ಕಾಮಿಡಿ ನಟನಾಗಿದ್ದ ಕೋಮಲ್ ಕೇಂಪೇಗೌಡ ಚಿತ್ರದ ಮೂಲಕ ಮತ್ತೊಮ್ಮೆ ಪೂರ್ಣಪ್ರಮಾಣದ ಹೀರೋ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇದೀಗ ಅವರು ಸುದ್ದಿಯಾಗಿರೋದು ತಮ್ಮ ಸಿನಿಮಾದಿಂದ ಅಲ್ಲ, ಬದಲಾಗಿ ಅವರ ಮೇಲೆ ನಿನ್ನೆ ನಡೆದ ಹಲ್ಲೆಯಿಂದ. ಹೌದು, ಅವರ ಚಿತ್ರ ಕೆಂಪೇಗೌಡ ಬಿಡುಗಡೆ ಆಗಿ ಒಂದು ವಾರವೂ ಆಗಿಲ್ಲ. ಅಷ್ಟರಲ್ಲಿಯೂ ಕೋಮಲ್ ಅವರ ಮೇಲೆ ಹಲ್ಲೆ ನಡೆದಿದೆ. ಇದು ಹಲವಾರು ಅನುಮಾನಗಳಿಗೆ ಎಡೆ ಮಾಡಿದೆ.
ಯಾವಾಗ ಕುರುಕ್ಷೇತ್ರ ಚಿತ್ರ ಆಗಸ್ಟ್ 9 ರಂದು ಬಿಡುಗಡೆ ಆಗುತ್ತೆ ಅಂತ ಗೊತ್ತಾಯಿತೋ, ಆಗಲೇ ಕೋಮಲ್ ಅವರಿಗೆ ಆತಂಕ ಶುರುವಾಗಿತ್ತು. ತಮ್ಮ ಚಿತ್ರ ಬಿಡುಗಡೆ ದಿನವೇ ಬಿಗ್ ಬಜೆಟ್ ಬಹುತಾರಾಗಣ ಚಿತ್ರ ಕುರುಕ್ಷೇಥ್ರದ ಬಿಡುಗಡೆ ಬಗ್ಗೆ ಕೋಮಲ್ ಅವರು ಅಸಮಾಧಾನವನ್ನು ಹೊರ ಹಾಕಿದ್ದರು. ನಾನು ಬಿಡುಗಡೆ ಮಾಡುತ್ತಿರುವ ದಿನದಂದೇ ಯಾಕೆ ಕುರುಕ್ಷೇತ್ರ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ ಎಂದು ಗರಂ ಆಗಿದ್ದರು.
ಇನ್ನು ಒಂದು ಹೆಜ್ಜೆ ಮುಂದೆ ಹೋಗಿ, ಬೇರೆಯವರ ಗಾಡಿ ಮುಂದೆ ಹೋಗಿ ನಾನು ಗುದ್ದಿದರೆ ನನ್ನ ತಪ್ಪು. ಆದರೆ ನನ್ನ ಪಾಡಿಗೆ ನಾನು ಹೋಗುವಾಗ ಬೇರೆಯವರ ಗಾಡಿ ಬಂದು ನನ್ನನ್ನು ಗುದ್ದುವ ಪ್ರಯತ್ನ ಮಾಡಲಲಾಗುತ್ತಿದೆ ಎಂದು ಉದಾಹರಣೆ ನೀಡುವ ಮೂಲಕ ಕೋಮಲ್ ಅವರು ಅಸಮಾಧಾನ ವ್ಯಕ್ತೊಪಡಿಸಿದ್ದರು. ಅವರು ಉದಾಹರಣೆ ಕೊಟ್ಟ ರೀತಿಯಲ್ಲಿಯೇ ಇದೀಗ ರಂಪಾಟ ನಡೆದಿರೋದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಈ ಪ್ರಕರಣದ ಕುರಿತು ನಟ ಜಗ್ಗೇಶ್ ಸಹ ಮಾತನಾಡಿದ್ದಾರೆ. ಚಿತ್ರರಂಗದವರ ಕೈವಾಡ ಇರಬಹಹುದು ಎನ್ನುವ ಅನುಮಾನವನ್ನೂ ಅವರು ವ್ಯಕ್ತಪಡಿಸಿದ್ದಾರೆ. ನಮ್ಮ ಇಂಡಸ್ಟ್ರಿಯವರೇ ಈ ಕೆಲಸವನನ್ನು ಮಾಡಿಸಿದ್ದರೆ ಅವರನನ್ನು ಖಂಡಿತ ನಾನು ಸುಮ್ಮನೆ ಬಿಡುವುದಿಲ್ಲ ಎನ್ನುವ ಎಚ್ಚರಿಕೆಯ ಮಾತುಗಳನ್ನೂ ಅವರು ಹೇಳಿದ್ದಾರೆ.
ನಟ ಜಗ್ಗೇಶ್ ಅವರ ಕುಟಂಬದ ಮೇಎ ಈ ಹಿಂದೆ ಇಂತಹುದೇ ದಾಳಿ ನಡೆದಿತ್ತು. ಅವರ ಹಿರಿಯ ಮಗ ಗುರುರಾಜ್ ಅವರ ಮೇಲೆ ಕಿಡಿಗೇಡಿ ಒಬ್ಬ ಚಾಕುನಿಂದ ಇರಿಯಲು ಮುಂದಾಗಿದ್ದ. ಹೌದು 2017ರ ಆಗಸ್ಟ್ 14 ರಂದು ಈ ಘಟನೆ ನಡೆದಿತ್ತು. ಇದೀಗ ಜಗ್ಗೇಶ್ ಅವರ ತಮ್ಮನ ಮೇಲೆ ಹಲ್ಲೆ. ಇದೆಲ್ಲವನ್ನೂ ನೋಡಿದರೆ ಏನೋ ಒಂದು ಸಾಮ್ಯತತೆ ಇದೆ ಎಂದು ಕಂಡು ಬರುತ್ತಿರೋದು ಸುಳ್ಳಲ್ಲ