ಕುರುಕ್ಷೇತ್ರ ಸಿನಿಮಾ ಸ್ಯಾಂಡಲ್‌ವುಡ್ ಇಂಡಸ್ಟ್ರಿಯಲ್ಲಿ ಬಿಡುಗಡೆಗೆ ಮುನ್ನವೇ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು. ಅಷ್ಟಕ್ಕೂ ಈ ಚಿತ್ರ ಶುಕ್ರವಾರವೇ ಬಿಡುಗಡೆ ಆಗಿದೆ. ಕೇವಲ ಎರಡು ಭಾಷೆಗಳಲ್ಲಿ ಮಾತ್ರವೇ ಕುರುಕ್ಷೇತ್ರ 3ಡಿಯಲ್ಲಿ ಬಿಡುಗಡೆ ಆಗಿದೆ. ಚಿತ್ರ ಬಿಡುಗಡೆಗೂ ಮುನ್ನವೇ ಮಾಡಿದಂತ ಸದ್ದನ್ನು ಬಿಡುಗಡೆಯ ನಂತರ ಮಾಡುತ್ತಿಲ್ಲ ಎನ್ನುವ ಅನುಮಾನಗಳು ಕಾಡುತ್ತಿವೆ. 

ದುರ್ಯೋದನನ ಸಭಾ ಪ್ರವೇಶದೊಂದಿಗೆ ಈ ಸಿನಿಮಾ ಆರಂಭ ಆಗುತ್ತದೆ. ದುರ್ಯೋಧನನಿಗೆ ಬಹುಪರಾಕ್ ಹೇಳುವ ಚಿತ್ರಗೀತೆಯೊಂದಿಗೆ ಈ ಸಿನಿಮಾದ ಪ್ರಥಮ ಸಂಭಾಷಣೆ ಇದೆ. ಇದು ಬೀಷ್ಮನ ಮಾತುಗಳು. ಅಷ್ಟಕ್ಕೂ ಬೀಷ್ಮನ ಪಾತ್ರವನ್ನು ಮಾಡಿದವರು ಬೇರೆ ಯಾರೂ ಅಲ್ಲ ಅದು ರೆಬೆಲ್ ಸ್ಟಾರ್ ಅಂಬರೀಶ್ ಅವರು. ಈ ಚಿತ್ರದಲ್ಲಿ ದುರ್ಯೋಧನನಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದೆ. 

ಅದರ ಜೊತೆಗೆ ಐದು ಪಾತ್ರಗಳು ಪ್ರಾಮುಖ್ಯತೆ ಪಡೆದುಕೊಂಡಿವೆ. ಆ ಐದು ಪಾತ್ರಗಳು.. ಬೀಷ್ಮ, ಶ್ರೀಕೃಷ್ಣ, ಶಕುನಿ ಮತ್ತು ಅಭಿಮನ್ಯು. ಹೀಗಾಗಿ ಈ ಐದು ಪಾತ್ರಗಳನ್ನು ತುಂಬ ಗಟ್ಟಿಯಾಗಿ ಕಟ್ಟಿಕೊಡಲಾಗಿದೆ. ಮಹಾಭಾರತದ ಬಗ್ಗೆ ಭಾರತೀಯರು ಚಿಕ್ಕವರಿರುವಾಗಲೇ ಕೇಳಿಕೊಂಡು ಬೆಳೆದಿರುವುದರಿಂದಲೇ ಇದರ ಬಗ್ಗೆ ಗೊಂದಲ ಉಂಟಾಗುವುದಿಲ್ಲ. ಆದರೆ ಈ ಚಿತ್ರವು ಪಾತ್ರಗಳನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟಿಕೊಡಬೇಕು ಎಂದೆನಿಸುತ್ತದೆ. 

ಚಿತ್ರದ ಆಕರ್ಷಣೆ ಎಂದರೆ ಅದು ದರ್ಶನ್ ಅವರ ದುರ್ಯೋದನನ ಪಾತ್ರ. ದುರ್ಯೋಧನನ ಪಾತ್ರಕ್ಕೆ ನಿಜಕ್ಕೂ ದರ್ಶನ್ ಅವರು ನ್ಯಾಯ ಒದಗಿಸಿ ಕೊಟ್ಟಿದ್ದಾರೆ. ಆದರೆ ಇದೂ ದುರ್ಯೋದನ ತೀವ್ರತೆಯನ್ನು ಚಿತ್ರಕತೆಗಾರರು ಸರಿಯಾಗಿ ಹಿಡಿದಿಟ್ಟಿಲ್ಲ. ಇದೇ ಕಾರಣಕ್ಕೆ ಇದನ್ನು ದರ್ಶನ್ ಅವರ ಕುರುಕ್ಷೇಥ್ರ ಎನ್ನುವುದಕ್ಕಿಂತ ಮುನಿರತ್ನ ಕುರುಕ್ಷೇತ್ರ ಎಂದು ಕರೆಯಬಹುದು. ಇನ್ನು ಬೀಷ್ಮನಾಗಿ ಅಭಿನಯಿಸಿರೋದು ಅಂಬರೀಶ್. ಇದು ಅವರ ಕೊನೆಯ ಚಿತ್ರ ಎನ್ನುವ ಕಾರಣಕ್ಕೆ ಅಂಬರೀಶ್ ಅಭಿಮಾನಿಗಳು ಈ ಚಿತ್ರವನ್ನು ನೋಡಬಹುದು. 

ನಿಖಿಲ್ ಕುಮಾರಸ್ವಾಮಿ ಅಭಿಮನ್ಯುವಾಗಿ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕರಾವಳಿಯಲ್ಲಿ ಪೌರಾಣಿಕಯಕ್ಷಗಾನದೊಳಗೆ ಪ್ರಸ್ತುತ ಸನ್ನಿವೇಶವನ್ನು ತುರುಕುವುದನ್ನು ನೋಡಿದ್ದೇವೆ. ಅದೇ ರೀತಿಯಲ್ಲಿಯೇ ಇಲ್ಲಿಯೂ ಒಂದು ಪ್ರಯತ್ನ ನಡೆದಿದೆ ಎನ್ನಬಹುದು. ಇನ್ನು ಅಭಿಮನ್ಯುವಿಗೆ ನೀಡಲಾದ ಹಾಡು ಆಧೂನಿಕತೆಯಂತೆ ಮೂಡಿ ಬಂದಿದೆ. ಆದರೆ ರಣರಂಗದಲ್ಲಿ ನಿಖಿಲ್ ಅವರು ಹೋರಾಡುತ್ತಿರುವ ದೃಶ್ಯವಂತೂ ಕಣ್ಣಿಗೆ ಹಬ್ಬದಂತೆ ಆಗುವುದರಲ್ಲಿ ಯಾವುದೇ ಎರಡು ಮಾತಿಲ್ಲ ಎಂದೇ ಹೇಳಬಹುದು. ಇದರ ಜೊತೆಗೆ ಶ್ರೀಕೃಷ್ಣನಾಗಿ ರವಿಚಂದ್ರನ್ ಅವರು ಅಭಿನಯಿಸಿದ್ದಾರೆ. ಕೃಷ್ಭನ ಪಾತ್ರಕ್ಕೆ ಇವರೇ ಸೂಕ್ತ ವ್ಯಕ್ತಿ ಎಂದರೆ ತಪ್ಪಿಲ್ಲ.


Find out more: