ಮೀಟೂ ಅಭಿಯಾನದ ನಂತರ ಶೃತಿ ಹರಿಹರನ್ ಅವರು ಚಿತ್ರರಂಗದಿಂದ ದೂರ ಉಳಿದಿದ್ದರು. ಅಲ್ಲದೇ ಅವರು ಇತ್ತೀಚೆಗೆ ಗರ್ಬಿಣಿಯಾಗಿ ಬೇಬಿ ಬಂಪ್ ತೋರಿಸಿದ್ದರು. ಅಲ್ಲದೇ ನಾತಿಚರಾಮಿ ಚಿತ್ರದ ಅಭಿನಯದ ಮೂಲಕ ಅನೇಕ ಸಿನಿ ಪ್ರೇಕ್ಷಕರ ಗಮನವನ್ನು ಸೆಳೆದಿದ್ದರು. ಇದೀಗ ನಾತಿಚರಾಮಿ ಚಿತ್ರತಂಡಕ್ಕೆ ಸರ್ಪ್ರೈಸ್ ಸಿಕ್ಕಿದೆ. ಶೃತಿ ಹರಿಹರನ್ ಅವರಿಗೂ ಸಹ ಒಂದು ದೊಡ್ಡ ಗಿಫ್ಟ್ ಸಿಕ್ಕಿದೆ. ಹಾಗಾದರೆ ಯಾವುದು ಆ ಗಿಫ್ಟ್‌ ಇಲ್ಲಿದೆ ನೋಡಿ. 

ಹೌದು ಶೃತಿ ಹರಿಹರನ್ ಅವರು ಅಭಿನಯಿಸಿದ್ದ ನಾತಿಚರಾಮಿ ಚಿತ್ರಕ್ಕೆ ಐದು ರಾಷ್ಟ್ರ ಪ್ರಶಸ್ತಿ ಪ್ರಕಟವಾದವು. ಈ ಐದರಲ್ಲಿ ಶೃಇ ಹರಿಹರನ್ ಅವರ ಅಭಿನಯ ಗುರುತಿಸಿ ಅವರಿಗೆ ವಿಶೇಷ ಜ್ಯೂರಿ ರಾಷ್ಟ್ರ ಪ್ರಶಸ್ತಿ ದೊರಕಿದೆ. ಹೀಗಾಗಿ ಶೃತಿ ಹರಿಹರನ್ ಇದೀಗ ಖುಷಿಯಲ್ಲಿದ್ದಾರೆ. ನಾತಿಚರಾಮಿ ಚಿತ್ರತಂಡಕ್ಕೆ ಈ ರಾಷ್ಟ್ರ ಪ್ರಶಸ್ತಿ ಸಿಕ್ಕಿರೋದು ನಿಜಕ್ಕೂ ಕನ್ನಡಿಗರಿಗೆ ಹೆಮ್ಮೆಯನ್ನುಂಟು ಮಾಡಿದೆ. 

ಶೃತಿ ಹರಿಹರನ್ ಅವರಿಗೆ ಎರಡೆರಡು ಖುಷಿ ಸಿಕ್ಕಿದೆ. ಒಂದು ರಾಷ್ಟ್ರ ಪ್ರಶಸ್ತಿ ಅನ್ನೋದು ಈಗಾಗಲೇ ಹೇಳಿದ್ದೇವೆ. ಮತ್ತೊಂದು ಏನೆಂದರೆ, ಶೃತಿ ಹರಿಹರನ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಹೌದು ಹೀಗಾಗಿ ಶೃತಿ ಹರಿಹರನ್ ಅವರು ಎರಡೆರಡು ಖುಷಿಯನ್ನು ಇದೀಗ ಅನಭವಿಸುತ್ತಿದ್ದಾರೆ. ಒಟ್ಟಾರೆ ಚಿತ್ರದಲ್ಲಿ ಅವರು ಮಾಡಿದ ಅಭಿನಯಕ್ಕೆ ಮನಸೋಲದವರೇ ಇಲ್ಲದಿಲ್ಲವೇನೋ. ಅಷ್ಟೊಂದು ಚೆಂದವಾಗಿ ಹಾಗೂ ಪ್ರೌಢಿಮೆಯಿಂದ ಅಭಿನಯಿಸಿದ್ದರು. 

ಶೃತಿ ಹರಿಹರನ್ ಅವರಿಗೆ ಹೆಣ್ಣು ಮಗು ಆಗಲಿ ಅನ್ನೋ ಆಸೆ ಇತ್ತಂತೆ. ನಿರೀಕ್ಷೆಯಂತೆ ಅವರಿಗೆ ಹೆಣ್ಣು ಮಗುವೆ ಜನಿಸಿದೆ. ಹೀಗಾಗಿ ಶೃತಿ ಅವರಿಗೆ ಸಹಹಜವಾಗಿಯೇ ಖುಷಿ ಆಗಿದೆ. ಶೃತಿಗೆ ಮಾತ್ರವಲ್ಲ ಅವರ ಮನೆಯವರಿಗೂ ಸಹ ಹೆಣ್ಣು ಮಕ್ಕಳು ಆಗಿದ್ದು ಖುಷಿ ತಂದಿದೆ. ಹೀಗಾಗಿ ಇದು ಇಡೀ ಕುಟುಂಬದ ಸಂತಸವನ್ನೇ ಹೆಚ್ಚು ಮಾಡಿದೆ ಎನ್ನಲಾಗುತ್ತಿದೆ. 

ಹಾಗಾದರೆ ನಾತಿಚರಾಮಿ ಚಿತ್ರಕ್ಕೆ ಯಾವೆಲ್ಲ ವಿಭಾಗಕ್ಕೆ ಪ್ರಶಸ್ತಿ ದೊರಕಿದೆ ಅನ್ನೋದನ್ನು ನೋಡೊದಾದರೆ, ಒಂದು ಅತ್ಯುತ್ತಮ ಪ್ರಾದೇಶಿಕ ಕನ್ನಡ ಸಿನಿಮಾ, ಎರಡು ಅತ್ಯುತ್ತಮ ಎಡಿಟಿಂಗ್ ಇನ್ನು ಮೂರು ಅತ್ಯುತ್ತಮ ಹಿನ್ನಲೆ ಗಾಯಕಿ, ನಾಲ್ಕು ಅತ್ಯುತ್ತಮ ಸಾಹಿತಿ ಇದರ ಜೊತೆಗೆ ಶ್ರುತಿ ಹರಿಹರನ್ ಅವರಿಗೆ ತೀರ್ಪುಗಾರರ ವಿಶೇಷ ಪ್ರಶಸ್ತಿ ಲಭಿಸಿದೆ. ಹೀಗಾಗಿ ಒಟ್ಟು ಐದು ಪ್ರಶಸ್ತಿಯನ್ನು ನಾತಿಚರಾಮಿ ಚಿತ್ರತಂಡ ತನ್ನ ಮುಡಿಗೇರಿಸಿಕೊಂಡಿದೆ.



Find out more: