಲ್ಲಿ ಉಂಟಾಗಿರುವ ನೆರೆ ಪ್ರವಾಹ ಉಂಟಾಗಿದೆ. ಇದರಿಂದ ಅನೇಕರು ಮನೆ-ಮಠ ಕಳೆದುಕೊಂಡಿದ್ದಾರೆ. 

ಇನ್ನು ಹಲವರಿಗೆ ತಿನ್ನೋಕೆ ಅನ್ನವಿಲ್ಲದೇ ಕಷ್ಟ ಪಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮಾನವೀಯತೆ ದೃಷ್ಟಿಯಿಂದ ರಾಜ್ಯದ ಇತರ ಜಿಲ್ಲೆಗಳ ಜನರು ಸ್ಪಂದನೆ ಮಾಡುತ್ತಿದ್ದಾರೆ. ಸಂತ್ರಸ್ತರಿಗೆ ಅಗತ್ಯವಾದಂತ ಎಲ್ಲ ವಸ್ತುಗಳನ್ನು ನೀಡುತ್ತಿದ್ದಾರೆ. ಹೀಗಾಗಿ ಆದಷ್ಟು ಬೇಗ ಎಲ್ಲರೂ ಚೇತರಿಸಿಕೊಳ್ಳಲಿ ಎಂದು ಅನೇಕರು ಪ್ರಾರ್ಥನೆ ಮಾಡುತ್ತಿದ್ದಾರೆ. 


Find out more: